logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zippily
ಕ್ರಿಯಾವಿಶೇಷಣ
ಬಲವಾಗಿ; ಜೋರಾಗಿ.

zippiness
ನಾಮವಾಚಕ
ಬಲವಾಗಿರುವಿಕೆ; ಜೋರು.

zippy
ಗುಣವಾಚಕ
( ತರರೂಪ zippier, ತಮರೂಪ zippiest). ಬಲವಾದ; ಜೋರಿನ; ಸತ್ತ ವುಳ್ಳ; ಚೈತನ್ಯವುಳ್ಳ; ಹುರುಪಿನ.

zircon
ನಾಮವಾಚಕ
ಸರ್ಕನ್‍; ರಾಸಾಯನಿಕವಾಗಿ ಜಿರ್ಕೋನಿಯಮ್‍ ಸಿಲಿಕೇಟ್‍ ಆದ, ಅದರ ಅರೆಪಾರಕ ಬಗೆಯನ್ನು ರತ್ನವಾಗಿ ಬಳಸುವ, ಒಂದು ನೈಸರ್ಗಿಕ ಖನಿಜ ಪದಾರ್ಥ.

zirconium
ನಾಮವಾಚಕ
(ರಸಾಯನವಿಜ್ಞಾನ) ಜಿರ್ಕೋನಿಯಮ್‍; ನೈಸರ್ಗಿಕವಾಗಿ ಜಿರ್ಕಾನ್‍ (zircon) ನಲ್ಲಿ ದೊರೆಯುವ, ಪರಮಾಣು ಸಂಖ್ಯೆ 40, ಪರಮಾಣು ತೂಕ 91 ಇರುವ ಲೋಹ ಧಾತು, ಸಂಕೇತ Zr.

zit
ನಾಮವಾಚಕ
(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಅಶಿಷ್ಟ) ಮೊಡವೆ; ಗುಳ್ಳೆ.

zither
ನಾಮವಾಚಕ
ಜಿದರ್‍ (ವಾದ್ಯ); ಪೊಳ್ಳು ನಾದಪೆಟ್ಟಿಗೆಯ ಮೇಲೆ ಹಲವಾರು ತಂತಿಗಳನ್ನು ಅಳವಡಿಸಿದ್ದು, ಬೆರಳಿನಿಂದ ಮೀಟಿ ನುಡಿಸುವಂಥ, ಒಂದು ರೀತಿಯ ಸಿತಾರ್‍ ವಾದ್ಯ.

zitherist
ನಾಮವಾಚಕ
ಜಿದರ್‍ ವಾದಕ; ಜಿದರ್‍ ನುಡಿಸುವವನು.

zizz
ನಾಮವಾಚಕ
  • ವಿಸ್‍; ಝೇಂಕರಿಸುವ ಶಬ್ದ.
  • ತೂಕಡಿಕೆ; ಸಣ್ಣ ನಿದ್ದೆ.

  • zizz
    ಅಕರ್ಮಕ ಕ್ರಿಯಾಪದ
  • ವಿಸ್‍ ಎಂಬ ಶಬ್ದ ಮಾಡು.
  • ತೂಕಡಿಸು; ಸಣ್ಣ ನಿದ್ದೆ ಮಾಡು.


  • logo