ಅಮ್; ಉಂ; ಹಿಂಜರಿಕೆಯನ್ನು ಸೂಚಿಸುವ ಯಾ ಮಾತನಾಡುವಾಗ ಯಾ ಭಾಷಣದಲ್ಲಿ ತೆಗೆದುಕೊಳ್ಳುವ ವಿರಾಮವನ್ನು ಸೂಚಿಸುವ ಶಬ್ದ.
umbel
ನಾಮವಾಚಕ
(ಸಸ್ಯವಿಜ್ಞಾನ) ಪುಷ್ಪಛತ್ರ; ಛತ್ರಿ ಹೂಗೊಂಚಲು; ಹೂಕೊಡೆ; ಕೇಂದ್ರವೊಂದರಿಂದ ಹೊರಟ ಒಂದೇ ಉದ್ದದ ಹಲವಾರು ಕಾಂಡಗಳ ತುದಿಯಲ್ಲಿರುವ ಪುಷ್ಪಗಳು ಸೇರಿಕೊಂಡು ಚಪ್ಪಟೆ ಯಾ ಗೋಳದ ಮೇಲ್ಮೈ ಆಕಾರವನ್ನು ರೂಪಿಸುವ ಪುಷ್ಪಗುಚ್ಫ, ಹೂಗೊಂಚಲು, ಹೂಗೊಂಡೆ.
umbellar
ಗುಣವಾಚಕ
= umbellate.
umbellate
ಗುಣವಾಚಕ
ಪುಷ್ಪಛತ್ರಗಳನ್ನು ಯಾ ಛತ್ರಿಹೂಗೊಂಚಲುಗಳನ್ನು ಬಿಡುವ ಯಾ ಅವುಗಳನ್ನುಳ್ಳ ಯಾ ಅವುಗಳಂತೆ ವ್ಯವಸ್ಥೆಗೊಳಿಸಿದ.
(ರಚನೆಯಲ್ಲಿ) ಪುಷ್ಪಛತ್ರ ಯಾ ಹೂಗೊಂಚಲು ಛತ್ರಿಯನ್ನು ಹೋಲುವ.
umbellifer
ಗುಣವಾಚಕ
ಕೊಡೆಹೂಗಿಡ; ಪುಷ್ಪಛತ್ರ ಸಸ್ಯ; ಪಾರ್ಸ್‍ಲಿ ಯಾ ಅಚುಮೋದ ಮತ್ತು ಪಾರ್ಸ್‍ನಿಪ್ ಯಾ ಮೂಲಂಗಿಯಂಥ ಸಸ್ಯಗಳನ್ನು ಒಳಗೊಂಡ, ಪುಷ್ಪಛತ್ರಗಳನ್ನು ಬಿಡುವ, ಅಂಬಲಿಹರೀ ವಂಶಕ್ಕೆ ಸೇರಿದ ಗಿಡ.
umbelliferous
ಗುಣವಾಚಕ
ಹೂಕೊಡೆಗಳನ್ನು, ಪುಷ್ಪಛತ್ರಗಳನ್ನು ಬಿಡುವ.
ಕೊಡೆಹೂ ವಂಶದ ಯಾ ಅದಕ್ಕೆ ಸಂಬಂಧಿಸಿದ.
umbellule
ಗುಣವಾಚಕ
ಸಂಯುಕ್ತ ಪುಷ್ಪಛತ್ರ ಮಂಜರಿಯಲ್ಲಿ ಎರಡನೆಯ ಯಾ ಗೌಣ ಪುಷ್ಪಛತ್ರವುಳ್ಳ.