logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tackle-fall
ನಾಮವಾಚಕ
ಕಪ್ಪಿಗಳನ್ನು ಒಟ್ಟುಗೂಡಿಸುವ ಹಗ್ಗ.

tackler
ನಾಮವಾಚಕ
(ಕೆಲಸ, ತೊಂದರೆ, ಸಮಸ್ಯೆ, ಮೊದಲಾದವನ್ನು) ಎದುರಿಸುವವನು(ಳು); ನಿಭಾಯಿಸುವವನು(ಳು).

tackling
ನಾಮವಾಚಕ
  • ಕಪ್ಪಿಯೆತ್ತಿಗೆ ಮೊದಲಾದವುಗಳನ್ನು ನಿರ್ವಹಿಸುವುದು.
  • ಕಪ್ಪಿಯೆತ್ತಿಗೆ ಮೊದಲಾದವುಗಳಿಂದ ಸಜ್ಜುಗೊಳಿಸುವಿಕೆ.

  • tacky
    ಗುಣವಾಚಕ
    (ವಾರ್ನಿಷ್‍, ಬಣ್ಣ, ಮೊದಲಾದವುಗಳ ವಿಷಯದಲ್ಲಿ) ಅಂಟುವ; ಒಣಗಿರದ; ಇನ್ನೂ ಹಸಿಯಾಗಿರುವ.

    tacky
    ಗುಣವಾಚಕ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಆಡುಮಾತು)
  • ಕೀಳು ಅಭಿರುಚಿಯ; ನಿಕೃಷ್ಟ ರೀತಿಯ.
  • ಹರಕು ಕೊಳಕುಗಳುಳ್ಳ; ಚಿಂದಿ ಧರಿಸಿದ.
  • ಕೃಶವಾದ; ಕಾಯಿಲೆ ಬಂದಂತೆ ಕಾಣುವ.

  • taco
    ನಾಮವಾಚಕ
    ಸುರುಳಿ ಯಾ ಮಡಿಚು ರೊಟ್ಟಿಯಲ್ಲಿ ಮಾಂಸವಿಟ್ಟು ಬೇಯಿಸಿದ ಮೆಕ್ಸಿಕನ್‍ ತಿಂಡಿ.

    tact
    ನಾಮವಾಚಕ
  • ಔಚಿತ್ಯಪ್ರಜ್ಞೆ; ಸಮಯೋಪಾಯ; ಸಮಯೋಚಿತ ನಯ; ಯುಕ್ತಾಯುಕ್ತತೆಗಳನ್ನು ಗ್ರಹಿಸಿ ತಕ್ಕಂತೆ ವರ್ತಿಸುವ ಜಾಣ್ಮೆ.
  • (ವೈಯಕ್ತಿಕ ಇಷ್ಟಾನಿಷ್ಟಗಳಿಂದ ಒದಗುವ ತೊಂದರೆಗಳ ಜೊತೆ ಯಾ ಇತರರೊಡನೆ ವ್ಯವಹರಿಸುವಾಗ ತೋರಿಸುವ) ಚಾಕಚಕ್ಯತೆ; ಜಾಣ್ಮೆ; ಜಾಣತನ.

  • tactful
    ಗುಣವಾಚಕ
  • ಔಚಿತ್ಯಪ್ರಜ್ಞೆಯುಳ್ಳ; ಸಮಯೋಪಾಯವರಿತ; ಪ್ರತ್ಯುತ್ಪನ್ನ ಮತಿಯುಳ್ಳ.
  • (ವ್ಯವಹಾರ) ಜಾಣ್ಮೆಯ; ಚಾಕಚಕ್ಯತೆಯ; ಜಾಣತನದ.

  • tactfully
    ಕ್ರಿಯಾವಿಶೇಷಣ
  • ಔಚಿತ್ಯ ಪ್ರಜ್ಞೆಯಿಂದ; ಸಮಯೋಪಾಯವರಿತು.
  • (ವ್ಯವಹಾರ) ಜಾಣ್ಮೆಯಿಂದ; ಚಾಕಚಕ್ಯತೆಯಿಂದ.

  • tactfulness
    ನಾಮವಾಚಕ
  • (ವ್ಯವಹಾರದ) ಜಾಣ್ಮೆ; ಚಾಕಚಕ್ಯತೆ; ಜಾಣತನ.
  • ಔಚಿತ್ಯಪ್ರಜ್ಞೆ; ಸಮಯೋಪಾಯ ಜ್ಞಾನ.


  • logo