logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mad
ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಅಮೆರಿಕನ್‍ ಪ್ರಯೋಗ) ಸಕರ್ಮಕ ಕ್ರಿಯಾಪದ (ಪ್ರಾಚೀನ ಪ್ರಯೋಗ) ಹುಚ್ಚನಾಗು; ಹುಚ್ಚುಹುಚ್ಚಾಗಿ ವರ್ತಿಸು: the madding crowd ಹುಚ್ಚೆದ್ದ ಯಾ ಹುಚ್ಚುಹುಚ್ಚಾಗಿ ವರ್ತಿಸುವ ಜನರು, ಜನಸಂದಣಿ (ಈಗ ಸಾಮಾನ್ಯವಾಗಿ ‘ಹುಚ್ಚು ಹಿಡಿಸುವ’ ಎಂಬರ್ಥದಲ್ಲಿ ಪ್ರಯೋಗ).
  • ಹುಚ್ಚು ಹಿಡಿಸು; ತಲೆಕೆಡಿಸು; ಹುಚ್ಚಿಗೆಬ್ಬಿಸು.
  • ಕೋಪ ಬರಿಸು; ಸಿಟ್ಟಿಗೆಬ್ಬಿಸು.

  • mad doctor
    ನಾಮವಾಚಕ
    (ಪ್ರಾಚೀನ ಪ್ರಯೋಗ) ಹುಚ್ಚರ ವೈದ್ಯ.

    madam
    ನಾಮವಾಚಕ
  • ಶ್ರೀಮತಿಯವರೇ! ಅಮ್ಮಾ! ತಾಯಿ! (ಹೆಂಗಸನ್ನು ಸಂಬೋಧಿಸುವ ಪದ).
  • ಶ್ರೀಮತಿ (ಮರ್ಯಾದೆಯ ಒಕ್ಕಣೆಯಾಗಿ).
  • (ಸೌಮ್ಯೋಕ್ತಿ) ವೇಶ್ಯಾಗೃಹದ ಯಜಮಾನಿ, ಒಡತಿ; ಸೂಳೆಯ ಮನೆ ನಡೆಸುವವಳು.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ತಲೆಹರಟೆ ಹುಡುಗಿ.
    2. ದುರಹಂಕಾರದ ಹುಡುಗಿ.
    3. ಯುವತಿ.

  • Madame
    ನಾಮವಾಚಕ
    = madam (ಶಬ್ದದ ಹೆಂಚ್‍ ರೂಪ).

    madcap
    ನಾಮವಾಚಕ
    ಹುಚ್ಚಾಟದ ವ್ಯಕ್ತಿ; ಹುಚ್ಚುಹುಚ್ಚಾಗಿ ವರ್ತಿಸುವ ವ್ಯಕ್ತಿ.

    madcap
    ಗುಣವಾಚಕ
  • ಅವಿವೇಕದ; ಹುಚ್ಚಾಟದ; ಅವಿಚಾರಿ; ಹುಚ್ಚನಂತೆ ವರ್ತಿಸುವ.
  • ದುಡುಕಿನ; ಮುಂದಾಲೋಚನೆಯಿಲ್ಲದೆ ಮಾಡಿದ, ಕೈಗೊಂಡ.

  • madden
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಹುಚ್ಚುಹಿಡಿ; ಹುಚ್ಚನಂತಾಡು; ಹುಚ್ಚನಾಗು.
  • ಹುಚ್ಚು ಹಿಡಿಸು; ಹುಚ್ಚಿಗೆಬ್ಬಿಸು.
  • ರೇಗಿಸು; ಕೆರಳಿಸು.

  • maddening
    ಗುಣವಾಚಕ
  • ಹುಚ್ಚು ಹಿಡಿಸುವ; ಹುಚ್ಚೆಬ್ಬಿಸುವ.
  • ರೇಗಿಸುವ; ಕೆರಳಿಸುವ.

  • maddeningly
    ಕ್ರಿಯಾವಿಶೇಷಣ
  • ಹುಚ್ಚು ಹಿಡಿಸುವಂತೆ.
  • ರೇಗಿಸುವಂತೆ; ಕೆರಳಿಸುವ ರೀತಿಯಲ್ಲಿ.

  • madder
    ನಾಮವಾಚಕ
  • ಮ್ಯಾಡರ್‍; ನಸು ಹಳದಿ ಹೂ ಬಿಡುವ, ಮಂಜಿಷ್ಠೆ ಬಳಗದ ಒಂದು ಬಳ್ಳಿ.
  • ಅಲಿಸರಿನ್‍; ಮ್ಯಾಡರ್‍ ಬೇರಿನಿಂದ ಪಡೆದ ಯಾ ರಾಸಾಯನಿಕವಾಗಿ ತಯಾರಿಸಿದ ಒಂದು ಕೆಂಪು ವರ್ಣ ದ್ರವ್ಯ.


  • logo