logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lachrymator
ನಾಮವಾಚಕ
ಕಂಬನಿಸುರಿಕ; ಅಶ್ರುಸ್ರಾವಕ; ಅಶ್ರುಕಾರಕ; ಕಣ್ಣನ್ನು ಕೆರಳಿಸುವ ಯಾ ಕಂಬನಿ ಬರಿಸುವ ವಸ್ತು ಯಾ ಅನಿಲ.

lachrymatory
ಗುಣವಾಚಕ
(ಔಪಚಾರಿಕ)
  • ಕಣ್ಣೀರಿನ; ಕಂಬನಿಯ; ಅಶ್ರುವಿನ.
  • ಕಣ್ಣೀರು ಬರಿಸುವ; ಅಶ್ರುಕಾರಿ; ಅಶ್ರುಸ್ರಾವಕ.

  • lachrymatory
    ನಾಮವಾಚಕ
    ಕಣ್ಣೀರು ಸೀಸೆ; ಕಣ್ಣೀರು ದಾನಿ; ಪುರಾತನ ರೋಮನ್ನರ ಸಮಾಧಿಗಳಲ್ಲಿ ಕಂಡುಬರುವ, ಕಂಬನಿ ಪಾತ್ರೆಯೆಂದು ಭಾವಿಸಲಾಗಿರುವ ಗಾಜಿನ ಸಣ್ಣ ಸೀಸೆ.

    lachrymatory bomb
    ನಾಮವಾಚಕ
    ಕಣ್ಣೀರು ಬಾಂಬು; ಅಶ್ರು – ಬಾಂಬು, ಸ್ಫೋಟಕ; ಸಿಡಿದು, ಕಣ್ಣೀರು ಸುರಿಸುತ್ತಾ ನಿಶ್ಚೇತನವಾಗುವಂತೆ ಮಾಡುವ ಸಿಡಿಗುಂಡು, ಬಾಂಬು.

    lachrymose
    ಗುಣವಾಚಕ
    (ಔಪಚಾರಿಕ)
  • ಅಶ್ರುಪೂರ್ಣ; ಕಣ್ಣೀರು ತುಂಬಿದ; ಕಂಬನಿ ಸುರಿಸುವ.
  • ಅಳುವ; ಅಳುಬುರುಕ: a lachrymose fellow ಅಳುಬುರುಕ ಮನುಷ್ಯ.

  • lachrymosely
    ಕ್ರಿಯಾವಿಶೇಷಣ
  • ಕಣ್ಣೀರು ತುಂಬಿ; ಕಂಬನಿ ಸುರಿಸುತ್ತಾ.
  • ಅಳುತ್ತಾ.

  • lacily
    ಕ್ರಿಯಾವಿಶೇಷಣ
    ಕಸೂತಿಯಂತೆ; ಲೇಸನ್ನು ಯಾ ಕಸೂತಿ ಬಟ್ಟೆಯನ್ನು ಹೋಲುವಂತೆ.

    laciness
    ನಾಮವಾಚಕ
    ಕಸೂತಿ(ಬಟ್ಟೆ)ಯಂತಿರುವಿಕೆ.

    lacing
    ನಾಮವಾಚಕ
  • ಜರತಾರಿ ಹೆಣಿಗೆ; ಕಲಾಬತ್ತು ಮೊದಲಾದವುಗಳಿಂದ (ಮುಖ್ಯವಾಗಿ ಯೂನಿಹಾರ್ಮ್‍ಗಳನ್ನು) ಅಲಂಕರಿಸುವುದು.
  • (ಬೂಟ್ಸು ಮೊದಲಾದವನ್ನು ಕಟ್ಟುವ) ದಾರ; ಹುರಿ; ನವಾರ; ಲಾಡಿ.
  • ಕಸೂತಿಯ – ಜರತಾರಿ, ಕಲಾಬತ್ತು, ಸರಿಗೆ, ನೀರಾಜಿ, ಬಟ್ಟೆ, ಮೊದಲಾದವು.
  • (ಆಹಾರ ಯಾ ಪಾನೀಯಕ್ಕೆ ಬೆರೆಸಿದ) ಸ್ವಲ್ಪ ಪ್ರಮಾಣದ ಮದ್ಯ.
  • (ನೌಕಾಯಾನ) (ಹಾಯಿ ಮೊದಲಾದವನ್ನು ಕಟ್ಟಲು ಬರುವ) ಹುರಿ, ದಾರ, ಮೊದಲಾದವು.
  • ಹೊಡೆತ; ಬಡಿತ; ಏಟು.
  • (ಯಂತ್ರಶಾಸ್ತ್ರ) (ಕಬ್ಬಿಣದ ತೊಲೆ ಮೊದಲಾದವನ್ನು ಒಂದಕ್ಕೊಂದು ಜೋಡಿಸುವ) ಪಟ್ಟಿ, ಗಡಾರಿ, ಮೊದಲಾದವು.
  • (ಗಾರೆ ಕೆಲಸ) ನೊರಜು ಕಲ್ಲಿನ ಗೋಡೆಯೊಳಗಿನ ಒಂದು ವರಿಸೆಯ ಇಟ್ಟಿಗೆ ಸುತ್ತು ಯಾ ರಚನೆ.

  • laciniate
    ಗುಣವಾಚಕ
    (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಕ್ರಕಚ; ಕಚ್ಚುಕಚ್ಚು ಏಣಿನ; ಗರಗಸದ ಹಲ್ಲುಗಳಂತೆ ಕಚ್ಚುಕಚ್ಚಾದ ಏಣುಳ್ಳ, ಅಂಚುಳ್ಳ.


    logo