logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ichthyosaur
ನಾಮವಾಚಕ
= ichthyosaurus.

ichthyosaurus
ನಾಮವಾಚಕ
ಇಕ್ತಿಯಸಾರಸ್‍; ಈನುಗೌಳಿ; ದೊಡ್ಡತಲೆ, ಒಂದು ದಿಕ್ಕಿನಲ್ಲಿ ಚೂಪಾಗುವ ದೇಹ, ಉದ್ದಬಾಲ, ನಾಲ್ಕು ಈಜು ರೆಕ್ಕೆಗಳು ಇರುವ, ನಷ್ಟವಂಶದ ಒಂದು ಸಮುದ್ರಜೀವಿ.

ichthyosis
ನಾಮವಾಚಕ
ಇಕ್ತಿಯೋಸಿಸ್‍; ಮತ್ಸ್ಯವ್ಯಾಧಿ; ಈನುದೊಗಲು ರೋಗ; ಹೊರಚರ್ಮ ಹರುಕಲಾಗಿ ಈನಿನ ಹೊರಮೈಯಂತೆ ಚೆಕ್ಕೆಚೆಕ್ಕೆಯಂತಾಗುವ ಒಂದು ಚರ್ಮರೋಗ.

ichthyotic
ಗುಣವಾಚಕ
ಈನುದೊಗಲು ರೋಗ ತಗುಲಿದ ಯಾ ಅದರಿಂದ ನರಳುತ್ತಿರುವ.

ICI
ಸಂಕ್ಷಿಪ್ತ
Imperial Chemical Industries.

icicle
ನಾಮವಾಚಕ
ಹಿಮಬಿಳಲು; ಹಿಮದ, ನೀರ್ಗಲ್ಲ-ತೊಂಗಲು; ಮಾಳಿಗೆಯಿಂದ ತೊಟ್ಟಿಕ್ಕುವ ನೀರು ಹನಿಗಳು ಹಾಗೆಯೇ ಘನೀಭವಿಸಿ ತೂಗು ಬಿದ್ದಿರುವ ಹಿಮದ ಚೂಪು ಕೊನೆಗಳು.

icily
ಕ್ರಿಯಾವಿಶೇಷಣ
  • ಹಿಮಶೀತದಿಂದ; ಕೊರೆಯುತ್ತ; ತೀರ ಚಳಿಚಳಿಯಾಗಿ: the wind blew icily cold ಗಾಳಿ ಬಹಳ ಚಳಿಚಳಿಯಾಗಿ ಬೀಸಿತು.
  • ಆದರಶೂನ್ಯವಾಗಿ; ನಿರುತ್ಸಾಹದಿಂದ: an icily unenthusiastic audience ಆದರಶೂನ್ಯ, ನಿರುತ್ಸಾಹಭರಿತ – ಪ್ರೇಕ್ಷಕರು.

  • iciness
    ನಾಮವಾಚಕ
  • ಅತಿಶೈತ್ಯ; ಕೊರೆತ.
  • ನಿರುತ್ಸಾಹ; ಆದರಶೂನ್ಯತೆ.

  • icing
    ನಾಮವಾಚಕ
  • ಸಕ್ಕರೆ ಅಲಂಕಾರ; ಶರ್ಕರಾಲಂಕರಣ; ಕೇಕ್‍ ಮೊದಲಾದ ಭಕ್ಷ್ಯಗಳ ಮೇಲೆ ಸಕ್ಕರೆ ಪಾಕ ಹರವಿ ಅಲಂಕರಿಸುವುದು.
  • (ಮುಖ್ಯವಾಗಿ ಪಾನೀಯಗಳಿಗೆ) ಮಂಜುಗಡ್ಡೆ ಹಾಕಿ ತಂಪಾಗಿಸುವುದು.
  • (ವಿಮಾನದ ಮೇಲೆ) ಹಿಮಾಚ್ಛಾದನ; ಹಿಮದ ಪದರು ಕಟ್ಟುವುದು; ಮಂಜುಗಡ್ಡೆಗಳು ಮುಚ್ಚಿಕೊಳ್ಳುವುದು.

  • icon
    ನಾಮವಾಚಕ
  • ಮೂರ್ತಿ; ಪ್ರತಿಮೆ; ವಿಗ್ರಹ; ಬಿಂಬ.
  • (ಗ್ರೀಕ್‍ ಚರ್ಚಿನಲ್ಲಿ) ಪೂಜನೀಯರೆಂದು ಗಣಿಸಲಾದ ಏಸುಕ್ರಿಸ್ತ, ಸಂತರು, ಮೊದಲಾದವರ ಪವಿತ್ರ ಶಿಲ್ಪ, ಚಿತ್ರ, ಶಬಲಚಿತ್ರ, ಮೊದಲಾದವು.


  • logo