logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Easter
ನಾಮವಾಚಕ
  • ಈಸ್ಟರ್‍ (ಹಬ್ಬ); (ಮಾರ್ಚ್‍ 21ನೇ ತಾರೀಖು ಯಾ ಅದರ ನಂತರ ಬರುವ ಹುಣ್ಣಿಮೆ ಯಾ ಮೊದಲನೆಯ ಭಾನುವಾರ ಆಚರಿಸುವ) ಕ್ರಿಸ್ತನ ಪುನರುತ್ಥಾನದ ಉತ್ಸವ.
  • ಈಸ್ಟರ್‍ (ದಿನದಿಂದ ಆರಂಭವಾದ) ವಾರ.

  • Easter day
    ನಾಮವಾಚಕ
    = Easter(1).

    Easter eggs
    ನಾಮವಾಚಕ
    ಈಸ್ಟರ್‍ ಮೊಟ್ಟೆಗಳು; ಈಸ್ಟರ್‍ ಹಬ್ಬದಲ್ಲಿ ಸ್ನೇಹಿತರಿಗೆ ಕೊಡುವ ಬಣ್ಣಬಣ್ಣದ ತಕ ಮೊಟ್ಟೆಗಳು, ಮೊಟ್ಟೆಯಾಕಾರದ ಸಿಹಿ ತಿಂಡಿಗಳು (ಮುಖ್ಯವಾಗಿ ಚಾಕಲೇಟ್‍) ಯಾ ಬೇಯಿಸಿದ ಮೊಟ್ಟೆಗಳು.

    Easter eve
    ನಾಮವಾಚಕ
    ಈಸ್ಟರ್‍ ದಿನದ ಹಿಂದಿನ ದಿನ.

    Easter offering(s)
    ನಾಮವಾಚಕ
    ಈಸ್ಟರ್‍ ಕಾಣಿಕೆ; ಈಸ್ಟರ್‍ ದಿನದಂದು ಮಠದ ಕ್ರೈಸ್ತಪಾದ್ರಿಗೆ ಮಾಮೂಲಾಗಿ ನೀಡುವ (ಮಠದಲ್ಲಿ ವಸೂಲಾದ) ಹಣ.

    Easter Sunday
    ನಾಮವಾಚಕ
    = Easter(1).

    Easter week
    ನಾಮವಾಚಕ
    = Easter(2).

    easterly
    ಕ್ರಿಯಾವಿಶೇಷಣ
  • ಮೂಡಲಿಗೆ; ಪೂರ್ವದಿಕ್ಕಿಗೆ.
  • ಮೂಡಲ ಕಡೆಯಲ್ಲಿ; ಪೂರ್ವದಿಕ್ಕಿನಲ್ಲಿ.

  • easterly
    ಗುಣವಾಚಕ
  • ಮೂಡಲ; ಪೂರ್ವದಿಕ್ಕಿನ.
  • (ಗಾಳಿಯ ವಿಷಯದಲ್ಲಿ) ಮೂಡಲಿಂದ ಬರುವ; ಪೂರ್ವದಿಕ್ಕಿನಿಂದ ಬೀಸುವ.

  • easterly
    ನಾಮವಾಚಕ
    ಮೂಡಲಗಾಳಿ; ಪೂರ್ವಮಾರುತ.


    logo