logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dam
ಗುಣವಾಚಕ
3damnನ ರೂಪಾಂತರ.

dam
ಕ್ರಿಯಾವಿಶೇಷಣ
4damnನ ರೂಪಾಂತರ.

damage
ನಾಮವಾಚಕ
  • (ವ್ಯಕ್ತಿ, ವಸ್ತು, ಆಸ್ತಿ, ಕೀರ್ತಿ, ಮೊದಲಾದವುಗಳಿಗೆ ಆಗುವ) ಜಖಂ; ಅಪಾಯ; ಹಾನಿ; ನಷ್ಟ: to one’s great damage ಒಬ್ಬನ ಕಡು ಹಾನಿಗೆ.
  • (ಬಹುವಚನದಲ್ಲಿ) (ನ್ಯಾಯಶಾಸ್ತ್ರ) ದಂಡ; ಪರಿಹಾರ(ದ್ರವ್ಯ); ಯಾವುದೇ ಒಂದರ ನಷ್ಟ ಯಾ ಹಾನಿಗಾಗಿ ಕೊಡಬೇಕೆಂದು ಕೇಳುವ ಯಾ ಕಾನೂನು ವಿಧಿಸುವ – ಪರಿಹಾರ ಧನ.
  • (ಅಶಿಷ್ಟ) ಖರ್ಚು; ವೆಚ್ಚ; ತೆರ(ಬೇಕಾದುದು): what’s the damage ದಂಡ ಎಷ್ಟು ತೆರಬೇಕು? ಎಷ್ಟು ಕೈ ಕಚ್ಚುತ್ತದೆ?

  • damage
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಹಾಳಾಗು; ಕೆಡು; ಹಾನಿಗೊಳಗಾಗು; ನಷ್ಟವಾಗು: a sturdy cloth that does not damage easily ಸುಲಭವಾಗಿ ಹಾಳಾಗದ ಗಟ್ಟಿಬಟ್ಟೆ.
  • (ಸಾಮಾನ್ಯವಾಗಿ ವಸ್ತುವಿನ ಬೆಲೆ ಯಾ ಉಪಯೋಗ ಕಡಿಮೆಯಾಗುವಂತೆ) ಕೆಡಿಸು; ಹಾಳುಮಾಡು; ಜಖಂಗೊಳಿಸು.
  • (ವ್ಯಕ್ತಿ, ಸಂಸ್ಥೆ, ಮೊದಲಾದವುಗಳ) ಹೆಸರು ಕೆಡಿಸು; ಯಶಸ್ಸಿಗೆ ಕುಂದುತರು; ಖ್ಯಾತಿಗೆ ಹಾನಿ ತರು; ಹೆಸರಿಗೆ ಕಳಂಕ ಹಚ್ಚು; ಕೀರ್ತಿಗೆ ಭಂಗ ತರು; ಹೆಸರು ಕೆಡಿಸು: trying to damage the government ಸರ್ಕಾರಕ್ಕೆ ಕಳಂಕ ತರಲು ಯತ್ನಿಸುತ್ತಾ. a damaging admission ಹೆಸರು ಕೆಡಿಸುವ ಹೇಳಿಕೆ, ಒಪ್ಪಿಕೆ.

  • damageable
    ಗುಣವಾಚಕ
    ಕೆಡಿಸಬಹುದಾದ; ಹಾನಿಗೊಳಗಾಗುವ; ಹಾಳಾಗುವ; ನಷ್ಟಕ್ಕೊಳಗಾಗುವ.

    damascene
    ಸಕರ್ಮಕ ಕ್ರಿಯಾಪದ
  • ಹದ್ದಿಸು; ಹದಿಕೆತ್ತನೆ ಮಾಡು; (ಲೋಹದ ಮೇಲೆ) ಚಿನ್ನ, ಬೆಳ್ಳಿ, ಮೊದಲಾದವುಗಳನ್ನು ಹುದುಗಿಸಿ – ಚಿತ್ತಾರ ಮಾಡು, ಅಲಂಕಾರ ಮಾಡು.
  • (ಉಕ್ಕಿಗೆ) ತರಂಗಾಲಂಕಾರ ಮಾಡು; ಬೆಸುಗೆಯಲ್ಲಿ ಮೂಡುವ ಅಲೆಗಳ ರೇಖೆಗಳನ್ನು ಬರಿಸು.

  • damask
    ನಾಮವಾಚಕ
  • = damask rose.
  • ಡಮಾಸು ವರ್ಣ; ಡಮಾಸ್ಕಸ್‍ ಗುಲಾಬಿಯ ನಸುಗೆಂಪು ವರ್ಣ; ಡಾಮಾಸ್ಕಸ್‍ ಗುಲಾಬಿಯ ನಸುಗೆಂಪು ಬಣ್ಣ.
  • ಡಮಾಸು ವಸ್ತ್ರ; ನಮೂನೆ ಯಾ ವಿನ್ಯಾಸಗಳು ವಸ್ತ್ರದ ಎರಡು ಕಡೆಯೂ ಕಾಣುವಂತೆ ಹೆಣೆದಿರುವ, (ಮೊದಲಿಗೆ ರೇಷ್ಮೆಯ ಈಗ ಲಿನನ್‍, ಕಾಟನ್‍, ಉಣ್ಣೆ, ಮೊದಲಾದವುಗಳ) ಗಟ್ಟಿಯಾದ ಹೊಳಪು ಬಟ್ಟೆ.
  • ಡಮಾಸು ಬಟ್ಟೆಯಿಂದ ಮಾಡಿದ ಮೇಜು ಬಟ್ಟೆ, ಕರವಸ್ತ್ರ, ಮೊದಲಾದವು.
  • (ಚರಿತ್ರೆ) ಡಮಾಸು (ಉಕ್ಕು); ಕಬ್ಬಿಣ ಮತ್ತು ಉಕ್ಕನ್ನು ವಿಶೇಷ ರೀತಿಯಲ್ಲಿ ಒಟ್ಟಿಗೆ ಬೆಸೆದಾಗ ಉಂಟಾಗುವ, ಅಲೆಯಂಥ ವಿನ್ಯಾಸಗಳುಳ್ಳ ಡಮಾಸ್ಕಸ್‍ ಉಕ್ಕು ಯಾ ಅದರಂಥ ಬೇರೆ ಉಕ್ಕು.
  • ಡಮಾಸ್ಕಸ್‍ ಉಕ್ಕಿನ – ತರಂಗಾಲಂಕಾರ, ಅಲೆಯ ನಮೂನೆ.

  • damask
    ಗುಣವಾಚಕ
  • ಡಮಾಸು ಗುಲಾಬಿ ಬಣ್ಣದ; ನಸುಗೆಂಪಿನ ಯಾ ಮಕಮಲ್ಲು ಗುಲಾಬಿ ಬಣ್ಣದ.
  • ಡಮಾಸು ರೇಷ್ಮೆ,ಕೆತ್ತಾನಾರು ಯಾ ಉಕ್ಕಿನಂಥ ಯಾ ಅವುಗಳಿಂದ ಮಾಡಿದ.

  • damask
    ಸಕರ್ಮಕ ಕ್ರಿಯಾಪದ
  • = damascene.
  • ನೆಯ್ಗೆಚಿತ್ತಾರ ಮಾಡು; ಬಣ್ಣಬಣ್ಣದ ದೊಡ್ಡ ನಮೂನೆ ಯಾ ಚಿತ್ರಗಳಿಂದ ನೇಯು ಯಾ ಅಲಂಕಾರ ಮಾಡು.
  • (ಕೆನ್ನೆ ಮೊದಲಾದವನ್ನು) ಕೆಂಪೇರಿಸು; ಕೆಂಪಗೆ ಮಾಡು.
  • ಚಿತ್ತಾರ ಮಾಡು; ನಮೂನೆ ಯಾ ವಿನ್ಯಾ ಸಗಳಿಂದ ಅಲಂಕರಿಸು.

  • damask rose
    ನಾಮವಾಚಕ
    ಡಮಾಸು ಗುಲಾಬಿ; ರೋಸ ಡಮಾಸೀನ ಕುಲದ, ಏಷ್ಯಾಮೈನರ್‍ನಲ್ಲಿ ಹೆಚ್ಚಾಗಿ ಬೆಳೆಸುವ, ಅತ್ತರುಳ್ಳ, ನಸುಗೆಂಪು ಬಣ್ಣದ, ಹಲವು ಮಿಶ್ರತಳಿಯ ಗುಲಾಬಿಗಳಿಗೆ ಮೂಲವಾದ, ಡ್ಯಾಮಸ್ಕ್‍ ಗುಲಾಬಿ.


    logo