logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abelmosk
ನಾಮವಾಚಕ
ಕಸ್ತೂರಿ ಗಿಡ; ಗಂಧಮೂಲ ಗಿಡ; ಏಷ್ಯಾ ಮತ್ತು ದಕ್ಷಿಣ ಆಹ್ರಿಕದ ಉಷ್ಣವಲಯಗಳಲ್ಲಿ ಬೆಳೆಯುವ ಕಸ್ತೂರಿ ವಾಸನೆಯಿರುವ ಬೀಜಗಳುಳ್ಳ ಗಿಡ.

Aberdeen
ನಾಮವಾಚಕ ಪದಗುಚ್ಛ
ಆಬರ್ಡೀನ್‍:
  • ಸ್ಕಾಟ್ಲೆಂಡಿನ ಈಶಾನ್ಯದಲ್ಲಿರುವ ಒಂದು ನಗರ.
  • ಪದಗುಚ್ಛ \((1)\).
  • =ಪದಗುಚ್ಛ \((2)\).

  • aberdevine
    ನಾಮವಾಚಕ
    ಆಬರ್ಡವೈನ್‍; ಕಂದು ಹಳದಿ ಬಣ್ಣದ ಒಂದು ಬಗೆಯ ಚಿಕ್ಕ ಹಾಡುಹಕ್ಕಿ.

    Aberdonian
    ನಾಮವಾಚಕ
    ಆಬರ್ಡೀನಿನವನು; ಆಬರ್ಡೀನಿನಲ್ಲಿ ಹುಟ್ಟಿದವನು.

    Aberdonian
    ಗುಣವಾಚಕ
    ಆಬರ್ಡೀನಿನ; ಆಬರ್ಡೀನಿನಲ್ಲಿ ಹುಟ್ಟಿದ.

    aberglaube
    ನಾಮವಾಚಕ
    German ಅತಿ ನಂಬಿಕೆ; ಕುರುಡು ನಂಬಿಕೆ; ಅಂಧಶ್ರದ್ಧೆ.

    Abernethy
    ನಾಮವಾಚಕ
    ಜೀರಿಗೆ ಬಿಸ್ಕತ್ತು; ಸೋಂಪು ಬಿಸ್ಕತ್ತು.

    aberrance
    ನಾಮವಾಚಕ
  • ದಾರಿಬಿಟ್ಟು ಹೋಗುವಿಕೆ; ಮಾರ್ಗಚ್ಯುತಿ.
  • ಅಪವಾದ(ವಾಗಿರುವಿಕೆ).

  • aberrancy
    ನಾಮವಾಚಕ
    = aberrance.

    aberrant
    ಗುಣವಾಚಕ
  • ದಾರಿ ತಪ್ಪಿದ; ದಾರಿಗೆಟ್ಟ; ದಾರಿ ಬಿಟ್ಟ; ಅಡ್ಡದಾರಿ ಹಿಡಿದ; ನಡತೆಗೆಟ್ಟ; ಋಜುಮಾರ್ಗ ತಪ್ಪಿದ (ನೀತಿ, ನಡತೆಗಳ ವಿಷಯದಲ್ಲಿ ರೂಪಕವಾಗಿ ಸಹ)
  • (ಮುಖ್ಯವಾಗಿ ಜೀವವಿಜ್ಞಾನ) ಅಪವಾದ ರೂಪದ; ಅಸ್ವಾಭಾವಿಕ.


  • logo