logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oppugnation
ನಾಮವಾಚಕ
(ವಿರಳ ಪ್ರಯೋಗ)
  • ಆಕ್ರಮಣ; ಮೇಲೆ ಬೀಳುವುದು.
  • (ರೂಪಕವಾಗಿ) (ಮಾತಿನಲ್ಲಿ, ವಾದದಲ್ಲಿ ಯಾ ಕಾರ್ಯ ರೀತಿಯಲ್ಲಿ) ವಿರೋಧ; ಪ್ರತಿಭಟನೆ; ಖಂಡನೆ.

  • oppugner
    ನಾಮವಾಚಕ
    ಖಂಡನಕಾರ; ಖಂಡಕ; ಪ್ರತಿ ಹೇಳುವವ; ವಿರೋಧಿ; ಪ್ರತಿವಾದಕ; ಪ್ರತಿಭಟನೆಕಾರ.

    opsimath
    ನಾಮವಾಚಕ
    (ಸಾಹಿತ್ಯಕ) ವಯಸ್ಸಾದ ಮೇಲೆ ಕಲಿಕೆಯನ್ನು ಪ್ರಾರಂಭಿಸುವವನು; ವಿಳಂಬವ್ಯಾಸಂಗಿ; ವೃದ್ಧ ವಿದ್ಯಾರ್ಥಿ.

    opsimathy
    ನಾಮವಾಚಕ
    (ಸಾಹಿತ್ಯಕ) ವೃದ್ಧ ವ್ಯಾಸಂಗ; ಅಪರವಯಸ್ಕ ವ್ಯಾಸಂಗ; ವಿಳಂಬ ಶಿಕ್ಷಣ; ವಯಸ್ಸಾದ ಮೇಲೆ ಮಾಡುವ ಕಲಿಕೆ, ಯಾ ವ್ಯಾಸಂಗ ಯಾ ಪಡೆದ ಶಿಕ್ಷಣ.

    opsonic
    ಗುಣವಾಚಕ
    (ವೈದ್ಯಶಾಸ್ತ್ರ) ಆಪ್ಸನಿಕ; ಆಪ್ಸನಿನ್ನಿನ, ಅದಕ್ಕೆ ಸಂಬಂಧಿಸಿದ.

    opsonic action
    ನಾಮವಾಚಕ
    ಆಪ್ಸನಿಕ ಕ್ರಿಯೆ; ರಕ್ತವನ್ನು ಹೊಕ್ಕ ರೋಗಕಾರಕ ಸೂಕ್ಷ್ಮಜೀವಿಗಳನ್ನು ಬಿಳಿಯ ರಕ್ತಕಣಗಳು ಹತ್ತಿಕ್ಕಲು ಯತ್ನಿಸುವ ಸಂದರ್ಭದಲ್ಲಿ ಅವುಗಳ ದಾಳಿಗೆ ಸೂಕ್ಷ್ಮಜೀವಿಗಳು ಸುಲಭವಾಗಿ ಈಡಾಗುವಂತೆ ಮಾಡುವ ಕ್ರಿಯೆ.

    opsonic index
    ನಾಮವಾಚಕ
    ಆಪ್ಸನಿಕ ಸೂಚಿ; ಆಪ್ಸನಿಕ ಸೂಚ್ಯಂಕ; ಯಾವುದೇ ವ್ಯಾಧಿಯ ವಿರುದ್ಧ ಇನಾಕ್ಯುಲೇಷನ್‍ ತೆಗೆದುಕೊಂಡ ವ್ಯಕ್ತಿಯ ರಕ್ತದ ಸೀರಮ್ಮಿನ ಆಪ್ಸನಿಕ ಸಾಮರ್ಥ್ಯಕ್ಕೂ ಸಾಮಾನ್ಯ ರಕ್ತ ಸೀರಮ್ಮಿನ ಆಪ್ಸನಿಕ ಸಾಮರ್ಥ್ಯಕ್ಕೂ ಇರುವ ದಾಮಾಷಾ, ಪ್ರಮಾಣ.

    opsonic power
    ನಾಮವಾಚಕ
    ಆಪ್ಸನಿಕ ಶಕ್ತಿ; ಆಪ್ಸನಿಕ ಸಾಮರ್ಥ್ಯ; ಆಪ್ಸನಿಕ ಕ್ರಿಯೆಯನ್ನು ನಡೆಸುವ ಶಕ್ತಿ, ಸಾಮರ್ಥ್ಯ.

    opsonin
    ನಾಮವಾಚಕ
    ಆಪ್ಸನಿನ್‍; ರಕ್ತದ ಸೀರಮ್‍ನಲ್ಲಿರುವ, ರೋಗಕಾರಕ ಸೂಕ್ಷ್ಮಜೀವಿಗಳು ಬಿಳಿ ರಕ್ತಕಣಗಳಿಗೆ ಸುಲಭವಾಗಿ ಈಡಾಗುವಂತೆ ಮಾಡುವ ಒಂದು ಪದಾರ್ಥ.

    opt
    ಅಕರ್ಮಕ ಕ್ರಿಯಾಪದ ಪದಗುಚ್ಛ
    opt out (of) (ಒಂದರಲ್ಲಿ) ಭಾಗವಹಿಸದಿರಲು ನಿರ್ಧರಿಸು.
  • ಆಯು; ಆಯ್ಕೆಯ ಸ್ವಾತಂತ್ರ್ಯವನ್ನು ಉಪಯೋಗಿಸು; ಆಯ್ಕೆ ಮಾಡು.
  • (ಎರಡರಲ್ಲಿ ಒಂದನ್ನು ಯಾ ಒಂದಕ್ಕೆ ಬದಲಾಗಿ ಮತ್ತೊಂದನ್ನು) ಆಯ್ದುಕೊ; ಆರಿಸಿಕೊ.


  • logo