logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legendary
ಗುಣವಾಚಕ
  • ಪೌರಾಣಿಕ; ಐತಿಹ್ಯದ; ಪುರಾಣದ.
  • ಪುರಾಣದಂಥ.
  • ಪುರಾಣಕ್ಕೆ ಸಂಬಂಧಿಸಿದ.
  • ಪುರಾಣಪ್ರಸಿದ್ಧ; ಪುರಾಣದ ಕಥೆಗಳಲ್ಲಿ ಬರುವ, ಚಿತ್ರಿಸಿರುವ.
  • (ಆಡುಮಾತು) ಪುರಾಣಾರ್ಹ; ಪುರಾಣ ಯೋಗ್ಯ; ಪುರಾಣಕ್ಕೆ ವಿಷಯವಾಗುವಷ್ಟು ಅಸಾಧಾರಣವಾದ.
  • ಪುರಾಣವನ್ನಾಧರಿಸಿದ; ಪುರಾಣಾಧಾರದ.

  • legendary
    ನಾಮವಾಚಕ
  • ಐತಿಹ್ಯಗಳು; ಪುರಾಣಗಳು; ದಂತಕಥೆಗಳು.
  • ಸಂತಕಥಾ ಸಂಗ್ರಹ; ಮುಖ್ಯವಾಗಿ ಸಾಧುಸಂತರ ಜೀವನ ಕಥಾಸಂಗ್ರಹ.
  • ಆಖ್ಯಾನಕಾರ; ಪೌರಾಣಿಕ; ಆಖ್ಯಾಯಿಕೆಗಳನ್ನು ಬರೆಯುವವನು: historians and modern legendaries ಇತಿಹಾಸಕಾರರು ಮತ್ತು ಆಧುನಿಕ ಆಖ್ಯಾನಕಾರರು.

  • legendry
    ನಾಮವಾಚಕ
    (ಸಾಮೂಹಿಕವಾಗಿ) ದಂತಕಥೆಗಳು; ಐತಿಹ್ಯಗಳು: its heritage of romantic legendry ಅದರ ಪರಂಪರಾಗತವಾದ ರಮ್ಯ ಐತಿಹ್ಯಗಳು.

    leger
    ನಾಮವಾಚಕ
    ledger ಎಂಬುದರ ರೂಪಾಂತರ.

    leger line
    ನಾಮವಾಚಕ
    (ಸಂಗೀತ) ಪ್ರಸ್ತಾರ ಬಾಹ್ಯರೇಖೆ; ಸ್ವರಪ್ರಸ್ತಾರ ರೇಖೆಯ ಆಚೆಗಿರುವ ಸ್ವರಗಳನ್ನು ಸೂಚಿಸಲು ಪ್ರಸ್ತಾರ ರೇಖೆಗಳ ಕೆಳಗೆ ಯಾ ಮೇಲೆ ಎಳೆದಿರುವ ಸಣ್ಣ ಗೆರೆ.

    legerdemain
    ನಾಮವಾಚಕ
  • ಕೈಚಳಕ; ಹಸ್ತಕೌಶಲ.
  • ಗಾರುಡಿ; ಇಂದ್ರಜಾಲ; ಕಣ್ಕಟ್ಟು.
  • ಮೋಸ; ವಂಚನೆ; ಠಕ್ಕು.
  • ಕುತರ್ಕ; ತರ್ಕಾಭಾಸ.

  • legged
    ಗುಣವಾಚಕ
    ಕಾಲುಳ್ಳ; ಕಾಲಿರುವ; ಪಾದಿ; ಕಾಲಿನ: a legged table ಕಾಲುಳ್ಳ ಮೇಜು. hairy legged ಕೂದಲು ತುಂಬಿದ ಕಾಲಿನ; ರೋಮಪಾದಿ.

    legger
    ನಾಮವಾಚಕ
    ಕಾಲಿನಿಂದ ತಳ್ಳಿ ದೋಣಿ ನಡೆಸುವವನು; ಸುರಂಗದ ಪಕ್ಕವನ್ನು ಕಾಲಿಂದ ಮೆಟ್ಟಿ ಸುರಂಗ ಕಾಲುವೆಯಲ್ಲಿ ದೋಣಿ ನಡೆಸುವವನು.

    legginess
    ನಾಮವಾಚಕ
    ಉದ್ದಗಾಲಿರುವಿಕೆ; ನಿಡುಗಾಲುಗಳಿರುವಿಕೆ.

    legging
    ನಾಮವಾಚಕ
    (ಸಾಮಾನ್ಯವಾಗಿ ಬಹುವಚನದಲ್ಲಿ) ಮಂಡಿಯಿಂದ ಹರಡಿನವರೆಗೆ ಬರುವ ತೊಗಲಿನ, ದಪ್ಪನಾದ ಕಾಲು ಕಾಪು.


    logo