logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incorrigibility
ನಾಮವಾಚಕ
ಅಪರಿಷ್ಕರಣೀಯತೆ; ಸರಿಪಡಿಸಲಾಗದಿರುವಿಕೆ; ಸುಧಾರಿಸಲಾಗದಿರುವಿಕೆ; ತಿದ್ದಲು ಸಾಧ್ಯವಿಲ್ಲದಿರುವಿಕೆ; ತಿದ್ದಲಾಗದಂಥ ಸ್ವಭಾವ, ಲಕ್ಷಣ.

incorrigible
ಗುಣವಾಚಕ
  • (ವ್ಯಕ್ತಿಯ, ಅಭ್ಯಾಸದ ವಿಷಯದಲ್ಲಿ) ತಿದ್ದಲಾಗದಷ್ಟು ಕೆಟ್ಟಿರುವ; ಸರಿಪಡಿಸಲಾಗದಷ್ಟು ಹಾಳಾಗಿರುವ.
  • (ಸುಲಭವಾಗಿ) ತಿದ್ದಲಾಗದ; ಸರಿಪಡಿಸಲಾಗದ; ಸುಧಾರಿಸಲಾಗದ; ಅಸುಧಾರಣೀಯ.

  • incorrigibly
    ಕ್ರಿಯಾವಿಶೇಷಣ
    ತಿದ್ದಲಾಗದಂತೆ; ಸರಿಪಡಿಸಲಾಗದಂತೆ; ಪರಿಷ್ಕರಿಸಲಾಗದಂತೆ; ಸುಧಾರಿಸಲು ಸಾಧ್ಯವಿಲ್ಲದಂತೆ.

    incorruptibility
    ನಾಮವಾಚಕ
    ಭ್ರಷ್ಟಗೊಳಿಸಲಾಗದಿಕೆ; ಕೆಟ್ಟಮಾರ್ಗಕ್ಕೆ ಬೀಳಿಸಲಾಗದ ಸ್ವಭಾವ; ಕೆಡಿಸಲು ಸಾಧ್ಯವಿಲ್ಲದ ಲಕ್ಷಣ, (ಮುಖ್ಯವಾಗಿ) ಲಂಚ ರುಷುವತ್ತಿಗೆ ವಶವಾಗದಿರುವ ಸ್ವಭಾವ.

    incorruptible
    ಗುಣವಾಚಕ
  • (ಭೌತಿಕವಾಗಿ) ಕೆಟ್ಟುಹೋಗದ; ಕೆಡಲಾರದ; ಕೆಡದ.
  • ಅಳಿಯದ; ಅನಶ್ವರ; ಶಾಶ್ವತ; ನಿತ್ಯ; ಎಂದೆಂದಿಗೂ ಉಳಿಯುವ.
  • ಕೆಡಿಸಲಾಗದ; ಭ್ರಷ್ಟಗೊಳಿಸಲಾಗದ; ಕೆಟ್ಟಮಾರ್ಗಕ್ಕೆ – ಬೀಳಿಸಲಾಗದ, ಎಳೆಯಲಾಗದ; (ಮುಖ್ಯವಾಗಿ) ಲಂಚ ರುಷುವತ್ತಿಗೆ ವಶವಾಗದ.

  • incorruptibly
    ಕ್ರಿಯಾವಿಶೇಷಣ
    ಭ್ರಷ್ಟಗೊಳಿಸಲಾಗದಂತೆ; ಕೆಡಿಸಲಾಗದಂತೆ; ಕೆಟ್ಟ ಮಾರ್ಗಕ್ಕೆ ಬೀಳಿಸಲಾಗದಂತೆ; (ಮುಖ್ಯವಾಗಿ) ಲಂಚ ರುಷುವತ್ತಿಗೆ ವಶಪಡಿಸಲಾಗದಂತೆ.

    incrassate
    ಗುಣವಾಚಕ
    (ಸಸ್ಯವಿಜ್ಞಾನ, ಜೀವವಿಜ್ಞಾನ) ಪೀನ; ದಪ್ಪವಾದ ಯಾ ಊದಿದ.

    increase
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ವರ್ಧಿಸು; ವೃದ್ಧಿಗೊಳಿಸು; ದೊಡ್ಡದು ಮಾಡು ಯಾ ಸಂಖ್ಯೆಯಲ್ಲಿ ಹೆಚ್ಚಿಸು.
  • (ಗುಣಮಟ್ಟವನ್ನು) ಹೆಚ್ಚಿಸು; ತೀವ್ರಗೊಳಿಸು.

  • increase
    ನಾಮವಾಚಕ ಪದಗುಚ್ಛ
    on the increase ಹೆಚ್ಚುತ್ತ; ಬೆಳೆಯುತ್ತ; ದೊಡ್ಡದಾಗುತ್ತ; ವರ್ಧಿಸುತ್ತ; ಅಭಿವೃದ್ಧಿಯಾಗುತ್ತ.
  • ಬೆಳವಣಿಗೆ; ವೃದ್ಧಿ; ಹೆಚ್ಚಿಕೆ; ಹೆಚ್ಚಾಗುವಿಕೆ; ದೊಡ್ಡದಾಗುವಿಕೆ.
  • ಲಾಭ; ಹೆಚ್ಚುವರಿ; ನಹೆ.
  • (ಪ್ರಾಚೀನ ಪ್ರಯೋಗ) ಬೆಳೆ; ಫಸಲು.
  • ಸಂಖ್ಯಾಭಿವೃದ್ಧಿ; ಸಂಖ್ಯೆಯಲ್ಲಿ – ಏರಿಕೆ, ಹೆಚ್ಚಾಗುವಿಕೆ, ಬೆಳೆಯುವಿಕೆ.
  • (ಮನುಷ್ಯ, ಪ್ರಾಣಿ ಯಾ ಸಸ್ಯಗಳ ವಿಷಯದಲ್ಲಿ) ವೃದ್ಧಿ; ಸಂತಾನಾಭಿವೃದ್ಧಿ; ಪ್ರಜಾವೃದ್ಧಿ.
  • ಏರಿಕೆ; ಹೆಚ್ಚಳ; ವೃದ್ಧಿ; ಹೆಚ್ಚಾದ ಮೊತ್ತ, ಪ್ರಮಾಣ.

  • increasingly
    ಕ್ರಿಯಾವಿಶೇಷಣ
    ಹೆಚ್ಚುತ್ತ; ಏರುತ್ತ; ಹೆಚ್ಚಾಗುತ್ತ; ಬೆಳೆಯುತ್ತ; ವರ್ಧಿಸುತ್ತ; ವೃದ್ಧಿಯಾಗುತ್ತ; ಅಭಿವೃದ್ಧಿ ಹೊಂದುತ್ತ.


    logo