logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legatee
ನಾಮವಾಚಕ
ದಾಯಗ್ರಾಹಿ; ದಾಯಗ್ರಾಹಕ; ರಿಕ್ಥಗ್ರಾಹಕ; ಉಯಿಲಿನ – ಆಸ್ತಿ ಪಡೆಯುವವನು, ಆಸ್ತಿ ವಹಿಸಿಕೊಳ್ಳುವವನು.

legateship
ನಾಮವಾಚಕ
ಪೋಪ್‍ ಪ್ರತಿನಿಧಿಯ ಅಧಿಕಾರ, ಪದವಿ, ಅಂತಸ್ತು.

legatine
ಗುಣವಾಚಕ
ಪೋಪನ ಪ್ರತಿನಿಧಿಯ; ಪೋಪ್‍ ಪ್ರತಿನಿಧಿಯ, ನೇತೃತ್ವದ.

legation
ನಾಮವಾಚಕ
  • ನಿಯೋಗಿ – ವರ್ಗ, ತಂಡ, ಮಂಡಳಿ.
  • ದೂತಾವಾಸ; ನಿಯೋಗಿ ನಿವಾಸ; ನಿಯೋಗಿಯ ಅಧಿಕಾರಗೃಹ.
  • = legateship.
  • ನಿಯೋಗಿ ಪ್ರೇಷಣ; ಪ್ರತಿನಿಧಿಯನ್ನು, ನಿಯೋಗಿಯನ್ನು – ಕಳುಹಿಸುವುದು.
  • (ಮುಖ್ಯವಾಗಿ ರಾಯಭಾರಿಯ ಅಂತಸ್ತು ಇಲ್ಲದ) ನಿಯೋಗಿಯ ಕಚೇರಿ ಮತ್ತು ಅವನ ಪರಿವಾರ.

  • legato
    ಕ್ರಿಯಾವಿಶೇಷಣ
    (ಸಂಗೀತ) ಅವಿಚ್ಛಿನ್ನವಾಗಿ; ಸ್ವರಗಳ ನಡುವೆ ನಿಲ್ಲಿಸದೆ ಹೊಂದಿಕೊಂಡು ನಯವಾಗಿ ನುಡಿಯುತ್ತ.

    legato
    ಗುಣವಾಚಕ
    (ಸಂಗೀತ) ಅವಿಚ್ಛಿನ್ನಗತಿಯ; ಸ್ವರಗಳ ನಡುವೆ ನಿಲ್ಲಿಸದೆ ಹೊಂದಿಕೊಂಡು ಸರಾಗವಾಗಿ, ನಯವಾಗಿ ನುಡಿಯುವ.

    legato
    ನಾಮವಾಚಕ
  • (ಸಂಗೀತ) ಲಿಗಾಟೋ; ಅವಿಚ್ಛಿನ್ನ ಗತಿ; ಸ್ವರಗಳ ನಡುವೆ ನಿಲ್ಲಿಸದೆ, ಹೊಂದಿಸಿಕೊಂಡು ನಯವಾಗಿ ನುಡಿಸುವ ಸಂಗೀತ ರೀತಿ.
  • (ಸಂಗೀತ) ಅವಿಚ್ಛಿನ್ನ ಕೃತಿ; ಸ್ವರಗಳ ನಡುವೆ ನಿಲ್ಲಿಸದೆ, ನಯವಾಗಿ ನುಡಿಸಿಕೊಂಡು ಹೋಗುವ ಸಂಗೀತಕೃತಿ.

  • legator
    ನಾಮವಾಚಕ
    ರಿಕ್ಥದಾಯಿ; ರಿಕ್ಥದಾಯಕ; ದಾಯದಾಯಿ; ದಾಯಕರ್ತ; ಉಯಿಲಿನ ಮೂಲಕ ಆಸ್ತಿಬಿಟ್ಟು ಹೋಗುವವನು, ಆಸ್ತಿ ವಹಿಸಿಕೊಡುವವನು.

    legend
    ನಾಮವಾಚಕ ಪದಗುಚ್ಛ
  • ಆಖ್ಯಾನ; ಆಖ್ಯಾಯಿಕೆ; ಪುರಾಣ ಕಥೆ; ಚಾರಿತ್ರಿಕವೆಂದು ಜನರು ಸಾಮಾನ್ಯವಾಗಿ ಅಂಗೀಕರಿಸುವ, ಪರಂಪರೆಯಿಂದ ಬಂದ ಐತಿಹ್ಯ, ಸಂಗತಿ.
  • ಆಖ್ಯಾಯಿಕೆಗಳು; ಪುರಾಣ ಕಥೆಗಳು; ಐತಿಹ್ಯಗಳು.
  • ಇಂಥ ಸಾಹಿತ್ಯ ಯಾ ಪರಂಪರೆ.
  • ಜನಸಾಮಾನ್ಯರಲ್ಲಿ ಪ್ರಚುರವಾಗಿರುವ, ಆದರೆ ಆಧಾರರಹಿತವಾದ, ನಂಬಿಕೆ, ಶ್ರದ್ಧೆ.
  • (ಆಡುಮಾತು) ದಂತಕಥೆ; ಅಂಥ ನಂಬಿಕೆಗಳ ವಸ್ತು, ವ್ಯಕ್ತಿ: became a legend in his own lifetime ಅವನ ಜೀವಿತಕಾಲದಲ್ಲಿಯೇ ದಂತಕಥೆಯಾದ.
  • (ಮುಖ್ಯವಾಗಿ ನಾಣ್ಯದ, ಪದಕದ ಮೇಲೆ ಕೆತ್ತಿದ ಯಾ ಅಚ್ಚೊತ್ತಿದ) ಬರೆಹ; ಆಲೇಖ; ಆಲೇಖ್ಯ; ಲೇಖನ; ಅಂಕನ; ಸೂಕ್ತಿ.
  • (ಮುದ್ರಣ)
    1. (ಮುದ್ರಿತವಾದ ಚಿತ್ರ, ನಕ್ಷೆ, ಮೊದಲಾದವುಗಳ ಮೇಲಿನ) ತಲೆಬರಹ; ಶಿರೋನಾಮೆ.
    2. ವಿವರಣೆ; ಭೂಪಟ ಮೊದಲಾದವುಗಳ ಮೇಲೆ ಬರೆದಿರುವ, ಅದರಲ್ಲಿ ಬಳಸಿರುವ ಸಂಕೇತಗಳನ್ನು ವಿವರಿಸುವ ಬರೆಹ.
  • (ಚರಿತ್ರೆ)
    1. ಸಾಧುಚರಿತ; ಸಂತಚರಿತ್ರೆ; ಸಾಧುವಿನ ಯಾ ಸಂತನ ಜೀವನ ಕಥೆ.
    2. ಸಂತಚರಿತ ಸಂಗ್ರಹ; ಸಂತಕಥಾಸಂಗ್ರಹ; ಸಾಧುಸಂತರ ಜೀವನಕಥೆ ಮೊದಲಾದವುಗಳ ಸಂಗ್ರಹ.

  • legendarily
    ಕ್ರಿಯಾವಿಶೇಷಣ
  • ಪುರಾಣದಂತೆ; ಪುರಾಣ ಪ್ರಸಿದ್ಧವಾದ ರೀತಿಯಲ್ಲಿ.
  • ಪುರಾಣಕಥೆಗಳಲ್ಲಿ ಬರುವಂತೆ; ಐತಿಹ್ಯವಾಗಿ.


  • logo