logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incorporated
ಗುಣವಾಚಕ
(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಕಾನೂನುಬದ್ಧ) ಸಂಘಟಿತ ಸಂಸ್ಥೆಯಾಗಿರುವ.

incorporation
ನಾಮವಾಚಕ
  • (ಒಂದೇ ಸಂಸ್ಥೆಯಲ್ಲಿ) ಸಂಘಟನ; ಏಕೀಕರಣ; ಏಕೀಭವನ; ಒಂದಾಗಿಸುವುದು; ಸಂಘಟಿಸುವುದು; ಸಂಘಟಿತವಾಗುವುದು; ಒಂದಾಗುವುದು.
  • (ಅಂಶಗಳನ್ನು, ಘಟಕಗಳನ್ನು) ಸಂಯೋಜಿಸುವುದು; ಸಂಘಟಿಸುವುದು.
  • (ಅಂಶಗಳ, ಘಟಕಗಳ ವಿಷಯದಲ್ಲಿ) ಸಂಯೋಜಿತವಾಗುವುದು; ಸಂಯುಕ್ತವಾಗುವುದು; ಸಂಘಟಿತವಾಗುವುದು.
  • (ಕಾನೂನುಬದ್ಧ) ಸಂಸ್ಥೆಯಾಗಿ ರಚಿಸುವುದು, ರಚಿತವಾಗುವುದು.
  • ಏಕೀಕರಣ; ಏಕೀಭವನ; ಸಂಘಟನೆ; (ಇನ್ನೊಂದರೊಡನೆ, ಇತರರೊಡನೆ) ಒಟ್ಟುಗೂಡಿಸುವುದು; ಒಂದುಗೂಡಿಸುವುದು; ಒಟ್ಟುಗೂಡುವುದು; ಒಂದುಗೂಡುವುದು.

  • incorporator
    ನಾಮವಾಚಕ
    ಸಂಯೋಜಕ; ಸಂಘಟಕ:
  • (ಒಂದೇ ಸಂಸ್ಥೆಯಲ್ಲಿ) ಒಂದಾಗಿಸುವವನು.
  • (ಒಂದು ಸಂಸ್ಥೆಯ) ಸದಸ್ಯ.
  • (ಅಂಶಗಳನ್ನು, ಘಟಕಗಳನ್ನು) ಸಂಯೋಜಿಸುವವನು; ಸಂಘಟಿಸುವವನು.
  • (ಕಾನೂನುಬದ್ಧ) ಸಂಸ್ಥೆಯಾಗಿ ರಚಿಸುವವನು.
  • (ಒಂದು ಸಂಸ್ಥೆಯೊಡನೆ, ಇತರರೊಡನೆ) ಒಟ್ಟುಗೂಡಿಸುವವನು; ಒಂದುಗೂಡಿಸುವವನು.

  • incorporeal
    ಗುಣವಾಚಕ ಪದಗುಚ್ಛ
    incorporeal hereditament ಅವಸ್ತುಭೂತ ಪಿತ್ರಾರ್ಜಿತ ಸ್ವತ್ತು; ತನಗೆ ವಾಸ್ತವಿಕ ಅಸ್ತಿತ್ವವಿಲ್ಲದಿದ್ದರೂ ಒಂದು ಪ್ರತ್ಯಕ್ಷ ವಸ್ತುವಿಗೆ ಹಕ್ಕಾಗಿ ಯಾ ಲಾಭವಾಗಿ ಸಂಬಂಧಪಟ್ಟಿರುವ ಪಿತ್ರಾರ್ಜಿತ ಸ್ವತ್ತು.
  • ಅಭೌತ; ಜಡಪದಾರ್ಥದಿಂದ ಯಾ ದ್ರವ್ಯದಿಂದ ರಚಿತವಾಗಿರದ.
  • ಅಮೂರ್ತ; ದೇಹವಿಲ್ಲದ; ಅಶರೀರಿಯಾದ.
  • ಅಶರೀರಿಗಳ; ಅಪ್ರಾಕೃತ, ಅಮೂರ್ತ – ವ್ಯಕ್ತಿಗಳ.
  • (ನ್ಯಾಯಶಾಸ್ತ್ರ) ಅಮೂರ್ತ; ಅವಾಸ್ತುಭೂತ; ವಸ್ತುಭೂತವಲ್ಲದ; ಭೌತಅಸ್ತಿತ್ವವಿಲ್ಲದ; ನಿಜ ವಸ್ತುವಾಗಿರದೆ ಕಾನೂನಿನ ಭಾವನೆಯಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ (ಉದಾಹರಣೆಗೆ ಓಟಿನ ಹಕ್ಕು).

  • incorporeality
    ನಾಮವಾಚಕ
  • ಅಭೌತತೆ; ದ್ರವ್ಯದಿಂದ ರಚಿತವಾಗದಿರುವಿಕೆ.
  • ಅಶರೀರಿತ್ವ.
  • ಅವಸ್ತುಭೂತತೆ; ಭೌತ ಅಸ್ತಿತ್ವವಿಲ್ಲದಿರುವಿಕೆ.

  • incorporeally
    ಕ್ರಿಯಾವಿಶೇಷಣ
  • ಅಭೌತವಾಗಿ; ದ್ರವ್ಯದಿಂದ ರಚಿತವಾಗಿಲ್ಲದೆ.
  • ಅಶರೀರಿಯಾಗಿ.
  • ಅವಸ್ತುಭೂತವಾಗಿ; ಭೌತ ಅಸ್ತಿತ್ವವಿಲ್ಲದೆ.

  • incorporeity
    ನಾಮವಾಚಕ
  • ಅಮೂರ್ತತೆ; ಅಶರೀರತೆ.
  • (ನ್ಯಾಯಶಾಸ್ತ್ರ) ಅವಸ್ತುಭೂತತೆ; ನಿಜ ವಸ್ತುವಾಗಿರದೆ ಕಾನೂನಿನ ಭಾವನೆಯಲ್ಲಿ ಮಾತ್ರ ಅಸ್ತಿತ್ವದಲ್ಲಿರುವಿಕೆ.

  • incorrect
    ಗುಣವಾಚಕ
  • ಸರಿಯಲ್ಲದ; ತಪ್ಪಾದ; ಅಯಥಾರ್ಥ; ಸಟೆಯಾದ; ದಿಟವಾಗಿಲ್ಲದ; ಸತ್ಯಾಂಶಕ್ಕೆ, ನಿಜಸ್ಥಿತಿಗೆ – ಅನುಸಾರವಾಗಿಲ್ಲದ.
  • (ಶೈಲಿ ಮೊದಲಾದವುಗಳ ವಿಷಯದಲ್ಲಿ) ಸರಿಯಲ್ಲದ; ತಪ್ಪಾದ; ಅಶುದ್ಧ; ಅಸಾಧು; ದೋಷಯುಕ್ತ.
  • (ಪುಸ್ತಕದ ವಿಷಯದಲ್ಲಿ) ಅಪರಿಷ್ಕೃತ; ಮುದ್ರಣಕ್ಕೆ ಸರಿಯಾಗಿ ತಿದ್ದಿಲ್ಲದ.

  • incorrectly
    ಕ್ರಿಯಾವಿಶೇಷಣ
  • ಸರಿಯಾಗಿಲ್ಲದೆ; ತಪ್ಪಾಗಿ.
  • (ಶೈಲಿ ಮೊದಲಾದವುಗಳ ವಿಷಯದಲ್ಲಿ) ದೋಷಯುಕ್ತವಾಗಿ; ತಪ್ಪುತಪ್ಪಾಗಿ; ಅಶುದ್ಧವಾಗಿ.
  • (ಪುಸ್ತಕದ ವಿಷಯದಲ್ಲಿ, ಮುದ್ರಣಕ್ಕೆ ಅನುಕೂಲವಾಗಿ) ತಿದ್ದಿಲ್ಲದೆ; ಅಪರಿಷ್ಕೃತವಾಗಿ.

  • incorrectness
    ನಾಮವಾಚಕ
  • ಸರಿಯಾಗಿಲ್ಲದಿರುವಿಕೆ; ತಪ್ಪಾಗಿರುವುದು.
  • (ಶೈಲಿ ಮೊದಲಾದವುಗಳ ವಿಷಯದಲ್ಲಿ) ತಪ್ಪು ತಪ್ಪಾಗಿರುವಿಕೆ; ಅಶುದ್ಧತೆ; ದೋಷಯುಕ್ತತೆ.
  • (ಪುಸ್ತಕದ ವಿಷಯದಲ್ಲಿಮುದ್ರಣಕ್ಕೆ ಅನುಕೂಲವಾಗಿ) ತಿದ್ದಿಲ್ಲದಿರುವಿಕೆ; ಅಪರಿಷ್ಕೃತತೆ.


  • logo