(ಸಸ್ಯವಿಜ್ಞಾನ) ಅಭಿಮುಖಪರ್ಣಿ; ಎಲೆಗಳು ಎದುರುಬದುರಾಗಿರುವ.
opposition
ನಾಮವಾಚಕ
ಪದಗುಚ್ಛ
ಎದುರುಬದುರಾಗಿ, ಅಭಿಮುಖವಾಗಿ–ಇಡುವುದು: opposition of the thumb ಹೆಬ್ಬೆಟ್ಟಿಗೆ ಎದುರುಬದುರಾಗಿಡುವುದು.
(ಖಗೋಳ ವಿಜ್ಞಾನ ಮತ್ತು ಜ್ಯೋತಿಷ) ಪ್ರತಿಯೋಗ; ನೇರಿದಿರು ಸ್ಥಾನ; ಭೂಮಿಯಿಂದ ನೋಡಿದಾಗ, ಎರಡು ಆಕಾಶಕಾಯಗಳ ರೇಖಾಂಶವು $180^{\circ}$ ವ್ಯತ್ಯಾಸವಾಗಿರುವಾಗ ಅವುಗಳ ಸ್ಥಾನ: planet is in opposition ಗ್ರಹವು (ಸೂರ್ಯನಿಗೆ) ಪ್ರತಿಯೋಗದಲ್ಲಿದೆ, ಎದುರಾಗಿದೆ.
ಪರಸ್ಪರ ಭಿನ್ನತೆ; ವೈದೃಶ್ಯ; ವಿರೋಧ; ವಿರೋಧ ನ್ಯಾಸ.
(ತರ್ಕಶಾಸ್ತ್ರ) ಒಂದೇ ಕರ್ತೃ ಕ್ರಿಯಾಪದಗಳಿರುವ, ಆದರೆ ಪ್ರಮಾಣದಲ್ಲಾಗಲಿ ಗುಣದಲ್ಲಾಗಲಿ ಯಾ ಎರಡರಲ್ಲೂ ವ್ಯತ್ಯಾಸವುಳ್ಳ ಎರಡು ಪ್ರತಿಜ್ಞಾ ವಾಕ್ಯಗಳಿಗೆ ಇರುವ ಸಂಬಂಧ; ವಿರೋಧಸಂಬಂಧ.
ವಿರೋಧ; ಪ್ರತಿಭಟನೆ; ಪ್ರತಿರೋಧ: did it in opposition to public opinion ಜನಾಭಿಪ್ರಾಯಕ್ಕೆ ವಿರೋಧವಾಗಿ ಅದನ್ನು ಮಾಡಿದನು.
(ಬ್ರಿಟಿಷ್ ಪ್ರಯೋಗ) ವಿರೋಧಪಕ್ಷ; ಪ್ರತಿಪಕ್ಷ: in opposition ವಿರೋಧ ಪಕ್ಷದಲ್ಲಿ. was in opposition at the time ಆ ಕಾಲದಲ್ಲಿ ವಿರೋಧಪಕ್ಷದಲ್ಲಿದ್ದನು. from the Opposition benches ವಿರೋಧಪಕ್ಷದ ಆಸನಗಳಿಂದ.
(ಒಂದು ಸೂಚನೆಯನ್ನು) ವಿರೋಧಿಸುವ ಪಕ್ಷ.
ಎದುರಾಳಿಗಳು; ಪ್ರತಿಸ್ಪರ್ಧಿಗಳು.
oppositional
ಗುಣವಾಚಕ
ವಿರೋಧದ; ವಿರೋಧ ಸ್ವರೂಪದ.
(ಶಾಸನಸಭೆ) ವಿರೋಧ ಪಕ್ಷಕ್ಕೆ ಸೇರಿದ; ವಿರೋಧ ಪಕ್ಷಕ್ಕೆ ಸಂಬಂಧಪಟ್ಟ; ಪ್ರತಿಪಕ್ಷದ.
ಪೀಡಿಸು; ಗೋಳುಗುಟ್ಟಿಸು; ಕಾಡು; ಹಿಂಸಿಸು; ಎಡೆಬಿಡದ ಕ್ರೌರ್ಯಕ್ಕೆ ಯಾ ಅನ್ಯಾಯಕ್ಕೆ ಗುರಿ ಮಾಡು: a people oppressed by despotism ದಬ್ಬಾಳಿಕೆಯಿಂದ ಪೀಡಿಸಲ್ಪಟ್ಟ (ಹಿಂಸೆಗೆ ಗುರಿಯಾದ) ಜನ.
oppression
ನಾಮವಾಚಕ
ದಬ್ಬಾಳಿಕೆ; ಅಧಿಕಾರದ ಯಾ ಶಕ್ತಿಯ ಕ್ರೂರ ಯಾ ಅನ್ಯಾಯವಾದ ಪ್ರಯೋಗ.
ದಬ್ಬಾಳಿಕೆಯ ಕಾರ್ಯ ಯಾ ದೃಷ್ಟಾಂತ; ಹಿಂಸೆ; ಪೀಡನೆ; ಕ್ರೌರ್ಯ.
ಪೀಡನೆ; ದಬ್ಬಾಳಿಕೆಗೆ ಗುರಿಯಾದ ಸ್ಥಿತಿ.
ದೈಹಿಕ ಶಕ್ತಿಯನ್ನು ಯಾ ಮನಸ್ಸನ್ನು ಕುಗ್ಗಿಸುವ ಭಾವನೆ; (ಮನಸ್ಸಿನ ಮೇಲಿನ) ಭಾರ, ಹೊರೆ.