logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inconvenience
ಸಕರ್ಮಕ ಕ್ರಿಯಾಪದ
(ವ್ಯಕ್ತಿ ಮೊದಲಾದವರನ್ನು) ಅನನುಕೂಲಕ್ಕೊಳಪಡಿಸು; ಅಸೌಕರ್ಯಕ್ಕೆ ಗುರಿಮಾಡು; (ವ್ಯಕ್ತಿ ಮೊದಲಾದವರಿಗೆ) ಅನನುಕೂಲ, ಅಸೌಕರ್ಯ ಉಂಟುಮಾಡು.

inconvenient
ಗುಣವಾಚಕ
  • ಅನನುಕೂಲವಾಗಿರುವ; ಅಸೌಕರ್ಯವುಂಟು ಮಾಡುವ.
  • ಫಜೀತಿಯ; ಪೇಚಿನಲ್ಲಿ, ಇಕ್ಕಟ್ಟಿನಲ್ಲಿ, ಗೋಜಿನಲ್ಲಿ – ಸಿಕ್ಕಿಸುವ.

  • inconveniently
    ಕ್ರಿಯಾವಿಶೇಷಣ
  • ಅನನುಕೂಲವಾಗಿ; ಅಸೌಕರ್ಯವುಂಟು ಮಾಡುವಂತೆ.
  • ಪೇಚಿನಲ್ಲಿ, ಗೋಜಿನಲ್ಲಿ – ಸಿಕ್ಕಿಸುವಂತೆ; ಇಕ್ಕಟ್ಟುಂಟುಮಾಡುವಂತೆ; ಫಜೀತಿಗೊಳಪಡಿಸುವ ರೀತಿಯಲ್ಲಿ.

  • inconvertibility
    ನಾಮವಾಚಕ
  • (ನಾಣ್ಯ, ನೋಟುಗಳ ವಿಷಯದಲ್ಲಿ) ಅವಿನಿಮೇಯತೆ; ವಿನಿಮಯ, ಮಾರುವೆ ಮಾಡಲಾಗದಿರುವಿಕೆ.
  • ಪರಿವರ್ತಿಸಲಾಗದಿರುವಿಕೆ; ಅಪರಿವರ್ತ್ಯತೆ; ಅದಲುಬದಲುಮಾಡಲಾಗದಿರುವಿಕೆ; ಬದಲಾಯಿಸಲಾಗದ ಲಕ್ಷಣ.

  • inconvertible
    ಗುಣವಾಚಕ
  • (ನಾಣ್ಯ, ನೋಟುಗಳ ವಿಷಯದಲ್ಲಿ) ಅವಿನಿಮೇಯ; ವಿನಿಮಯಿಸಲಾಗದ; ಮಾರುವೆಮಾಡಲಾಗದ.
  • ಪರಿವರ್ತಿಸಲಾಗದ; ಅಪರಿವರ್ತ್ಯ; ಬದಲಾಯಿಸಲಾಗದ; ಅದಲುಬದಲು ಮಾಡಲಾಗದ.

  • inconvertibly
    ಕ್ರಿಯಾವಿಶೇಷಣ
  • (ನಾಣ್ಯದ ವಿಷಯದಲ್ಲಿ) ವಿನಿಮಯಿಸಲಾಗದಂತೆ; ಅವಿನಿಮೇಯವಾಗಿ; ಮಾರುವೆಮಾಡಲಾಗದಂತೆ.
  • ಅಪರಿವರ್ತನೀಯವಾಗಿ; ಅದಲುಬದಲು ಮಾಡದಂತೆ.

  • inconvincible
    ಗುಣವಾಚಕ
  • ಮನಗಾಣಿಸಲಾಗದ; ಮನದಟ್ಟು ಮಾಡಲಾಗದ; ಒಪ್ಪಿಸಲಾಗದ.
  • ಹಠವಾದಿಯಾದ; ಮೊಂಡುವಾದದ; ಯುಕ್ತತೆಯನ್ನೊಪ್ಪದ.

  • incoordination
    ನಾಮವಾಚಕ
    ಅಸಮನ್ವಯ; ಪರಸ್ಪರ ಜೋಡಣೆಯಿಲ್ಲದಿರುವುದು; ಸಂಯೋಜನೆಯಿಲ್ಲದಿರುವುದು.

    incorporate
    ಗುಣವಾಚಕ
  • (ವಾಣಿಜ್ಯ ಸಂಸ್ಥೆ ಮೊದಲಾದವುಗಳ ವಿಷಯದಲ್ಲಿ) ಏಕೀಕೃತ; ಸಂಯೋಜಿತ; ಸಂಘಟಿತ; ಹಲವು ಸಂಸ್ಥೆಗಳು ಒಂದುಗೂಡಿ ಒಂದೇ ಸಂಸ್ಥೆಯಾಗಿರುವ.
  • (ವ್ಯಕ್ತಿಗಳ ವಿಷಯದಲ್ಲಿ) ಸಂಘಟಿತವಾದ; ಹಲವರು ಒಂದಾಗಿ ಒಂದು ಸಂಘ ಯಾ ಕೂಟವಾಗುವ.
  • ಮೈವೆತ್ತ; ಮೈದಳೆದ; ದೇಹ ಧರಿಸಿದ; ಮೂರ್ತೀಕರಿಸಿದ.

  • incorporate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಒಂದೇ ಸಂಸ್ಥೆಯಲ್ಲಿ ಯಾ ಇನ್ನೊಂದರೊಡನೆ, ಇತರರೊಡನೆ) ಒಟ್ಟುಗೂಡಿಸು; ಒಂದಾಗಿಸು; ಸೇರಿಸು; ಒಂದುಗೂಡಿಸು; ಸಂಘಟಿಸು; ಏಕೀಕರಿಸು.
  • (ಮುಖ್ಯವಾಗಿ ಸಂಸ್ಥೆ ಮೊದಲಾದವುಗಳಲ್ಲಿ) ಸದಸ್ಯನನ್ನಾಗಿಸು; ಸದಸ್ಯನನ್ನಾಗಿ ಸೇರಿಸಿಕೊ.
  • (ಅಂಶಗಳನ್ನು, ಘಟಕಗಳನ್ನು, ಕೂಡಿಸಿ ಒಂದೇ ಪದಾರ್ಥವಾಗಿ) ಸಂಯೋಜಿಸು; ಸಂಘಟಿಸು.
  • (ಕಾನೂನುಬದ್ಧ) ಸಂಸ್ಥೆಯಾಗಿ ರಚಿಸು.


  • logo