logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

opposite
ಗುಣವಾಚಕ ಪದಗುಚ್ಛ
(ಅನೇಕ ವೇಳೆ to ಒಡನೆ). the opposite sex ಭಿನ್ನ ಲಿಂಗದವರು (ಹೆಂಗಸರ ದೃಷ್ಟಿಯಿಂದ ಗಂಡಸರು, ಗಂಡಸರ ದೃಷ್ಟಿಯಿಂದ ಹೆಂಗಸರು).
  • ಎದುರುಬದುರಾದ; ಅಭಿಮುಖವಾದ: on opposite sides of the square ಚೌಕದ ಎದುರುಬದುರು ಕಡೆಗಳಲ್ಲಿ. the tree opposite the house ಮನೆಯ ಎದುರಿಗಿರುವ ಮರ.
  • (ಸಸ್ಯವಿಜ್ಞಾನ) (ಎಲೆಗಳು ಮೊದಲಾದವುಗಳ ವಿಷಯದಲ್ಲಿ) ಅಭಿಮುಖವಾಗಿರುವ; ತಾಳಿನಲ್ಲಿ ಒಂದೇ ಎತ್ತರದಲ್ಲಿ ಎದುರುಬದುರಾಗಿರುವ: opposite leaves ಅಭಿಮುಖ ಪರ್ಣಗಳು; ಎದುರೆಲೆಗಳು; ತಾಳಿನಲ್ಲಿ ಒಂದೇ ಎತ್ತರದಲ್ಲಿ ಎದುರುಬದುರಾಗಿರುವ ಎಲೆಗಳು.
  • ಇನ್ನೊಂದು ಅಂಗಕ್ಕೆ ನೇರ ಎದುರಿಗಿರುವ, ಅಭಿಮುಖವಾಗಿರುವ.
  • ವಿರುದ್ಧ ಬಗೆಯ, ತೆರನ.
  • ಬೇರೆಯಾದ; ವ್ಯತಿರಿಕ್ತವಾದ; ತೀರ ವ್ಯತ್ಯಾಸವಾದ: of an opposite kind to (from) what I expected ನಾನು ನಿರೀಕ್ಷಿಸಿದುದಕ್ಕೆ ತೀರಾ ವಿರುದ್ಧ ಬಗೆಯ.
  • ವಿದೃಶ; ಭಿನ್ನ; ಅನ್ಯ; ಹೋಲಿಸಿದ ಎರಡರಲ್ಲಿ (ಒಂದನ್ನು ಬಿಟ್ಟು) ಇನ್ನೊಂದರ; ಬೇರೆಯಾದ.
  • (ಕೋನಗಳ ವಿಷಯದಲ್ಲಿ) ವಿರುದ್ಧ; ಅಭಿಮುಖ; ಛೇದಿಸುವ ಎರಡು ರೇಖೆಗಳ ಎದುರುಬದುರಾಗಿರುವ ಕಡೆಗಳ.

  • opposite
    ನಾಮವಾಚಕ
    ಎದುರಾದದ್ದು; ಪ್ರತಿ, ವಿರುದ್ಧ–ವ್ಯಕ್ತಿ, ವಸ್ತು: the most extreme opposites have some qualities in common ಅತ್ಯಂತ ವಿರುದ್ಧವಾದವು ಕೂಡ ಕೆಲವು ಸಮಾನ ಗುಣಗಳನ್ನು ಹೊಂದಿರುತ್ತವೆ. black is the opposite of white ಕಪ್ಪು ಬಿಳಿಗೆ ವಿರುದ್ಧವಾದದ್ದು.

    opposite
    ಕ್ರಿಯಾವಿಶೇಷಣ
  • ಎದುರಿಗೆ; ಎದುರು ಸ್ಥಳದಲ್ಲಿ; ಎದುರು ಸ್ಥಾನದಲ್ಲಿ; ಎದುರು ದಿಕ್ಕಿನಲ್ಲಿ.
  • ಎದುರು ಕಡೆ.
  • ಬೀದಿಯ ಎದುರು ಮಗ್ಗುಲಲ್ಲಿ; ಬೀದಿಯಾಚೆಯಲ್ಲಿ: there was an explosion opposite ಬೀದಿಯಾಚೆಯ ಮನೆಯಲ್ಲಿ ಸಿಡಿತವಾಯಿತು.
  • (ನಾಟಕದ ಮುಖ್ಯ ಪಾತ್ರ ಮೊದಲಾದವರ ವಿಷಯದಲ್ಲಿ) (ಇನ್ನೊಂದು ಪಾತ್ರಕ್ಕೆ) ಎದುರಾಗಿ; ಪೂರಕವಾಗಿ.

  • opposite
    ಉಪಸರ್ಗ
    ಎದುರಾಗಿ; ಎದುರಿಗೆ; ಎದುರು ಸ್ಥಳದಲ್ಲಿ; ಮುಂದೆ; ಎದುರುಗಡೆ: happened opposite the office ಕಚೇರಿಯ ಎದುರಿಗೆ ನಡೆಯಿತು.

    opposite number
    ನಾಮವಾಚಕ
    ಸಂವಾದಿ–ವ್ಯಕ್ತಿ, ವಸ್ತು; ಮತ್ತೊಂದು ತಂಡದಲ್ಲಿ ಯಾ ಶ್ರೇಣಿಯಲ್ಲಿ ಇಲ್ಲಿಯ ನಿರ್ದಿಷ್ಟ ಸ್ಥಾನಕ್ಕೆ ಸಮನಾಗಿರುವಂತೆ ಇರುವ ವ್ಯಕ್ತಿ, ಇಟ್ಟಿರುವ ವಸ್ತು; ಪ್ರತಿಯಾದ ವ್ಯಕ್ತಿ, ವಸ್ತು.

    opposite prompt
    ನಾಮವಾಚಕ
    (ರಂಗಸ್ಥಳದಲ್ಲಿ) ಸಾಮಾನ್ಯವಾಗಿ ನಟನ ಬಲ ಪಕ್ಕ, ಬಲಗಡೆ.

    opposite prompter
    ನಾಮವಾಚಕ
    ನೆನಪುಗಾರ; ಜ್ಞಾಪಕಕಾರ; ರಂಗಭೂಮಿಯಲ್ಲಿ ಸಾಮಾನ್ಯವಾಗಿ , ನಟನ ಬಲಕ್ಕೆ ಮರೆಯಲ್ಲಿ ನಿಂತು, ಮರೆತದ್ದನ್ನು ಹೇಳಿಕೊಡುವವನು.

    oppositely
    ಕ್ರಿಯಾವಿಶೇಷಣ
    (ಮುಖ್ಯವಾಗಿ ಸಸ್ಯವಿಜ್ಞಾನದಲ್ಲಿ ಪ್ರಯೋಗ) ಎದುರುಬದುರಾಗಿ; (ಪರಸ್ಪರ) ಅಭಿಮುಖವಾಗಿ.

    oppositeness
    ನಾಮವಾಚಕ
  • ಎದುರುಬದುರಾಗಿರುವಿಕೆ; ಅಭಿಮುಖತೆ; ಆಭಿಮುಖ್ಯ.
  • ವೈದೃಶ್ಯ; ವಿರುದ್ಧವಾಗಿರುವಿಕೆ; ತೀರ ವ್ಯತ್ಯಾಸವಾಗಿರುವಿಕೆ.
  • ವಿರೋಧ; ವೈಷಮ್ಯ; ಪ್ರತಿಕೂಲತೆ.

  • oppositi-
    ಸಮಾಸ ಪೂರ್ವಪದ
    ಅಭಿಮುಖ, ಎದುರುಬದುರು ಎಂಬರ್ಥದಲ್ಲಿ (ಮುಖ್ಯವಾಗಿ ಸಸ್ಯವಿಜ್ಞಾನದಲ್ಲಿ) ಬಳಸುವ ಸಮಾಸ ಪೂರ್ವಪದ.


    logo