logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legacy-hunter
ನಾಮವಾಚಕ
ಆಸ್ತಿ ಬಡುಕ; ಆಸ್ತಿ ಬೇಟೆಗಾರ; ತನಗೆ ಆಸ್ತಿ ಬಿಟ್ಟು ಹೋಗಲೆಂಬ ಆಸೆಯಿಂದ ಹಣವಂತರಾದ ಮುದುಕರನ್ನು ಆಶ್ರಯಿಸುವವನು, ಆದರಿಸುವವನು.

legal
ಗುಣವಾಚಕ
  • ಕಾನೂನಿನ; ಶಾಸನದ; ಕಾನೂನಿಗೆ ಸಂಬಂಧಿಸಿದ; ನ್ಯಾಯಶಾಸ್ತ್ರದ; ನ್ಯಾಯಶಾಸ್ತ್ರೀಯ.
  • ಶಾಸನಾಧಾರವುಳ್ಳ; ಕಾನೂನನ್ನು ಆಧರಿಸಿದ.
  • ಕಾನೂನುಬದ್ಧ; ಶಾಸನಬದ್ಧ; ಕಾಯಿದೆಬದ್ಧ.
  • ಕಾನೂನಿಗೆ ಒಳಪಡುವ; ಶಾಸನದ ವ್ಯಾಪ್ತಿಗೆ ಒಳಪಟ್ಟ.
  • ವಿಧ್ಯುಕ್ತ; ಶಾಸನೋಕ್ತ.
  • ವಿಧಿಬದ್ಧ; ಕಾನೂನುಬದ್ಧ; ಕಾನೂನಿಗೆ ಅನುಗುಣವಾದ.
  • (ಧರ್ಮನ್ಯಾಯಕ್ಕಿಂತ ಭಿನ್ನವಾಗಿ) ಶಾಸನದಿಂದ ಮಾನ್ಯತೆ ಪಡೆದ; ಕಾನೂನು ಮಾನ್ಯತೆಯ; ಶಾಸನಪುರಸ್ಕೃತವಾದ.
  • (ದೇವತಾಶಾಸ್ತ್ರ) ಮೋಸಸ್ಸನ ಶಾಸನದ.
  • (ದೇವತಾಶಾಸ್ತ್ರ) (ಮೋಕ್ಷಕ್ಕೆ ಸಾಧನ ಭಕ್ತಿಯಲ್ಲ ಕರ್ಮಾಚರಣೆ ಎನ್ನುವ) ಕರ್ಮಮಾರ್ಗ ನ್ಯಾಯದ; ಕಾಯಕ ಸೂತ್ರದ, ತತ್ತ್ವದ.

  • legal aid
    ನಾಮವಾಚಕ
    ನ್ಯಾಯ ಸಹಾಯ; ಕಾನೂನು ನೆರವು; ಕೋರ್ಟು ವ್ಯವಹಾರದ ಖರ್ಚು ವೆಚ್ಚಕ್ಕಾಗಿ, ಕೆಲವು ಸಂದರ್ಭಗಳಲ್ಲಿ ಸರಕಾರದಿಂದ ಕೊಡಲಾಗುವ ನೆರವು, ಧನಸಹಾಯ.

    legal fiction
    ನಾಮವಾಚಕ
    ಕಾನೂನು ಕಟ್ಟುಕಥೆ; ಕಲ್ಪಿತ – ಶಾಸನ. ಕಾನೂನು; ಮುಖ್ಯವಾಗಿ ಕಾನೂನು ವಿಷಯದಲ್ಲಿಒಂದು ಉಪಯುಕ್ತವಾದ ಗುರಿಸಾಧನೆಗಾಗಿ ನಿಜವೆಂದು ನಂಬುವ ದೃಢ ಹೇಳಿಕೆ.

    legal holiday
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಬ್ಯಾಂಕು ಮೊದಲಾದವುಗಳ) ವಿಧ್ಯುಕ್ತ, ಕಾನೂನುಬದ್ಧ – ರಜಾ(ದಿನ).

    legal proceedings
    ನಾಮವಾಚಕ
    ಕಾನೂನುಕ್ರಮ; ಕೋರ್ಟಿನ ಕ್ರಮ, ಕಟ್ಟಳೆ.

    legal separation
    ನಾಮವಾಚಕ
    ವಿಧ್ಯುಕ್ತ ವಿಚ್ಛೇದ; ಕಾನೂನುಬದ್ಧ ಅಗಲಿಕೆ; ಗಂಡಹೆಂಡಿರು ವಿವಾಹಿತರಾಗಿದ್ದುಕೊಂಡು ಬೇರೆ ಬೇರೆಯಾಗಿ ವಾಸಿಸುವ ಕಾನೂನುಬದ್ಧ ಏರ್ಪಾಟು.

    legal tender
    ನಾಮವಾಚಕ
  • (ಹಣದ ವಿಷಯದಲ್ಲಿ) ವಿಧಿಮಾನ್ಯ; ಕಾನೂನುಮಾನ್ಯ ಸಾಲಗಾರನು ತನಗೆ ಬರಬೇಕಾದ ಸಾಲಕ್ಕಾಗಿ (ಸಾಮಾನ್ಯವಾಗಿಚಿನ್ನದಿಂದ ಮಾಡಿರದ ನಾಣ್ಯಗಳಿಗೆ ಒಂದು ಗೊತ್ತಾದ ಮೊತ್ತದವರೆಗೆ) ಒಪ್ಪಿಗೆಯಿಂದ ತೆಗೆದುಕೊಳ್ಳಲೇಬೇಕೆಂದು ವಿಧಾಯಕವಾಗಿರುವ ರೂಪದ ಹಣ.
  • (ಹಣದ ವಿಷಯದಲ್ಲಿ) ವಿಧಿಮಾನ್ಯ, ಕಾನೂನುಮಾನ್ಯ ಚಲಾವಣೆ.

  • legalese
    ನಾಮವಾಚಕ
    (ಆಡುಮಾತು) ಕಾನೂನು ಪರಿಭಾಷೆ; ಶಾಸನ ಭಾಷೆ; ಕಾನೂನಿಗೆ ಸಂಬಂಧಿಸಿದ ಕಾಗದ ಪತ್ರಗಳ ತಾಂತ್ರಿಕ ಪರಿಭಾಷೆ.

    legalism
    ನಾಮವಾಚಕ
  • ಅತಿಸೂತ್ರನಿಷ್ಠ; ವಿಧಿಪರಾಯಣತೆ; ನಿಯಮಕ್ಕೆ, ಸೂತ್ರಕ್ಕೆ ಅತಿಯಾಗಿ ಅಂಟಿಕೊಳ್ಳುವುದು, ಅತಿ ಪ್ರಾಶಸ್ತ್ಯ ಕೊಡುವುದು.
  • (ದೇವತಾಶಾಸ್ತ್ರ) ವಿಧಿಪ್ರಾಧಾನ್ಯವಾದ; ಸುವಾರ್ತೆಗಿಂತ (ದೇವರ ಆಜ್ಞೆಗಳು, ಶ್ರುತಿಪ್ರಕಾಶಿತ ವಿಷಯಗಳು, ಮೊದಲಾದವುಗಳನ್ನೊಳಗೊಂಡ ಬೈಬಲಿನ) ನ್ಯಾಯ ಯಾ ವಿಧಿಭಾಗಕ್ಕೆ ಪ್ರಾಶಸ್ತ್ಯ ಕೊಡುವುದು.
  • (ದೇವತಾಶಾಸ್ತ್ರ) ಕರ್ಮಪ್ರಾಧಾನ್ಯ ವಾದ; ಕರ್ಮಪಾರಮ್ಯ ವಾದ; ದೇವರು ಮಾನವನ ಪಾಪಗಳನ್ನು ಹೋಗಲಾಡಿಸಿ, ಅವನನ್ನು ಉದ್ಧಾರ ಮಾಡುವುದು ಅವನು ಮಾಡಿದ ಕರ್ಮಗಳ ಆಧಾರದ ಮೇಲೆಯೇ ಎಂಬ ವಾದ.


  • logo