(ಬೆರಳಿನ, ಮುಖ್ಯವಾಗಿ ಹೆಬ್ಬೆಟ್ಟಿನ ವಿಷಯದಲ್ಲಿ) ಎದುರುಬದುರಾಗಿ ಮಾಡಬಲ್ಲ; ಪ್ರತಿಸ್ಥಾಪನೀಯ.
ಎದುರಿಸಬಲ್ಲ; ವಿರೋಧಿಸಬಲ್ಲ; ಪ್ರತಿಭಟಿಸಬಲ್ಲ.
oppose
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
ವಿರೋಧಿಯಾಗಿ ಯಾ ತಡೆಯಾಗಿ ವರ್ತಿಸು: it is the duty of an opposition to oppose ವಿರೋಧಿಸುವುದು ವಿರೋಧಪಕ್ಷದ ಕರ್ತವ್ಯ. as opposed to ಅದಕ್ಕೆ ಪ್ರತಿಯಾಗಿ; ತದ್ವಿರುದ್ಧವಾಗಿ.
(ವಸ್ತುವನ್ನು, ವ್ಯಕ್ತಿಯನ್ನು) ತಡೆಯಾಗಿ, ವಿರೋಧಿಯಾಗಿ, ಪ್ರತಿಭಾರವಾಗಿ, ಪ್ರತಿದ್ವಂದ್ವಿಯಾಗಿ, ವೈದೃಶ್ಯ ತೋರುವಂತೆ–ಇಡು, ಒಡ್ಡು, ಹೇಳು; ಮಾರೊಡ್ಡು; ಎದುರುಬದುರಾಗಿಡು; ಮುಖಾಮುಖಿಯಾಗಿಡು: to fury let us oppose patience ರೋಷಕ್ಕೆ ಎದುರಾಗಿ ತಾಳ್ಮೆಯನ್ನು ಒಡ್ಡೋಣ; ರೋಷವನ್ನು ತಾಳ್ಮೆಯಿಂದ ಎದುರಿಸೋಣ. to Plato I oppose Aristotle ಪ್ಲೇಟೋ ವಿರುದ್ಧ ಅರಿಸ್ಟಾಟಲನನ್ನು ಎದುರೊಡ್ಡುತ್ತೇನೆ, ಪ್ರತಿದ್ವಂದ್ವಿಯಾಗಿಡುತ್ತೇನೆ. the thumb can be opposed to any of the fingers ಹೆಬ್ಬೆಟ್ಟನ್ನು ಯಾವ ಬೆರಳಿಗಾದರೂ ಎದುರುಬದುರು ಮಾಡಬಹುದು.
ವಸ್ತುಗಳನ್ನು ವಿರೋಧಾತ್ಮಕವಾಗಿ ನಿರೂಪಿಸು; ಪರಸ್ಪರ ವಿರೋಧಭಾವದಲ್ಲಿ ತಿಳಿಸು, ತೋರಿಸು.
(ವ್ಯಕ್ತಿಯನ್ನು, ವಸ್ತುವನ್ನು) ವಿರೋಧಿಸು; ಎದುರಿಸು; ಎದುರಾಗಿ ನಿಲ್ಲು; ವಿರುದ್ಧ ಹೋರಾಡು: oppose the government ಸರ್ಕಾರವನ್ನು ಎದುರಿಸು; ಸರ್ಕಾರದ ವಿರುದ್ಧ ಹೋರಾಡು.