logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inconsolable
ಗುಣವಾಚಕ
(ವ್ಯಕ್ತಿಯ ಯಾ ಅವನ ದುಃಖ, ಮೊದಲಾದವುಗಳ ವಿಷಯದಲ್ಲಿ) ಸಂತೈಸಲಾಗದ; ಸಮಾಧಾನಗೊಳಿಸಲಾಗದ; ಸಾಂತ್ವನಗೊಳಿಸಲಾಗದ; ಉಪಶಮನಮಾಡಲಾಗದ.

inconsolably
ಕ್ರಿಯಾವಿಶೇಷಣ
(ವ್ಯಕ್ತಿಯ ಯಾ ಅವನ ದುಃಖ ಮೊದಲಾದವುಗಳ ವಿಷಯದಲ್ಲಿ) ಸಂತೈಸಲಾಗದಂತೆ; ಸಮಾಧಾನಪಡಿಸಲಾಗದಂತೆ.

inconsonance
ನಾಮವಾಚಕ
ಅಸಾಮರಸ್ಯ; ಸಮರಸವಾಗಿಲ್ಲದಿರುವಿಕೆ; ಹೊಂದಿಕೆಯಿಲ್ಲದಿರುವಿಕೆ; ಮೇಳನವಿಲ್ಲದಿರುವುದು.

inconsonant
ಗುಣವಾಚಕ
ಸಾಮರಸ್ಯವಿಲ್ಲದ; ಹೊಂದಿಕೆಯಿಲ್ಲದ; ಮೇಳನವಿಲ್ಲದ.

inconspicuous
ಗುಣವಾಚಕ
  • ಅಸ್ಪಷ್ಟ; ಅಸ್ಫುಟ; ಎದ್ದು ಕಾಣದ; ಸ್ಪಷ್ಟ ಗೋಚರವಲ್ಲದ; ಕಣ್ಣು, ಗಮನ – ಸೆಳೆಯದ.
  • (ಸಸ್ಯವಿಜ್ಞಾನ) (ಹೂವುಗಳ ವಿಷಯದಲ್ಲಿ) ಸಣ್ಣದಾದ ಯಾ ಕಾಂತಿಹೀನ ಯಾ ಹಸುರಾದ.

  • inconspicuously
    ಕ್ರಿಯಾವಿಶೇಷಣ
    ಅಸ್ಪಷ್ಟವಾಗಿ; ಎದ್ದುಕಾಣದಂತೆ; ಕಣ್‍ಸೆಳೆಯದಂತೆ; ಗಮನ ಸೆಳೆಯದ ಹಾಗೆ.

    inconspicuousness
    ನಾಮವಾಚಕ
    ಅಸ್ಪಷ್ಟತೆ; ಎದ್ದುಕಾಣದಂತಿರುವುದು; ಕಣ್ಣು, ಗಮನ – ಸೆಳೆಯುವಂತಿಲ್ಲದಿರುವುದು.

    inconstancy
    ನಾಮವಾಚಕ
  • (ವ್ಯಕ್ತಿಯ ವಿಷಯದಲ್ಲಿ) ಚಪಲಚಿತ್ತತೆ; ಚಂಚಲ ಸ್ವಭಾವ; ಅದೃಢತೆ; ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುವ ಸ್ವಭಾವ.
  • ಅಸ್ಥಿರತೆ; ಪರಿವರ್ತನಶೀಲತೆ; ವ್ಯತ್ಯಾಸ ಹೊಂದುತ್ತಿರುವಿಕೆ; ಬದಲಾಯಿಸುತ್ತಲೇ ಇರುವ ಸ್ವಭಾವ.

  • inconstant
    ಗುಣವಾಚಕ
  • (ವ್ಯಕ್ತಿಯ ವಿಷಯದಲ್ಲಿ) ಚಪಲ; ಚಂಚಲ; ದೃಢವಾಗಿರದ; ವ್ಯತ್ಯಾಸ ಹೊಂದುತ್ತಿರುವ; ಬದಲಾಯಿಸುತ್ತಿರುವ.
  • (ವಸ್ತುಗಳ ವಿಷಯದಲ್ಲಿ) ಅಸ್ಥಿರ; ಪರಿವರ್ತನಶೀಲ; ಬದಲಾಯಿಸುತ್ತಿರುವ; ವ್ಯತ್ಯಾಸವಾಗುತ್ತಿರುವ.

  • inconstantly
    ಕ್ರಿಯಾವಿಶೇಷಣ
  • (ವ್ಯಕ್ತಿಯ ವಿಷಯದಲ್ಲಿ) ಚಪಲಚಿತ್ತದಿಂದ; ಚಂಚಲವಾಗಿ; ದೃಢವಾಗಿರದೆ; ಬದಲಾಯಿಸುತ್ತ.
  • ಅಸ್ಥಿರವಾಗಿ; ಪರಿವರ್ತನೆ ಹೊಂದುತ್ತಾ; ವ್ಯತ್ಯಾಸವಾಗುತ್ತ; ಬದಲಾಯಿಸುತ್ತ.


  • logo