logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oppidan
ನಾಮವಾಚಕ
(ವಿರಳ ಪ್ರಯೋಗ)
  • ನಗರ(ನಿ)ವಾಸಿ; ಪಟ್ಟಣಿಗ.
  • (ಈಟನ್‍) ಕಾಲೇಜಿನಲ್ಲಿ ವಾಸಮಾಡದ ವಿದ್ಯಾರ್ಥಿ; (ಕಾಲೇಜಿನ ಹೊರಗೆ) ಊರಿನ ಭೋಜನಗೃಹದಲ್ಲಿದ್ದುಕೊಂಡು ಓದುವ ವಿದ್ಯಾರ್ಥಿ.

  • oppilate
    ಸಕರ್ಮಕ ಕ್ರಿಯಾಪದ
    (ವೈದ್ಯಶಾಸ್ತ್ರ) (ಪ್ರಾಚೀನ ಪ್ರಯೋಗ) ಅಡಚು; ತಡೆಗಟ್ಟು; ಅಡ್ಡಗಟ್ಟು; ಅಡ್ಡಿಮಾಡು; ನಿರೋಧಿಸು.

    oppilation
    ನಾಮವಾಚಕ
    (ವೈದ್ಯಶಾಸ್ತ್ರ) (ಪ್ರಾಚೀನ ಪ್ರಯೋಗ) ತಡೆಗಟ್ಟುವಿಕೆ; ಅಡ್ಡಗಟ್ಟುವಿಕೆ; ಅಡ್ಡಿ ಮಾಡುವಿಕೆ; ನಿರೋಧ; ಪ್ರತಿರೋಧ.

    oppo
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು)
  • ಸಹೋದ್ಯೋಗಿ; ಸಹಚರ.
  • ಸ್ನೇಹಿತ; ಗೆಳೆಯ.

  • opponency
    ನಾಮವಾಚಕ
    ವಿರೋಧ; ಪ್ರತಿರೋಧ.

    opponent
    ಗುಣವಾಚಕ ಪದಗುಚ್ಛ
    opponent muscle ವ್ಯಾವರ್ತಕ ಸ್ನಾಯು; ಹೆಬ್ಬೆಟ್ಟನ್ನು ಅದೇ ಕೈಯ ಇತರ ಬೆರಳುಗಳ ಎದುರಿಗೆ ತರುವಂತೆ ಮಾಡುವ ಸ್ನಾಯು.
  • ಎದುರಾಗುವ; ಅಭಿಮುಖ.
  • ವಿರೋಧಿಸುವ; ವಿರುದ್ಧ; ವ್ಯತಿರಿಕ್ತ.

  • opponent
    ನಾಮವಾಚಕ
    (ಸ್ಪರ್ಧೆ ಮೊದಲಾದವುಗಳಲ್ಲಿ) ಎದುರಾಳಿ; ವಿರೋಧಿ; ಪ್ರತಿಕಕ್ಷಿ; ಪ್ರತಿ ಪಕ್ಷಿ.

    opportune
    ಗುಣವಾಚಕ
  • (ಕಾಲದ ವಿಷಯದಲ್ಲಿ) ತಕ್ಕ; ಉಚಿತ; ಸಮಯೋಚಿತ; ಅನುಕೂಲವಾದ; ಸಕಾಲಿಕ; ತಕ್ಕಂತೆ ಗೊತ್ತುಮಾಡಿದ; ಆರಿಸಿಟ್ಟಂತೆ ಅನುಕೂಲವಾದ: an opportune warning ಸಕಾಲಿಕ ಎಚ್ಚರಿಕೆ.
  • (ಕಾರ್ಯ, ಘಟನೆ) ಸಮಯೋಚಿತ; ಸಕಾಲಿಕ; ಸಂದರ್ಭೋಚಿತ; (ಉದ್ದೇಶಪೂರ್ವಕವಾಗಿಯೋ ಅಕಸ್ಮಾತ್ತಾಗಿಯೋ) ಅನುಕೂಲ ಸಂದರ್ಭದಲ್ಲಿ–ನಡೆದ, ನಡೆಯುವ, ಸಂಭವಿಸುವ.

  • opportunely
    ಕ್ರಿಯಾವಿಶೇಷಣ
  • (ಕಾಲದ ವಿಷಯದಲ್ಲಿ) ಸಮಯೋಚಿತವಾಗಿ; ಸಕಾಲಿಕವಾಗಿ; ಅನುಕೂಲವಾಗಿ;
  • (ಕಾರ್ಯ, ಘಟನೆ) ಸಮಯೋಚಿತ ರೀತಿಯಲ್ಲಿ; ಸಂದರ್ಭೋಚಿತವಾಗಿ; ಸಕಾಲಿಕವಾಗಿ; ಅನುಕೂಲ ಸಂದರ್ಭಕ್ಕೆ ಸಂಭವಿಸುವಂತೆ.

  • opportuneness
    ನಾಮವಾಚಕ
    ಸಮಯೋಚಿತತೆ; ಸಮಯಾನುಕೂಲತೆ; ಸಕಾಲಿಕತೆ; ಸಂದರ್ಭೌಚಿತ್ಯ; ಕಾಲೋಚಿತತೆ.


    logo