logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lefty
ನಾಮವಾಚಕ
(ಆಡುಮಾತು)
  • ಎಡಚ; ಕೆಲಸಗಳಿಗೆ ಎಡಗೈ ಬಳಸುವವ.
  • (ರಾಜನೀತಿಶಾಸ್ತ್ರ) ವಾಮಪಂಥೀಯ.

  • leg
    ನಾಮವಾಚಕ ಪದಗುಚ್ಛ ನುಡಿಗಟ್ಟು
  • (ಮನುಷ್ಯ ಯಾ ಪ್ರಾಣಿ ನಡೆಯಲು ಯಾ ನಿಲ್ಲಲು ಬಳಸುವ) ಕಾಲು.
  • ಕಾಲು; ಸೊಂಟದಿಂದ ಹರಡಿನವರೆಗಿನ ಭಾಗ.
  • (ಆಹಾರವಾಗಿ ಬಳಸುವ) ಪ್ರಾಣಿಯ, ಮೃಗದ – ಕಾಲು.
  • ಕೃತಕ ಕಾಲು: wooden leg ಮರದ ಕಾಲು. cork leg ಬೆಂಡಿನ ಕಾಲು.
  • (ಉಡುಪಿನ) ಕಾಲು; ಕಾಲನ್ನು ಪೂರ್ತಿ ಯಾ ಭಾಗಶಃ ಮುಚ್ಚುವ ಉಡುಪಿನ ಭಾಗ.
  • (ಮೇಜು, ಕುರ್ಚಿ, ಮಂಚ, ಮೊದಲಾದವುಗಳ) ಕಾಲು; ಆಸರೆ; ಊರೆ; ಆಧಾರ.
  • ಕಾಲು; ಒದೆ ಕೊಟ್ಟಿರುವ, ಉದ್ದವಾಗಿ ತೆಳ್ಳಗಿರುವ ಆಸರೆ, ಮುಖ್ಯವಾಗಿ ಕಂಬ.
  • (ಕ್ರಿಕಿಟ್‍) ಲೆಗ್‍(ಸ್ಥಾನ); ಬೋಲರನ್ನು ಎದುರಿಸುತ್ತಿರುವ ಬಲಗೈ ದಾಂಡುಗಾರನ ಸ್ಥಾನದ ಎಡ ಪಕ್ಕದ ಹಿಂಭಾಗ.
  • (ದೂರ ಯಾನ ಯಾ ಪ್ರಯಾಣದ) ಒಂದು ಘಟ್ಟ, ಮಜಲು, ಹಂತ.
  • ಲೆಗ್‍:
    1. ವರಸೆ; ಪಾಳಿ; ಸುತ್ತು; ರಿಲೇ ಓಟದ ಪಂದ್ಯದಲ್ಲಿನ ಒಂದು ಹಂತ, ಘಟ್ಟ.
    2. (ಎರಡು ಯಾ ಹೆಚ್ಚು ಆಟಗಳು ಕೂಡಿ ಆಗಿರುವ ಒಂದು ಸುತ್ತಿನಲ್ಲಿ) ಒಂದು ಆಟ.
    3. ಸ್ಪರ್ಧೆಯಲ್ಲಿನ ಒಂದು – ಹಂತ, ಘಟ್ಟ.
  • ಕಾಲು; ಕವಲೊಡೆದಿರುವ, ಕವಲಿನಂತಿರುವ ವಸ್ತುವಿನ ಒಂದು ಕವಲು, ಶಾಖೆ.
  • (ನೌಕಾಯಾನ) ಯಾನ ದೂರ; ಯಾನದ ವರಸೆ, ಘಟ್ಟ, ಮಜಲು; ದಿಕ್ಕು ಬದಲಾಯಿಸದೆ ನೆಟ್ಟಗೆ ಸಾಗುತ್ತಿರುವ ಹಡಗು ಯಾವುದೇ ಒಂದು ನೇರದಲ್ಲಿ ಚಲಿಸುವ ದೂರ.
  • (ಪ್ರಾಚೀನ ಪ್ರಯೋಗ) ಒಂದು ಕಾಲನ್ನು ನೇರವಾಗಿಟ್ಟುಕೊಂಡು, ಇನ್ನೊಂದನ್ನು ಹಿಂದಕ್ಕೆ ಸರಿಸಿ ಕೊಂಚ ಬಾಗಿಸಿ ಮಾಡುವ ಒಂದು ಬಗೆಯ ಪ್ರಣಾಮ.
  • (ಬ್ರಿಟಿಷ್‍ ಪ್ರಯೋಗ) ವಂಚಕ; ಮೋಸಗಾರ.
  • (ಯಂತ್ರ ಮೊದಲಾದವುಗಳ) ಕಾಲು; ಆಸರೆ; ಊರೆಗೂಟ, ಊರೆಗೋಲು, ಮೊದಲಾದವು.
  • (ರೇಖಾಗಣಿತ) ಭುಜ; ತ್ರಿಭುಜದಲ್ಲಿ ಆಧಾರ ಯಾ ತಳರೇಖೆಯನ್ನು ಬಿಟ್ಟರೆ ಉಳಿಯುವ ಎರಡು ಭುಜಗಳಲ್ಲಿ ಒಂದು.

  • leg
    ಸಕರ್ಮಕ ಕ್ರಿಯಾಪದ ಪದಗುಚ್ಛ
    ಕಾಲಿನಿಂದ ದೋಣಿ ನಡೆಸು; ಸುರಂಗದ ಪಕ್ಕವನ್ನು ಕಾಲಿಂದ ಮೆಟ್ಟಿ ಸುರಂಗ ಕಾಲುವೆಯಲ್ಲಿ ದೋಣಿಯನ್ನು ನಡೆಸು ಯಾ ಮುಂದೆ ಹೋಗುವಂತೆ ಮಾಡು. leg it (ಆಡುಮಾತು) ವೇಗವಾಗಿ ನಡೆ ಯಾ ಓಡು.

    leg break
    ನಾಮವಾಚಕ
    (ಕ್ರಿಕೆಟ್‍) ಲೆಗ್‍ ಬ್ರೇಕು:
  • ನೆಲಕ್ಕೆ ಬಡಿದ ತರುವಾಯ ಬಲಗೈ ಬ್ಯಾಟುಗಾರನ ಎಡಪಕ್ಕಕ್ಕೆ ತಿರುಗುವಂತೆ ಎಸೆದ ಚೆಂಡು.
  • ಅಂತಹ ತಿರುವು.

  • leg slip
    ನಾಮವಾಚಕ
    (ಕ್ರಿಕೆಟ್‍) ಲೆಗ್‍ ಸ್ಲಿಪ್‍; ವಿಕೆಟ್ಟಿನ ಹಿಂಭಾಗದಲ್ಲಿ ‘ಲೆಗ್‍’ ಕಡೆಗೆ ಬ್ಯಾಟುಗಾರನು ತಳ್ಳಬಹುದಾದ ಚೆಂಡನ್ನು ತಡೆಯಲು ನಿಲ್ಲಿಸಿರುವ ಕ್ಷೇತ್ರರಕ್ಷಕ, ಹೀಲ್ಡರು.

    leg spin
    ನಾಮವಾಚಕ
    (ಕ್ರಿಕೆಟ್‍) ಲೆಗ್‍ ಸ್ಪಿನ್‍; ಪುಟವೆದ್ದ ಮೇಲೆ ಚೆಂಡು ‘ಲೆಗ್‍’ ಕಡೆಯಿಂದ ತಿರುಗುವಂತೆ ಮಾಡಿದ ‘ಸ್ಪಿನ್‍’ ಬೌಲಿಂಗು.

    leg stump
    ನಾಮವಾಚಕ
    (ಕ್ರಿಕೆಟ್‍) ಲೆಗ್‍ ಸ್ಟಂಪು; ‘ಲೆಗ್‍’ ಸ್ಥಾನದ ಹತ್ತಿರದ – ಸ್ಟಂಪು, ಗೂಟ, ಗುರಿಕೋಲು.

    leg theory
    ನಾಮವಾಚಕ
    (ಕ್ರಿಕೆಟ್‍) ಲೆಗ್‍ ತಂತ್ರ; ಹೆಚ್ಚು ಮಂದಿ ಹೀಲ್ಡರುಗಳನ್ನು ದಾಂಡುಗಾರನ ಎಡಪ್ರಾಂತದಲ್ಲಿ ತುಂಬಿ ಅವನ ಎಡಕ್ಕೇ ಬೋಲ್‍ ಮಾಡುವ ಸೂತ್ರ, ವಿಧಾನ.

    leg trap
    ನಾಮವಾಚಕ
    (ಕ್ರಿಕೆಟ್‍) ಲೆಗ್‍ಬಲೆ; ಲೆಗ್‍ಟ್ರ್ಯಾಪ್‍; ‘ಲೆಗ್‍’ ಕಡೆ ವಿಕೆಟ್‍ ಸಮೂಪದಲ್ಲಿ ನಿಂತಿರುವ ಹೀಲ್ಡರುಗಳ ತಂಡ.

    leg warmer
    ನಾಮವಾಚಕ
    ಕಾಲನ್ನು ಬೆಚ್ಚಗಿಡಲು ಬಳಸುವ, ಹರಡಿನಿಂದ ತೊಡೆಯವರೆಗೆ ಮುಚ್ಚುವ, ಕೊಳವೆಯಾಕಾರದ, ಹೆಣೆದ ಬಟ್ಟೆಯ ಕಾಲುಚೀಲ.


    logo