logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inconsiderable
ಗುಣವಾಚಕ
  • ಅಗಣ್ಯ; ಗಣನಾರ್ಹವಲ್ಲದ; ಲೆಕ್ಕಕ್ಕೆ ಬರದ; ಗಣನೆಗೆ ಬಾರದ.
  • (ಗಾತ್ರ, ಬೆಲೆ, ಮೊದಲಾದವುಗಳ ವಿಷಯದಲ್ಲಿ) ಅತ್ಯಲ್ಪ; ತೀರ ಕಡಿಮೆಯ; ಬಹಳ ಸ್ವಲ್ಪ.

  • inconsiderableness
    ನಾಮವಾಚಕ
  • ಅಗಣ್ಯತೆ; ಲೆಕ್ಕಕ್ಕೆ ಬಾರದೆ ಇರುವಿಕೆ; ಪರಿಗಣನೆಗೆ ಅರ್ಹವಲ್ಲದಿರುವಿಕೆ.
  • ಅಮುಖ್ಯತೆ; ಪ್ರಾಮುಖ್ಯ, ಪ್ರಾಧಾನ್ಯ – ಕಡಿಮೆಯಾಗಿರುವಿಕೆ.
  • ಅಲ್ಪತ್ವ; ಬೆಲೆ ಯಾ ಪರಿಮಾಣ ಸ್ವಲ್ಪವಾಗಿರುವಿಕೆ.
  • ಅತ್ಯಲ್ಪ ಪರಿಮಾಣ.

  • inconsiderably
    ಕ್ರಿಯಾವಿಶೇಷಣ
  • ಅಗಣ್ಯವಾಗಿ; ಲೆಕ್ಕಕ್ಕೆ ಬಾರದಂತೆ.
  • ಅತ್ಯಲ್ಪವಾಗಿ; ಬಹಳ ಕಡಿಮೆಯಾಗಿ, ಸ್ವಲ್ಪವಾಗಿ.

  • inconsiderate
    ಗುಣವಾಚಕ
  • (ವ್ಯಕ್ತಿಯ ಯಾ ಕಾರ್ಯದ ವಿಷಯದಲ್ಲಿ) ದುಡುಕಿನ; ವಿವೇಚನೆಯಿಲ್ಲದ; ವಿಚಾರಶೂನ್ಯ; ಪರ್ಯಾಲೋಚನೆಯಿಲ್ಲದ.
  • ಲೆಕ್ಕಿಸದ; ದಯೆದಾಕ್ಷಿಣ್ಯಹೀನ; ಇತರರ ಭಾವನೆಗಳು ಮೊದಲಾದವುಗಳಿಗೆ ಗಣನೆ, ಗೌರವ ಕೊಡದ.

  • inconsiderately
    ಕ್ರಿಯಾವಿಶೇಷಣ
  • (ವ್ಯಕ್ತಿಯ ಯಾ ಕಾರ್ಯದ ವಿಷಯದಲ್ಲಿ) ದುಡುಕಿನಿಂದ; ವಿವೇಚನೆಯಿಲ್ಲದೆ; ವಿಚಾರಶೂನ್ಯವಾಗಿ; ಪರ್ಯಾಲೋಚನೆಯಿಲ್ಲದೆ.
  • (ಇತರರ ಭಾವನೆಗಳು ಮೊದಲಾದವುಗಳಿಗೆ) ಗಣನೆ, ಗೌರವ ಕೊಡದೆ; ದಯಾದಾಕ್ಷಿಣ್ಯರಹಿತವಾಗಿ.

  • inconsiderateness
    ನಾಮವಾಚಕ
  • (ವ್ಯಕ್ತಿಯ ಯಾ ಕಾರ್ಯದ ವಿಷಯದಲ್ಲಿ) ದುಡುಕು(ತನ); ವಿಚಾರಶೂನ್ಯತೆ; ವಿವೇಚನರಾಹಿತ್ಯ; ಪರ್ಯಾಲೋಚನೆಯಿಲ್ಲದಿರುವಿಕೆ.
  • (ಇತರರ ಭಾವನೆಗಳು ಮೊದಲಾದವುಗಳಿಗೆ) ಗಣನೆ, ಗೌರವ ಕೊಡದಿರುವಿಕೆ; ದಯಾದಾಕ್ಷಿಣ್ಯರಾಹಿತ್ಯ.

  • inconsideration
    ನಾಮವಾಚಕ
    = inconsiderateness.

    inconsistency
    ನಾಮವಾಚಕ
  • ಅಸಾಮಂಜಸ್ಯ; ಅಸಂಗತತೆ; ಸಾಮರಸ್ಯವಿಲ್ಲದಿರುವಿಕೆ; ಹೊಂದದಿರುವಿಕೆ.
  • (ಒಂದು ವಿಷಯದ ಯಾ ವಸ್ತುವಿನ ವಿಷಯದಲ್ಲಿ) ಅಸಾಮಂಜಸ್ಯ; ಭಾಗಗಳು ಪರಸ್ಪರ ಹೊಂದದಿರುವಿಕೆ.
  • (ನಡೆವಳಿ, ವರ್ತನೆಗಳ ವಿಷಯದಲ್ಲಿ) ಅಸಾಮಂಜಸ್ಯ; ಪೂರ್ವಾಪರವಿರೋಧ; ಸ್ವಂತ ತತ್ತ್ವಗಳಿಗೇ ಯಾ ತನ್ನ ಹಿಂದಿನ ನಡೆವಳಿಗೇ ವಿರುದ್ಧವಾಗಿ ನಡೆಯುವುದು.

  • inconsistent
    ಗುಣವಾಚಕ
  • (ಒಂದರೊಡನೆ) ಹೊಂದದ; ಸಾಮರಸ್ಯವಿಲ್ಲದ; ಅಸಮಂಜಸ; ಅಸಂಗತ.
  • (ಒಂದು ವಿಷಯದ ಯಾ ವಸ್ತುವಿನ ವಿಷಯದಲ್ಲಿ) ಅಸಮಂಜಸ; ಹೊಂದಿಕೆಯಾಗದ ಭಾಗಗಳುಳ್ಳ.
  • (ನಡೆವಳಿ ಯಾ ವರ್ತನೆಯ ವಿಷಯದಲ್ಲಿ) ಅಸಂಗತ; ಅಸಮಂಜಸ; ಸ್ವವಿರುದ್ಧ; ಪೂರ್ವಾಪರ ವಿರುದ್ಧ.

  • inconsistently
    ಕ್ರಿಯಾವಿಶೇಷಣ
  • ಅಸಮಂಜಸವಾಗಿ; ಅಸಂಗತವಾಗಿ; ಹೊಂದದ ರೀತಿಯಲ್ಲಿ; ಸಾಮರಸ್ಯವಿಲ್ಲದೆ.
  • (ಒಂದು ವಸ್ತುವಿನ ಯಾ ವಿಷಯದ ವಿಷಯದಲ್ಲಿ) ಅಸಮಂಜಸವಾಗಿ; ಭಾಗಗಳು ಪರಸ್ಪರ ಹೊಂದಿಕೆಯಿಲ್ಲದಂತೆ.
  • (ನಡೆವಳಿಯ ವಿಷಯದಲ್ಲಿ) ಪೂರ್ವಾಪರವಿರೋಧವಾಗಿ; ಸ್ವಂತ ತತ್ತ್ವಗಳಿಗೇ ಯಾ ತನ್ನ ಹಿಂದಿನ ನಡೆವಳಿಗೇ ವಿರುದ್ಧವಾಗಿ.


  • logo