ಅಭಿಪ್ರಾಯ: in my opinion ನನ್ನ ಅಭಿಪ್ರಾಯದಲ್ಲಿ; ನನಗೆ ತೋರುವುದರಲ್ಲಿ.
ಸದ್ಯದ ನಂಬಿಕೆ: am of opinion that ಈ ರೀತಿಯಾಗಿ ಸದ್ಯದಲ್ಲಿ ನಂಬಿದ್ದೇನೆ.
ಎಣಿಕೆ; ತೋಚಿಕೆ; ಅನಿಸಿಕೆ.
ಜನಾಭಿಪ್ರಾಯ; ಲೋಕಾಭಿಪ್ರಾಯ; ಲೋಕಮತ; ಜನಸಾಮಾನ್ಯರಲ್ಲಿ ರೂಢಿಯಾಗಿರುವ, (ಮುಖ್ಯವಾಗಿ ನೈತಿಕ ಪ್ರಶ್ನೆಗಳನ್ನು ಕುರಿತ) ಭಾವನೆ ಯಾ ಅಭಿಪ್ರಾಯ.
(ನಿರ್ದಿಷ್ಟ ಪ್ರಶ್ನೆಯ ಬಗ್ಗೆ ಒಬ್ಬನ) ಆಲೋಚನೆ; ದೃಢಾಭಿಪ್ರಾಯ; ದೃಢ ನಂಬಿಕೆ: my opinion on smoking ಧೂಮಪಾನದ ಬಗ್ಗೆ ನನ್ನ ಅಭಿಪ್ರಾಯ, ಆಲೋಚನೆ.
(ವಾಸ್ತವಾಂಶ ಯಾ ಸರಿಯಾದ ಕ್ರಮ ಹೀಗೆಂದು ಸಲಹೆ ಕೇಳಿದಾಗ ನೀಡುವ) ತಜ್ಞಾಭಿಪ್ರಾಯ; ತಜ್ಞ ಸಲಹೆ; ತಜ್ಞನ, ಪರಿಣತನ–ವಿಧಿವತ್ತಾದ ಹೇಳಿಕೆ; ವೃತ್ತಿ ನಿಪುಣನ ಅಭಿಪ್ರಾಯ: you had better have another opinion ನೀನು ಮತ್ತೊಬ್ಬ ತಜ್ಞನ ಸಲಹೆಯನ್ನು ಪಡೆಯುವುದು ಮೇಲು.
ಎಣಿಕೆ; ಅಭಿಪ್ರಾಯ: have a very high opinion of him ಅವನ ಬಗ್ಗೆ ನನಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ.
(ನಿಷೇಧಪದದೊಡನೆ) ಸದಭಿಪ್ರಾಯ; ಒಳ್ಳೆಯ ಅಭಿಪ್ರಾಯ; ಮೆಚ್ಚಿಕೆ ತೋರಿಸುವ ಅಭಿಪ್ರಾಯ: I have no opinion of Frenchmen ಹ್ರೆಂಚ್ ಜನರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ.
(ನ್ಯಾಯಶಾಸ್ತ್ರ) ಕಾರಣ–ನಿರ್ದೇಶ, ನಿರೂಪಣ; ತೀರ್ಪಿಗೆ ಆಧಾರವಾದ ಕಾರಣಗಳನ್ನು ತಿಳಿಸುವ ವಿದ್ಯುಕ್ತ ಹೇಳಿಕೆ.
opinion poll
ನಾಮವಾಚಕ
= Gallup poll.
opinionated
ಗುಣವಾಚಕ
ಹಠವಾದಿ; ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವ; ತಾನು ಹೇಳಿದ್ದೇ ಸರಿಯೆನ್ನುವ.
ಹಠಮಾರಿತನದ; ದುರಾಗ್ರಹದ.
ಸ್ವೈರ; ಸ್ವೇಚ್ಛಾ ಮನೋವೃತ್ತಿಯ; ತನ್ನ ಇಚ್ಛೆಯಂತೆ ನಡೆಯುವ.
opinionatedly
ಕ್ರಿಯಾವಿಶೇಷಣ
ಹಠವಾದಿಯಂತೆ; ತಾನು ಹೇಳಿದ್ದೇ ಸರಿ ಎನ್ನುವಂತೆ.
ಹಠಮಾರಿತನದ ರೀತಿಯಲ್ಲಿ.
ಸ್ವೇಚ್ಛಾ ಮನೋವೃತ್ತಿಯಿಂದ.
opinionatedness
ನಾಮವಾಚಕ
ಹಠವಾದಿತ್ವ; ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ, ಹಠ ಹಿಡಿಯುವುದು.
ಹಠಮಾರಿತನ; ದುರಾಗ್ರಹ.
ಸ್ವೈರತೆ; ಸ್ವೇಚ್ಛಾ ಮನೋವೃತ್ತಿ.
opinionative
ಗುಣವಾಚಕ
= opinionated.
opisometer
ನಾಮವಾಚಕ
ವಕ್ರರೇಖಾ ಮಾಪಕ; ವಕ್ರರೇಖೆಗಳ (ಮುಖ್ಯವಾಗಿ ನಕ್ಷೆಗಳ ಮೇಲಣ ವಕ್ರರೇಖೆಗಳು) ಉದ್ದವನ್ನು ಅಳೆಯಲು ಬಳಸುವ ಉಪಕರಣ.
opisthograph
ನಾಮವಾಚಕ
(ಗ್ರೀಕ್ ಮತ್ತು ರೋಮನ್ ಪ್ರಾಕ್ತನಶಾಸ್ತ್ರ) ಎರಡು ಕಡೆಯೂ ಬರೆದಿರುವ ತೊಗಲ ಕಾಗದ ಯಾ ಫಲಕ ಯಾ ಹಸ್ತಪ್ರತಿ.
opium
ನಾಮವಾಚಕ
ಅಹೀಮು; ಒಂದು ಬಗೆಯ ಗಸಗಸೆ (ಕಸಕಸೆ)ಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ, ಮಯಕ ಯಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು.
ಅಫೀಮು; ಶಮನಗೊಳಿಸುವ ಯಾ ಮತ್ತು ಬರಿಸುವ ಯಾ ಜಡಗೊಳಿಸುವ ಯಾವುದೇ ವಸ್ತು.