logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

left flank
ನಾಮವಾಚಕ
= left wing.

left hand
ನಾಮವಾಚಕ
  • ಎಡಗೈ; ವಾಮಹಸ್ತ.
  • ಎಡಭಾಗ; ವಾಮಪಾರ್ಶ್ವ; ವ್ಯಕ್ತಿಯ ಎಡಗಡೆಗೆ ಇರುವ ಪ್ರದೇಶ ಯಾ ದಿಕ್ಕು.

  • left turn
    ನಾಮವಾಚಕ
    ಎಡತಿರುವು.

    left wing
    ನಾಮವಾಚಕ
  • (ಸೈನ್ಯದ) ಎಡಭಾಗ; ವಾಮಕಕ್ಷೆ; ಎಡಪಕ್ಷ.
  • (ರಾಜಕೀಯ ಪಕ್ಷವೊಂದರ) ತೀವ್ರವಾದಿ ಯಾ ಸಮಾಜವಾದಿ ಗುಂಪು.
  • (ಮೈದಾನದಲ್ಲಿ ಆಡುತ್ತಿರುವ ಹುಟ್‍ಬಾಲ್‍ ಮೊದಲಾದ ಆಟಗಳ) ಎಡಪಕ್ಕ; ವಾಮಭಾಗ.

  • left-hand
    ಗುಣವಾಚಕ
  • (ವ್ಯಕ್ತಿ ಯಾ ವಸ್ತುವಿನ) ಎಡ; ಎಡಪಕ್ಕದ; ಎಡಗಡೆಗಿರುವ; ಎಡದಿಕ್ಕಿಗಿರುವ: left-hand drive ಎಡಗೈ ಚಾಲನೆ.
  • ಎಡಗೈಯಿಂದ ಮಾಡಿದ: left-hand blow ಎಡಗೈ ಏಟು.
  • (ಹಗ್ಗದ ವಿಷಯದಲ್ಲಿ) ಎಡಮುರಿ; ಎಡಕ್ಕೆ ತಿರುಚಿ ಹೊಸೆದ.
  • = left-handed(6).

  • left-handed
    ಗುಣವಾಚಕ
  • ಎಡಚ; ಲೊಟ್ಟ; ರೊಡ್ಡಗೈಯ; ಸವ್ಯ; ಎಡಗೈಯನ್ನೇ ಹೆಚ್ಚಾಗಿ ಬಳಸುವ.
  • (ಸಲಕರಣೆಯ ವಿಷಯದಲ್ಲಿ) ಎಡಗೈಯ; ಎಡಗೈ ಬಳಕೆಯ; ಎಡಗೈಯ ಉಪಯೋಗಕ್ಕೆ ಹೊಂದಿಸಿದ, ತಕ್ಕ.
  • (ಏಟಿನ ವಿಷಯದಲ್ಲಿ) ಎಡಗೈಯ; ಎಡಗೈಯಿಂದ ಕೊಟ್ಟ.
  • ಎಡಗಡೆಯ; ಎಡಗಡೆಗೆ ತಿರುಗುವ ಯಾ ತಿರುಗಿದ.
  • (ರೇಸ್‍ಕೋರ್ಸಿನ ವಿಷಯದಲ್ಲಿ) ವಾಮಾವರ್ತಪಥದ; ಅಪ್ರದಕ್ಷಿಣವಾಗಿ – ತಿರುಗುವ, ತಿರುಗಿದ.
  • (ಸ್ಕ್ರೂ ಮೊಳೆಯ ವಿಷಯದಲ್ಲಿ) ಎಡ ತಿರುಪಿನ; ಎಡಗಡೆಗೆ ತಿರುಗಿಸಿ ಮುಡುಕುವ; ಅಪ್ರದಕ್ಷಿಣವಾಗಿ ತಿರುಗಿಸಿ ತಿರುಪನ್ನು ಒಳನೂಕುವ.
  • ಒಡ್ಡೊಡ್ಡಾದ; ಎಡವಟ್ಟಿನ; ವಿಕಾರವಾದ; ನಾಜೂಕಿಲ್ಲದ.
  • (ಪ್ರಶಂಸೆಯ ವಿಷಯದಲ್ಲಿ) ಸಂದಿಗ್ಧವಾದ; ಸಂಶಯಾತ್ಮಕವಾದ; ಇಬ್ಬಂದಿಯ; ಎರಡು ಕಡೆಗೂ ತಟ್ಟುವ.
  • ಕುಟಿಲ; ಕಪಟದ; ಕೃತ್ರಿಮದ; ಪ್ರಾಮಾಣಿಕವಲ್ಲದ; ನಿಜವಲ್ಲದ; ಕುಹಕದ.
  • (ಮದುವೆಯ ವಿಷಯದಲ್ಲಿ) = morganatic(1).

  • left-handedly
    ಕ್ರಿಯಾವಿಶೇಷಣ
  • ಎಡಗೈಯಿಂದ.
  • (ಪ್ರಶಂಸೆ ಮೊದಲಾದವುಗಳ ವಿಷಯದಲ್ಲಿ) ಸಂದಿಗ್ಧವಾಗಿ ಯಾ ಅಪ್ರಾಮಾಣಿಕವಾಗಿ.

  • left-handedness
    ನಾಮವಾಚಕ
    ಎಡಚುತನ; ರೊಡ್ಡಗೈತನ; ಸವ್ಯಸಾಚಿತ್ವ.

    left-hander
    ನಾಮವಾಚಕ
  • ಎಡಚ; ಎಡಗೈ ಆಟಗಾರ.
  • ಎಡಗೈ ಏಟು.

  • left-wing
    ಗುಣವಾಚಕ
    ಸಮಾಜವಾದಿ; ಎಡಪಕ್ಷದ; ವಾಮಪಕ್ಷದ; ವಾಮಪಂಥದ.


    logo