logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leeward
ನಾಮವಾಚಕ
ಗಾಳಿಮರೆಯ – ದಿಕ್ಕು, ಪಕ್ಕ: to leeward ಗಾಳಿಮರೆಯ ದಿಕ್ಕಿಗೆ, ಪಕ್ಕಕ್ಕೆ. on the leeward of ಗಾಳಿಮರೆಯ ದಿಕ್ಕಿನಲ್ಲಿ, ಪಕ್ಕದಲ್ಲಿ.

leewardly
ಕ್ರಿಯಾವಿಶೇಷಣ
(ಹಡಗಿನ ವಿಷಯದಲ್ಲಿ) ಗಾಳಿಮರೆಯ ಕಡೆ ಸರಿಯುವಂತೆ.

leewardmost
ಗುಣವಾಚಕ
(ಪ್ರಾಚೀನ ಪ್ರಯೋಗ) ತೀರಾ ಗಾಳಿಮರೆಯ ದಿಕ್ಕಿನ, ಪಕ್ಕದ; ಅತ್ಯಂತ ಗಾಳಿಮರೆಯ ಕಡೆಯ.

leeway
ನಾಮವಾಚಕ ನುಡಿಗಟ್ಟು
make up leeway ಕೊರತೆಯಾದದ್ದನ್ನು, ಅರಕೆಯಾದದ್ದನ್ನು, ಕಳೆದುಹೋದದ್ದನ್ನು ಕೂಡಿಸಿಕೊಳ್ಳಲು ಪ್ರಯಾಸಪಡು; ದುಃಸ್ಥಿತಿಯಿಂದ ತಪ್ಪಿಸಿಕೊಳ್ಳಲು ಒದ್ದಾಡು: have much leeway to make up ಪರಿಸ್ಥಿತಿಯನ್ನು ಹದಗೊಳಿಸಿಕೊಳ್ಳಲು ಇನ್ನೂ ಮೊದ್ದಾಡುತ್ತಿರು; ಮಾಡಬೇಕಾದ ಕೆಲಸದಲ್ಲಿ ಹಿಂದೆ ಬಿದ್ದಿರು.
  • ಮಗ್ಗಲು ಸರಿತ; ಅಡ್ಡಸರಿತ; ಸಾಗಬೇಕಾದ ಮಾರ್ಗದಿಂದ ಹಡಗು ತನ್ನ ಗಾಳಿಮರೆಯ ಕಡೆಗೆ ಅಡ್ಡಡ್ಡಲಾಗಿ ಸರಿಯುವುದು ಯಾ ಹಾಗೆ ಸರಿದ ಪ್ರಮಾಣ.
  • ಸ್ವಲ್ಪ ಆಚೆಈಚೆ ಹೋಗಲು ಇರುವ ಅವಕಾಶ; ಕಾರ್ಯಸ್ವಾತಂತ್ರ್ಯ.
  • (ಅಮೆರಿಕನ್‍ ಪ್ರಯೋಗ) ಸುರಕ್ಷಿತತೆಯ ಮಿತಿ, ಅವಕಾಶ.

  • left
    ಗುಣವಾಚಕ ಪದಗುಚ್ಛ ನುಡಿಗಟ್ಟು
  • ಎಡ; ವಾಮ; ಎಡದ; ಎಡಪಕ್ಕದ; ಎಡಮಗ್ಗುಲ; ಎಡಗಡೆಯ; ಎಡಗಡೆಯಲ್ಲಿರುವ; ಎಡಬದಿಯ; ಎಡಕಕ್ಷೆಯ; ಸವ್ಯ; ವಾಮಪಾರ್ಶ್ವದ.
  • (ಒಬ್ಬ ವ್ಯಕ್ತಿಯ ಯಾ ವಸ್ತುವಿನ) ಎಡಕ್ಕಿರುವ; ಎಡಬದಿಯ; ಎಡಗೈ – ಹತ್ತಿರದ, ಎದುರಿಗಿರುವ.
  • (Left ಎಂದೂ ಪ್ರಯೋಗ) (ರಾಜನೀತಿಶಾಸ್ತ್ರ) ಎಡಪಕ್ಷದ; ವಾಮಪಕ್ಷದ; ವಾಮಪಂಥದ.

  • left
    ಕ್ರಿಯಾವಿಶೇಷಣ ಪದಗುಚ್ಛ
    ಎಡದಲ್ಲಿ; ಎಡಭಾಗಕ್ಕೆ; ಎಡಬದಿಯಲ್ಲಿ; ವಾಮಪಾರ್ಶ್ವದಲ್ಲಿ. left and right ಎಡಬಲಗಳಲ್ಲಿ; ಎಲ್ಲಾ ಕಡೆಗಳಲ್ಲಿ.

    left
    ನಾಮವಾಚಕ
  • ಎಡಗೈ; ವಾಮಹಸ್ತ.
  • ಎಡಪಕ್ಕ; ಎಡಗಡೆ; ಸವ್ಯ; ವಾಮಭಾಗ.
  • ಎಡದಿಕ್ಕು.
  • (ಮುಷ್ಟಿಯುದ್ಧ)
    1. ಎಡಗೈ.
    2. ಎಡಗೈ – ಹೊಡೆತ, ಪೆಟ್ಟು, ಗುದ್ದು; ವಾಮಹಸ್ತಾಘಾತ.
  • (ರಾಜನೀತಿಶಾಸ್ತ್ರ)
    1. ವಾಮಪಕ್ಷ; ತೀವ್ರ ಸಮಾಜವಾದಿ ಗುಂಪು ಯಾ ವಿಭಾಗ.
    2. ವಾಮಪಕ್ಷೀಯರು; ತೀವ್ರಗಾಮಿಗಳು; (ಮೊದಲಿಗೆ ಯೂರೋಪಿನ ಕೆಲವು ಶಾಸನಸಭೆಗಳಲ್ಲಿ ಸಭಾಧ್ಯಕ್ಷನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಿದ್ದ) ತೀವ್ರ ಸುಧಾರಣಾವಾದಿಗಳ ಗುಂಪು.
  • (ಯಾವುದೇ ಗುಂಪಿನ) ಪ್ರಗತಿಶೀಲರು; ಪುರೋಗಾಮಿಗಳು; ಸುಧಾರಣಾವಾದಿಗಳು; ನವೀನರು; ನವಪಂಥೀಯರು; ಮುಂದುವರೆದವರು ಯಾ ಹೊಸತನ್ನು ತರುವವರು.
  • ಎಡರಂಗ; ನಾಟಕಶಾಲೆಯಲ್ಲಿ ಪ್ರೇಕ್ಷಕರಿಗೆ ಎಡಭಾಗದಲ್ಲಿರುವ ರಂಗದ ಪ್ರದೇಶ.
  • (ಮುಖ್ಯವಾಗಿ ಕವಾಯತಿನ ನಡಿಗೆಯಲ್ಲಿ) ಎಡಗಾಲು.
  • (ಸೈನ್ಯದ) ಎಡಭಾಗ; ವಾಮಕಕ್ಷೆ.

  • left
    ಕ್ರಿಯಾಪದ
    1leave ಧಾತುವಿನ ಭೂತರೂಪ ಮತ್ತು ಭೂತಕೃದಂತ ರೂಪ.

    left bank
    ನಾಮವಾಚಕ
    (ನದಿಯ) ಎಡದಂಡೆ; ವಾಮಪಾರ್ಶ್ವ; ಹರಿಯುವ ದಿಕ್ಕಿನ ಎಡಭಾಗದಲ್ಲಿರುವ ದಂಡೆ.

    left field
    ನಾಮವಾಚಕ
    ಎಡಮೈದಾನ; (ಬೇಸ್‍ಬಾಲ್‍ ಆಟ) ಚೆಂಡನ್ನು ಎಸೆಯುತ್ತಿರುವಾಗ (ಪಿಚರ್‍) ಬ್ಯಾಟುಗಾರನ ಎಡಗಡೆ ಇರುವ ಮೈದಾನದ ಹೊರ ಭಾಗ.


    logo