logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ophidian
ನಾಮವಾಚಕ
ಸರೀಸೃಪ; ಉರಗ; ಹಾವು; ಸರ್ಪ; ಹಾವುಗಳನ್ನೂ ಒಳಗೊಂಡಂತೆ ಸರ್ಪಂಟೀಸ್‍ (ಹಿಂದೆ ಓಹಿಡಿಯ) ಉಪಗಣಕ್ಕೆ ಸೇರಿದ, ಯಾವುದೇ ಉರಗವರ್ಗದ ಪ್ರಾಣಿ.

ophidian
ಗುಣವಾಚಕ
ಹಾವುಗಳ, ಅವಕ್ಕೆ ಸಂಬಂಧಿಸಿದ ಯಾ ಅವುಗಳಂತಹ.

ophio-
ಸಮಾಸ ಪೂರ್ವಪದ
ಸರ್ಪ, ಹಾವು, ನಾಗ ಎಂಬರ್ಥದ ಸಮಾಸ ಪೂರ್ವಪದ.

ophiolater
ನಾಮವಾಚಕ
ಸರ್ಪಪೂಜಕ; ನಾಗಾರಾಧಕ.

ophiolatry
ನಾಮವಾಚಕ
ನಾಗಪೂಜೆ; ಸರ್ಪಾರಾಧನೆ.

ophiology
ನಾಮವಾಚಕ
ಸರ್ಪಶಾಸ್ತ್ರ.

ophite
ನಾಮವಾಚಕ
ಹಾವುಗಲ್ಲು; ಸರ್ಪಶಿಲೆ; ನಾಗಶಿಲೆ; ಹಾವಿನ ಮಚ್ಚೆಗಳಂತಿರುವ ಗುರುತುಗಳುಳ್ಳ, ಹಸುರು ಬಣ್ಣದ ಶಿಲೆ.

ophthalmia
ನಾಮವಾಚಕ
ಕಣ್ಣಿನ ಉರಿತ; ಕಣ್ಣುಬೇನೆ; ಉರಿಗಣ್ಣು.

ophthalmic
ಗುಣವಾಚಕ
  • ಕಣ್ಣಿನ; ನೇತ್ರದ.
  • ಕಣ್ಣಿನ ಉರಿತವಿರುವ; ಕಣ್ಣುರಿತದ; ಕಣ್ಣುಬೇನೆಯ.
  • ಕಣ್ಣಿನ ಬೇನೆಯನ್ನು ಗುಣಪಡಿಸುವ; ನೇತ್ರರೋಗಹರ; ಕಣ್ಣಿನ ರೋಗಕ್ಕೆ ತಕ್ಕ.

  • ophthalmic
    ನಾಮವಾಚಕ
    ಕಣ್ಣು ಮದ್ದು; ನೇತ್ರೌಷಧ; ಕಣ್ಣಿನ ರೋಗಕ್ಕೆ ತಕ್ಕ ಔಷಧ.


    logo