logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incomparably
ಕ್ರಿಯಾವಿಶೇಷಣ
  • ಎಣೆಯಿಲ್ಲದಂತೆ; ಅನುಪಮವಾಗಿ; ಅಸದೃಶವಾಗಿ.
  • ಅತುಲನೀಯವಾಗಿ; ಹೋಲಿಸಲಾಗದಂತೆ.

  • incompatibility
    ನಾಮವಾಚಕ
  • (ಸ್ವಭಾವತಃ) ವಿರುದ್ಧವಾಗಿರುವಿಕೆ; ಹೊಂದಿಕೊಳ್ಳದಿರುವಿಕೆ; ಅಸಾಮರಸ್ಯ; ಅನನುರೂಪತೆ.
  • (ಪರಸ್ಪರ) ಹೊಂದಿಕೆಯಿಲ್ಲದಿರುವಿಕೆ; ಅಸಾಂಗತ್ಯ; ಅಸಮಂಜಸತೆ; ಅಸಾಮಂಜಸ್ಯ; ಅನನುರೂಪತೆ.
  • (ವ್ಯಕ್ತಿಗಳ ವಿಷಯದಲ್ಲಿ) ಒಮ್ಮತವಿಲ್ಲದಿರುವಿಕೆ; ಅಸಾಮರಸ್ಯ; ಒಂದಾಗಿ ಯಾ ಒಟ್ಟಿಗೆ ಬಾಳಲು, ಕೆಲಸ ಮಾಡಲು ಆಗದಿರುವಿಕೆ.

  • incompatible
    ಗುಣವಾಚಕ
  • (ಸ್ವಭಾವತಃ) ವಿರುದ್ಧವಾದ; ಹೊಂದಿಕೊಳ್ಳದ; ಅಸಮರಸ; ಸಾಮರಸ್ಯವಿಲ್ಲದ; ಮೇಳನವಿಲ್ಲದ; ಅನನುರೂಪ.
  • (ಪರಸ್ಪರ) ಹೊಂದಿಕೆಯಿಲ್ಲದ; ಅಸಂಗತ; ಅಸಮಂಜಸ; ಅಸಂಬದ್ಧ; ಅನನುರೂಪ.
  • (ವ್ಯಕ್ತಿಗಳ ವಿಷಯದಲ್ಲಿ) ಒಮ್ಮತವಿಲ್ಲದ; ಅನ್ಯೋನ್ಯವಾಗಿರದ; ಸಾಮರಸ್ಯವಿಲ್ಲದ; ಒಂದಾಗಿ ಬಾಳಲು ಯಾ ಕೆಲಸ ಮಾಡಲು ಆಗದ.
  • (ಔಷಧಗಳ ವಿಷಯದಲ್ಲಿ) ಒಟ್ಟಿಗೆ ಸೇವಿಸಕೂಡದ; ಏಕಕಾಲದಲ್ಲಿ ತೆಗೆದುಕೊಳ್ಳಲು ಯೋಗ್ಯವಲ್ಲದ.

  • incompetence
    ನಾಮವಾಚಕ
  • ಅಸಾಮರ್ಥ್ಯ; ಅದಕ್ಷತೆ; ಮಾಡಲು ಅರ್ಹತೆ, ಯೋಗ್ಯತೆ, ಶಕ್ತಿ – ಇಲ್ಲದಿರುವುದು.
  • (ನ್ಯಾಯಶಾಸ್ತ್ರ) (ಕಾನೂನಿನ ದೃಷ್ಟಿಯಲ್ಲಿ) ಅನರ್ಹತೆ; ಹಕ್ಕಿಲ್ಲದಿರುವಿಕೆ; ಅರ್ಹತೆ ಇಲ್ಲದಿರುವಿಕೆ; ಅಧಿಕಾರವಿಲ್ಲದಿರುವಿಕೆ.

  • incompetency
    ನಾಮವಾಚಕ
    = incompetence.

    incompetent
    ಗುಣವಾಚಕ
  • (ಯಾವುದೇ ಕೆಲಸ ಯಾ ಕರ್ತವ್ಯವನ್ನು ನಿರ್ವಹಿಸಲು) ಅಸಮರ್ಥವಾದ; ಅದಕ್ಷ; ಅನರ್ಹ: an incompetent builder ಅಸಮರ್ಥ ಶಿಲ್ಪಿ.
  • ಅಕುಶಲ; ಅದಕ್ಷ; ಬೇಕಾದ ಸಾಮರ್ಥ್ಯ ಯಾ ಯೋಗ್ಯತೆ ಇಲ್ಲದ: an incompetent performance ಅದಕ್ಷ ಪ್ರದರ್ಶನ.
  • (ವೈದ್ಯಶಾಸ್ತ್ರ) (ಮುಖ್ಯವಾಗಿ ಕವಾಟದ ವಿಷಯದಲ್ಲಿ) ಅಸಮರ್ಥ; ಅದಕ್ಷ; ತನ್ನ ಕ್ರಿಯೆಯನ್ನು ಮಾಡಲಾರದ.
  • (ನ್ಯಾಯಶಾಸ್ತ್ರ) (ಕಾನೂನಿನ ದೃಷ್ಟಿಯಲ್ಲಿ) ಅನರ್ಹ; ಹಕ್ಕಿಲ್ಲದ; ಅನಧಿಕಾರಿಯಾದ; ಅರ್ಹತೆ, ಅಧಿಕಾರ – ಇಲ್ಲದ.

  • incompetently
    ಕ್ರಿಯಾವಿಶೇಷಣ
  • ಅಸಮರ್ಥವಾಗಿ; ಅದಕ್ಷನಾಗಿ; ಮಾಡಲು ಅರ್ಹತೆ, ಯೋಗ್ಯತೆ, ಶಕ್ತಿ – ಇಲ್ಲದೆ.
  • (ನ್ಯಾಯಶಾಸ್ತ್ರ) (ಕಾನೂನಿನ ದೃಷ್ಟಿಯಲ್ಲಿ) ಅರ್ಹತೆಯಿಲ್ಲದೆ; ಅಧಿಕಾರವಿಲ್ಲದೆ; ಹಕ್ಕಿಲ್ಲದೆ.

  • incomplete
    ಗುಣವಾಚಕ
    ಪೂರೈಸದ; ಅಪೂರ್ಣ; ಅಸಮಗ್ರ; ಅಸಂಪೂರ್ಣ; ಪೂರ್ತಿಯಾಗಿಲ್ಲದ.

    incompletely
    ಕ್ರಿಯಾವಿಶೇಷಣ
    ಅಪೂರ್ಣವಾಗಿ; ಪೂರ್ತಿಯಾಗಿಲ್ಲದೆ.

    incompleteness
    ನಾಮವಾಚಕ
    ಅಪೂರ್ಣತೆ; ಅಸಮಗ್ರತೆ; ಪೂರ್ತಿಯಾಗಿಲ್ಲದಿರುವಿಕೆ.


    logo