logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ultramontanism
ನಾಮವಾಚಕ
ಪೋಪ್‍ಗೆ ಸರ್ವೋಚ್ಚ ಯಾ ಪರಮಾಧಿಕಾರ ಇರಬೇಕೆಂಬ ವಾದ.

ultramontanist
ನಾಮವಾಚಕ
ಪೋಪ್‍ಗೆ ಪರಮಾಧಿಕಾರವಿರಬೇಕೆಂದು ವಾದಿಸುವವನು.

ultramundane
ಗುಣವಾಚಕ
  • ಪಾರಲೌಕಿಕ; ಅನ್ಯಲೋಕ ಜೀವನದ; ಪ್ರಪಂಚಾತೀತ; ಇಹಲೋಕಕ್ಕೆ ಆಚೆಯ.
  • ಸೌರವ್ಯೂಹದ ಆಚೆಯ, ಆಚೆ ಇರುವ.

  • ultrasonic
    ಗುಣವಾಚಕ
    (ಭೌತವಿಜ್ಞಾನ) (ಧ್ವನಿಯ ವಿಷಯದಲ್ಲಿ) ಶ್ರವಣಾತೀತ; ಮನುಷ್ಯರ ಶ್ರವಣವ್ಯಾಪ್ತಿಯನ್ನು ಮೀರಿದ ಅಧಿಕ ಆವರ್ತದ ಯಾ ಅಂಥ ಧ್ವನಿತರಂಗಗಳನ್ನು ಒಳಗೊಂಡಿರುವ.

    ultrasonically
    ಕ್ರಿಯಾವಿಶೇಷಣ
    (ಮನುಷ್ಯರ ವಿಷಯದಲ್ಲಿ) ಶ್ರವಣಾತೀತವಾಗಿ; ಶ್ರವಣವ್ಯಾಪ್ತಿಯನ್ನು ಮೀರಿ.

    ultrasonics
    ನಾಮವಾಚಕ
    (ಬಹುವಚನ) (ಸಾಮಾನ್ಯವಾಗಿ ಏಕವಚನವಾಗಿ ಬಳಕೆ) ಶ್ರವಣಾತೀತ ವಿಜ್ಞಾನ; ಕಿವಿಗೆ ಕೇಳುವ ವ್ಯಾಪ್ತಿಯನ್ನು ಮೀರಿದ ತರಂಗಗಳ ಅಧ್ಯಯನ ಮತ್ತು ಅವುಗಳ ಅನ್ವಯ ಯಾ ಉಪಯೋಗ.

    ultrasound
    ನಾಮವಾಚಕ
  • ಶ್ರವಣಾತೀತ ಧ್ವನಿ.
  • ಶ್ರವಣಾತೀತ ಧ್ವನಿತರಂಗಗಳು.

  • ultrasound cardiography
    ನಾಮವಾಚಕ
    (ವೈದ್ಯಶಾಸ್ತ್ರ) ಶ್ರವಣಾತೀತ ಹೃಲ್ಲೇಖನ; ಹೃದಯದ ಕ್ರಿಯೆಯನ್ನು ಪರಿಶೀಲಿಸಲು ಶ್ರವಣಾತೀತ ತರಂಗಗಳನ್ನು ಬಳಸಿಕೊಳ್ಳುವುದು.

    ultrastructure
    ನಾಮವಾಚಕ
    (ಜೀವವಿಜ್ಞಾನ) ಅಧಿರಚನೆ; ದ್ಯುತಿಸೂಕ್ಷ ದರ್ಶಕದಲ್ಲಿ (optical microscope) ಗುರುತಿಸಲಾಗದ ಸೂಕ್ಷ ರಚನೆ.

    ultraviolet
    ಗುಣವಾಚಕ
  • (ವಿದ್ಯುತ್ಕಾಂತ ತರಂಗಗಳ ವಿಷಯದಲ್ಲಿ) ನೀಲಲೋಹಿತಾತೀತ; ನೇರಳಾತೀತ; ರೋಹಿತದ ನೇರಳೆ ತುದಿಯಿಂದ ಆಚೆಯ; ನೇರಳೆ ಬೆಳಕಿನ ಕಿರಣಗಳ ಆವೃತ್ತಿಗಿಂತ ಹೆಚ್ಚಿನ ಆವೃತ್ತಿಯುಳ್ಳ.
  • ನೇರಳಾತೀತ ವಿಕಿರಣದ ಯಾ ಆ ವಿಕಿರಣವನ್ನು ಉಪಯೋಗಿಸುವ.


  • logo