logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tack-driver
ನಾಮವಾಚಕ
ತಟ್ಟುಮೊಳೆ (ತಾನೇ ಇಟ್ಟುಕೊಂಡು) ಹೊಡೆಯುವ (ಸ್ವಯಂಚಲಿ) ಯಂತ್ರ.

tack-hammer
ನಾಮವಾಚಕ
(ಹೊಡೆದ ಮೊಳೆಗಳನ್ನು ಕೀಳುವ ಕೊಕ್ಕೆಯುಳ್ಳ) ತಟ್ಟುಮೊಳೆ (ಹೊಡೆಯುವ ಹಗುರ) ಸುತ್ತಿಗೆ.

tack-room
ನಾಮವಾಚಕ
ಜೀನುಕೋಣೆ; ಕುದುರೆಜೀನು ಮೊದಲಾದವುಗಳನ್ನಿಡುವ ಕೋಣೆ.

tacker
ನಾಮವಾಚಕ
  • (ಇಂಗ್ಲಿಷ್‍ ಚರಿತ್ರೆ) ಲಾರ್ಡ್‍ ಸಭೆಯಲ್ಲಿ ಅಂಗೀಕೃತವಾಗಲೆಂದು ಹಣಕಾಸು ಮಸೂದೆಯ ಜತೆಗೆ ಬೇರೆ ಮಸೂದೆಗಳನ್ನೂ ಲಗತ್ತಿಸಬೇಕೆಂಬ ಸೂಚನೆಯನ್ನು ಸಮರ್ಥಿಸುತ್ತಿದ್ದವನು.
  • ಸಾಮಾನುಗಳನ್ನು ಯಾ ಸಾಮಾನಿನ ಭಾಗಗಳನ್ನು ಒಟ್ಟಿಗೆ ಸೇರಿಸಿ ಕಟ್ಟುವವನು.
  • = tack-driver.

  • tackily
    ಕ್ರಿಯಾವಿಶೇಷಣ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಆಡುಮಾತು)
  • ಕೀಳು ಅಭಿರುಚಿಯದ್ದಾಗಿ.
  • ಕಚಡವಾಗಿ; ಕೊಳಕುಕೊಳಕಾಗಿ.

  • tackiness
    ನಾಮವಾಚಕ
    (ಬಣ್ಣ) ಅಂಟುವ ಸ್ಥಿತಿ; ಪಸೆ; ಹಸಿಹಸಿಯಾದ ಸ್ಥಿತಿ.

    tackiness
    ನಾಮವಾಚಕ
  • ಕೀಳು ಅಭಿರುಚಿ.
  • ಕಚಡವಾಗಿರುವಿಕೆ; ಕೊಳಕಾಗಿರುವಿಕೆ.

  • tackle
    ನಾಮವಾಚಕ
  • ಕಪ್ಪಿಯೆತ್ತಿಗೆ; ಎತ್ತಿಗೆ ಯಂತ್ರ; ಭಾರ ಎತ್ತುವುದು, ಹಡಗಿನ ಹಾಯಿ ಯಾ ದೂಲಗಳನ್ನು ಜೋಡಿಸುವುದು, ಮೊದಲಾದವಕ್ಕೆ ಬಳಸುವ ಹಗ್ಗ, ಕಪ್ಪಿತಂಡ, ಕೊಕ್ಕೆ, ಮೊದಲಾದವುಗಳನ್ನುಳ್ಳ ಯಂತ್ರ. Figure: tackles
  • ಹಗ್ಗ, ಕೊಕ್ಕೆಗಳಿರುವ ಉರುಳೆರಾಟೆ.
  • (ಕೆಲಸ, ಕ್ರೀಡೆ, ಮೊದಲಾದವುಗಳಿಗೆ ಅಗತ್ಯವಾದ) ಸಾಧನ ಸಲಕರಣೆ; ಸಜ್ಜು; ಸರಂಜಾಮು: fishing-tackle (ಗಾಳ, ದಾರ ಮತ್ತು ಕೋಲು ಕೂಡಿ) ಮೀನು ಹಿಡಿಯುವ ಸಲಕರಣೆ.
  • (ಹುಟ್‍ಬಾಲ್‍ ಆಟದಲ್ಲಿ) ತಡೆಹಿಡಿತ; ಚೆಂಡನ್ನು ಎದುರಾಳಿಯಿಂದ ಬಿಡಿಸಿಕೊಳ್ಳಲು (ನ್ಯಾಯಸಮ್ಮತವಾಗಿ) ಹಿಡಿದು, ತಡೆದು–ನಿಲ್ಲಿಸುವುದು.
  • (ಅಮೆರಿಕನ್‍ ಹುಟ್‍ಬಾಲ್‍ ಆಟ) ಮುನ್‍ಸಾಲಿನ ತುದಿಯ (ಆಟಗಾರನ) ಪಕ್ಕದ ಸ್ಥಾನ ಯಾ ಆ ಸ್ಥಾನದಲ್ಲಿನ ಆಟಗಾರ.

  • tackle
    ಸಕರ್ಮಕ ಕ್ರಿಯಾಪದ
  • (ಕಷ್ಟ, ಸಮಸ್ಯೆ, ಮೊದಲಾದವನ್ನು) ಎದುರಿಸು; ನಿಭಾಯಿಸು; ನಿರ್ವಹಿಸಲು ಕೈಹಚ್ಚು, ಸಾಹಸಪಡು.
  • (ಎದುರಾಳಿಯನ್ನು ಹಿಡಿದುಕೊಳ್ಳಲು) ಸಾಹಸ ಪಡು; (ಎದುರಾಳಿಯೊಡನೆ) ಸೆಣಸು.
  • (ವಾದದಲ್ಲಿ ಎದುರಾಳಿಯ ಜತೆ) ಚರ್ಚೆ ನಡೆಸು; ವಾದಿಸು.
  • (ಹುಟ್‍ಬಾಲ್‍ ಆಟ ಮೊದಲಾದವುಗಳಲ್ಲಿ) ಚೆಂಡಿನೊಡನೆ ಓಡುತ್ತಿರುವ ಆಟಗಾರನನ್ನು ತಡೆಗಟ್ಟು, ಹಿಡಿದು ನಿಲ್ಲಿಸು.
  • (ಕುದುರೆ ಮೊದಲಾದವನ್ನು ಗಾಡಿ ಮೊದಲಾದವಕ್ಕೆ) ಕಟ್ಟು; ಬಿಗಿದು ಸಜ್ಜುಗೊಳಿಸು.

  • tackle-block
    ನಾಮವಾಚಕ
    (ಮೇಲೆ ಹಗ್ಗ ಹರಿಯುವ) ಕಪ್ಪಿ ಯಾ ಕಪ್ಪಿ ತಂಡ.


    logo