logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

macrophage
ನಾಮವಾಚಕ
ಮ್ಯಾಕ್ರೊಹೇಜ್‍; ಬೃಹತ್ಕಣ; ಸಾಮಾನ್ಯವಾಗಿ ಸೋಂಕು ತಗಲಿದ ತಾಣಗಳಲ್ಲಿ ಕಂಡುಬರುವ ಭಾರೀ ಗಾತ್ರದ ಬಿಳಿಯ ರಕ್ತಕಣ.

macrophotography
ನಾಮವಾಚಕ
ಬೃಹತ್‍ ಛಾಯಾಚಿತ್ರಣ; ವಾಸ್ತವವಾಗಿ ಇರುವುದಕ್ಕಿಂತಲೂ ದೊಡ್ಡದಾಗಿರುವಂಥ ಚಿತ್ರಗಳನ್ನು ತೆಗೆಯುವ ಛಾಯಾಚಿತ್ರಣ.

macropod
ನಾಮವಾಚಕ
ಕ್ಯಾಂಗರೂ ಸೇರಿದಂತೆ, ಮ್ಯಾಕ್ರೊಪೊಡಿಡೇ ವಂಶದ, ಆಸ್ಟೆ ಲಿಯ ಮತ್ತು ನ್ಯೂಗಿನಿಗಳಲ್ಲಿನ, ಒಂದು ಸಸ್ಯಾಹಾರಿ ಸಸ್ತನಿ.

macroscopic
ಗುಣವಾಚಕ
ಸ್ಥೂಲಗೋಚರ; ಬರಿಯ ಕಣ್ಣಿಗೆ ಕಾಣುವ(ಷ್ಟು ದೊಡ್ಡದಾದ); ಸ್ಥೂಲದೃಷ್ಟಿಗೋಚರ.

macroscopically
ಕ್ರಿಯಾವಿಶೇಷಣ
ಸ್ಥೂಲಗೋಚರವಾಗಿ; ಬರಿಯ ಕಣ್ಣಿಗೆ ಕಾಣುವಂತೆ.

macula
ನಾಮವಾಚಕ
  • ಸೌರ ಕಲೆ; ಸೂರ್ಯನಲ್ಲಿ ಕಾಣುವ ಕಪ್ಪುಮಚ್ಚೆ.
  • ಖನಿಜಕಲೆ; ಖನಿಜಗಳಲ್ಲಿ ಕಂಡುಬರುವ ಮಚ್ಚೆ.
  • (ಚರ್ಮದಲ್ಲಿನ, ಸಾಮಾನ್ಯವಾಗಿ ಶಾಶ್ವತವಾಗಿರುವ) ಕಪ್ಪುಕಲೆ; ಕರಿ – ಮಚ್ಚೆ, ಚುಕ್ಕೆ.
  • = macula lutea.

  • macula lutea
    ನಾಮವಾಚಕ
    ಅಕ್ಷಿಪಟದಲ್ಲಿನ ಅತ್ಯಂತ ಹೆಚ್ಚು ದೃಷ್ಟಿತೀಕ್ಷ್ಣತೆಯುಳ್ಳ ಪ್ರದೇಶ.

    macular
    ಗುಣವಾಚಕ
    (ಚರ್ಮದಲ್ಲಿಯ, ಶಾಶ್ವತವಾದ) ಕಪ್ಪು ಕಲೆಯ; ಕರಿಮಚ್ಚೆಗೆ ಸಂಬಂಧಿಸಿದ.

    maculation
    ನಾಮವಾಚಕ
    ಕರಿಮಚ್ಚೆ, ಕಪ್ಪು ಕಲೆ – ಮಾಡುವುದು; ಮಚ್ಚೆಯಾಗಿರುವುದು; ಕಲೆಯಾಗಿರುವಿಕೆ.

    mad
    ಗುಣವಾಚಕ ಪದಗುಚ್ಛ
  • ಬುದ್ಧಿಕೆಟ್ಟ; ಮತಿಗೆಟ್ಟ; ಬುದ್ಧಿ ಸ್ಥಿಮಿತವಿಲ್ಲದ; ಹುಚ್ಚಿನ; ಉನ್ಮತ್ತ.
  • (ವ್ಯಕ್ತಿ ಯಾ ನಡತೆಯ ವಿಷಯದಲ್ಲಿ) ಅವಿವೇಕದ; ಬುದ್ಧಿಗೇಡಿನ; ಹುಚ್ಚುಹುಚ್ಚಾದ.
  • (ಯಾವುದೋ ಒಂದರ ವಿಷಯದಲ್ಲಿ) ಅತ್ಯಾಸಕ್ತಿಯುಳ್ಳ; ಅತ್ಯಾದರವುಳ್ಳ; ಅತ್ಯಾವೇಶಗೊಂಡ ಯಾ ಹುಚ್ಚು ಹಿಡಿದ: they are mad after her ಅವಳನ್ನು ಕಂಡರೆ ಅವರಿಗೆ ಹುಚ್ಚು (ಹಿಡಿಯುವಷ್ಟು ವ್ಯಾಮೋಹ).
  • (ಆಡುಮಾತು) ಅಸಮಾಧಾನ ಹುಟ್ಟಿದ; ಬೇಸರವುಂಟಾದ; ಕಿರಿಕಿರಿಗೊಂಡ; ರೇಗಿದ: I was rather mad at missing my train ರೈಲು ತಪ್ಪಿದ್ದರಿಂದ ನನಗೆ ಬಹಳ ರೇಗಿಹೋಯಿತು.
  • (ಪ್ರಾಣಿಗಳ ವಿಷಯದಲ್ಲಿ) ಹುಚ್ಚಿಗೆದ್ದ; ಹುಚ್ಚು ಹಿಡಿದ: a mad dog ಹುಚ್ಚುನಾಯಿ.
  • ಅಪಾರ ಸಂತೋಷದ; ಬಲು ಖುಷಿಯಾದ; ಚೈನಿ ಮಾಡುವ; ಆನಂದೋತ್ಸಾಹದಿಂದ ಬಿರಿಯುವ: let us have a mad time ಬಲು ಮಜದಿಂದ, ಖುಷಿಯಿಂದ – ಚೈನಿ ಮಾಡೋಣ, ಕಾಲ ಕಳೆಯೋಣ.


  • logo