logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laches
ನಾಮವಾಚಕ
  • (ನ್ಯಾಯಶಾಸ್ತ್ರ) ಕರ್ತವ್ಯಲೋಪ; ನ್ಯಾಯ ಕರ್ತವ್ಯವನ್ನು ನಿರ್ವಹಿಸುವುದರಲ್ಲಿನ ಉಪೇಕ್ಷೆ, ಅಶ್ರದ್ಧೆ.
  • (ನ್ಯಾಯಶಾಸ್ತ್ರ) ಹಕ್ಕು ಸ್ಥಾಪನೆ, ರಿಯಾಯಿತಿ ಗಳಿಕೆ, ಮೊದಲಾದವುಗಳಲ್ಲಿ, ತಡ; ನಿಧಾನ; ವಿಳಂಬ; ಸಾವಕಾಶ; ಕಾಲಾತ್ಯಯ.
  • (ದಂಡನೀಯ) ಕರ್ತವ್ಯಚ್ಯುತಿ; ಕರ್ತವ್ಯಲೋಪ; ಉಪೇಕ್ಷೆ.

  • lachryma Christi
    ನಾಮವಾಚಕ
    ದಕ್ಷಿಣ ಇಟಲಿಯಲ್ಲಿರುವ ವೆಸೂವಿಯಸ್‍ ಬೆಟ್ಟದಲ್ಲಿ ಬೆಳೆದ ದ್ರಾಕ್ಷಿಯಿಂದ ತಯಾರಿಸಿದ, ಹಲವಾರು ಬಗೆಯ ಮದ್ಯಗಳಲ್ಲೊಂದು.

    lachrymal
    ಗುಣವಾಚಕ
  • ಕಣ್ಣೀರಿನ; ಕಂಬನಿಯ; ಅಶ್ರುವಿನ, ಕಣ್ಣೀರಿಗಾಗಿ ಇರುವ.
  • (ಸಾಮಾನ್ಯವಾಗಿ lacrimal ಎಂದು ಪ್ರಯೋಗ) (ಅಂಗರಚನಾಶಾಸ್ತ್ರ) ಅಶ್ರುಸ್ರಾವಕ; ಅಶ್ರುಕಾರಕ; ಅಶ್ರುಕಾರಿ; ಅಶ್ರುಸ್ರವಿ; ಕಣ್ಣೀರನ್ನು ಸ್ರವಿಸುವುದಕ್ಕೆ ಸಂಬಂಧಿಸಿದ: lachrymal duct ಅಶ್ರುಕಾರಕ ನಾಳ.

  • lachrymal
    ನಾಮವಾಚಕ
  • = lachrymal vase.
  • (ಬಹುವಚನದಲ್ಲಿ) (ಸಾಮಾನ್ಯವಾಗಿ lacrimals ಎಂದು ಪ್ರಯೋಗ) ಅಶ್ರುಸ್ರವಿಗಳು; ಅಶ್ರುಸ್ರಾವಕಾಂಗಗಳು; ಅಶ್ರುಕಾರಕಾಂಗಗಳು; ಅಶ್ರುಸಂಬದ್ಧಾಂಗಗಳು; ಕಣ್ಣೀರಿಗೆ ಸಂಬಂಧಿಸಿದ ಅಶ್ರುನಾಳ ಮೊದಲಾದ ಅವಯವಗಳು.

  • lachrymal canal
    ನಾಮವಾಚಕ
    = lachrymal duct.

    lachrymal duct
    ನಾಮವಾಚಕ
    ಅಶ್ರುನಾಳ.

    lachrymal gland
    ನಾಮವಾಚಕ
    ಅಶ್ರುಗ್ರಂಥಿ.

    lachrymal sac
    ನಾಮವಾಚಕ
    ಅಶ್ರುಕೋಶ; ಕಣ್ಣೀರು ಸಂಚಿ; ಕಂಬನಿಚೀಲ.

    lachrymal vase
    ನಾಮವಾಚಕ
    (ಚರಿತ್ರೆ) ಅಶ್ರುಕರಂಡ; ಕಣ್ಣೀರು ದಾನಿ; ಕಂಬನಿಸೀಸೆ; ಶವಸಂಸ್ಕಾರ ಸಮಯದಲ್ಲಿ ದುಃಖಸಂತಪ್ತರ ಕಣ್ಣೀರನ್ನು ಸಂಗ್ರಹಿಸುವ ಸೀಸೆ.

    lachrymation
    ನಾಮವಾಚಕ
    (ಔಪಚಾರಿಕ) ಅಶ್ರುಪಾತ; ಕಣ್ಣೀರು ಸುರಿತ; ಅಶ್ರುಸ್ರಾವ; ಅಶ್ರುಧಾರೆ.


    logo