logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

east
ಗುಣವಾಚಕ
ಮೂಡಲ; ಪೂರ್ವದ; ಪೂರ್ವದ ಕಡೆಗೆ ಇರುವ, ಹೋಗುತ್ತಿರುವ; ಪೂರ್ವವನ್ನು ತೋರಿಸುತ್ತಿರುವ.

East End
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಪೂರ್ವ ಲಂಡನ್‍; ಹಡಗು ಕಟ್ಟೆಗಳ ಪ್ರದೇಶವನ್ನೂ ಒಳಗೊಂಡ ಲಂಡನ್‍ ನಗರದ ಪೂರ್ವ ಪ್ರದೇಶ.

East Indiaman
ನಾಮವಾಚಕ
(ಚರಿತ್ರೆ) ಈಸ್ಟ್‍ ಇಂಡಿಯಮನ್‍; ಈಸ್ಟ್‍ ಇಂಡೀಸ್‍ ಜೊತೆ ವ್ಯಾಪಾರದಲ್ಲಿ ತೊಡಗಿದ್ದ ದೊಡ್ಡ ಹಡಗು.

East Side
ನಾಮವಾಚಕ
ಮೂಡಲಭಾಗ; ಪೂರ್ವ ಭಾಗ; ನ್ಯೂಯಾರ್ಕ್‍ ನಗರದ ಮ್ಯಾನ್‍ಹ್ಯಾಟನ್‍ ದ್ವೀಪದ ಪೂರ್ವಪ್ರದೇಶ.

east wind
ನಾಮವಾಚಕ
ಮೂಡಲಗಾಳಿ; ಪೂರ್ವಮಾರುತ; ಪೂರ್ವದಿಕ್ಕಿನಿಂದ ಬೀಸುವ ಗಾಳಿ.

East-Ender
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಪೂರ್ವ ಲಂಡನ್‍ನಿವಾಸಿ; ಲಂಡನ್‍ ನಗರದ ಪೂರ್ವಭಾಗದಲ್ಲಿ ವಾಸಿಸುವವನು(ಳು).

east-north-east
ನಾಮವಾಚಕ
ಪೂರ್ವ ಈಶಾನ್ಯ; (ಮುಖ್ಯವಾಗಿ ದಿಕ್ಸೂಚಿಯಲ್ಲಿ) ಪೂರ್ವಕ್ಕೂ ಈಶಾನ್ಯಕ್ಕೂ ನಡುವಣ ದಿಕ್ಕು.

east-south-east
ನಾಮವಾಚಕ
ಪೂರ್ವ ಆಗ್ನೇಯ; ಪೂರ್ವಕ್ಕೂ ಆಗ್ನೇಯಕ್ಕೂ ನಡುವಣ ದಿಕ್ಕು.

eastabout
ಕ್ರಿಯಾವಿಶೇಷಣ
= eastwards.

eastbound
ಗುಣವಾಚಕ
ಮೂಡಲಿಗೆ ಹೋಗುತ್ತಿರುವ; ಪೂರ್ವದ ಕಡೆಗೆ ಪ್ರಯಾಣ ಮಾಡುತ್ತಿರುವ.


logo