logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cachinnatory
ಗುಣವಾಚಕ
ಗಟ್ಟಿನಗುವಿನ; ಗಹಗಹಿಸಿ ನಗುವ; ಅಟ್ಟಹಾಸದ.

cacholong
ನಾಮವಾಚಕ
(ಒಂದು ಬಗೆಯ)ಕ್ಷೀರಸ್ಫಟಿಕ; ನೀಲಿಬಿಳಿಬಣ್ಣದ ಯಾ ಮಾಸಲು ಹಳದಿಯ, ಅಪಾರದರ್ಶಕ ಸಿಲಿಕ ಶಿಲೆ.

cachou
ನಾಮವಾಚಕ
  • =catechu.
  • ಕ್ಯಾಷೂ; (ಬಾಯಿವಾಸನೆ ಕಳೆಯಲು ಬಳಸುವ) ಸುವಾಸನೆಯ—ಗುಳಿಗೆ ಯಾ ಬತ್ತಾಸು.

  • cachucha
    ನಾಮವಾಚಕ
    (ಸ್ಪೇನಿನ) ಒಂಟಿಕುಣಿತ; ಒಂದು ಏಕಪಾತ್ರನೃತ್ಯ.

    cacique
    ನಾಮವಾಚಕ
  • (ಸ್ಪ್ಯಾನಿಷ್‍ ಸಂಸ್ಕೃತಿಗೆ ಒಳಗಾದ ವೆಸ್ಟ್‍ಇಂಡೀಸಿನ, ಅಮೆರಿಕದ ಇಂಡಿಯನರ) ಹೆಗ್ಗಡೆ; ಬುಡಕಟ್ಟುಮುಖ್ಯಸ್ಥ.
  • (ಸ್ಪೇನ್‍ ಯಾ ಲ್ಯಾಟಿನ್‍ ಅಮೆರಿಕನ್‍ ಪ್ರಯೋಗದಲ್ಲಿ) ಸ್ಥಳೀಯ (ರಾಜಕೀಯ) ಮುಖಂಡ; ಸ್ಥಳೀಯ ನಾಯಕ.

  • caciquism
    ನಾಮವಾಚಕ
    ಹೆಗ್ಗಡೆಗಳ ಪ್ರಭುತ್ವ; ಊರುಮುಖಂಡರ ಆಡಳಿತ; ಸ್ಥಳೀಯ ನಾಯಕರ ಆಡಳಿತ.

    cack-handed
    ಗುಣವಾಚಕ
    (ಆಡುಮಾತು)
  • ಎಡಚ; ಎಡಗೈಯ; ರೊಡ್ಡಗೈಯ; ಎಡಗೈಯನ್ನೇ ಹೆಚ್ಚಾಗಿ ಬಳಸುವ.
  • ಒಡ್ಡೊಡ್ಡಾದ; ಅಡ್ಡಾದಿಡ್ಡಿಯ; ನಾಜೂಕಿಲ್ಲದ.

  • cackle
    ನಾಮವಾಚಕ ನುಡಿಗಟ್ಟು
    cut the cackle (ಆಡುಮಾತು) ವಿಷಯಕ್ಕೆ ಬರು.
  • ಕೋಳಿ (ಮೊಟ್ಟೆಯಿಟ್ಟ ಮೇಲೆ ಹಾಕುವ) ಕೇಕೆ; ಕಾಕು; ಕ್ಲಕ್‍ ಕ್ಲಕ್‍ ಧ್ವನಿ.
  • ಗೊಡ್ಡುಹರಟೆ; ಒಣಹರಟೆ; ಕಾಡುಹರಟೆ.
  • ಜಂಬ.
  • ಒಣನಗು; ಗಟ್ಟಿಯಾದ, ಅರ್ಥಹೀನ ನಗು.

  • cackle
    ಅಕರ್ಮಕ ಕ್ರಿಯಾಪದ
  • (ಕೋಳಿ) ಕೇಕೆ ಹಾಕು; ಕ್ಲಕ್‍ ಕ್ಲಕ್‍ ಅನ್ನು.
  • ಹರಟೆಹೊಡೆ.
  • (ಕೋಳಿಯ ಕೇಕೆಯನ್ನು ಹೋಲುವಂತೆ) ಅರ್ಥವಿಲ್ಲದೆ ಗಟ್ಟಿಯಾಗಿ ನಗು.

  • cackler
    ನಾಮವಾಚಕ
    (ರೂಪಕವಾಗಿ) ಹರಟೆಮಲ್ಲ; ಕಾಡುಹರಟೆ ಹೊಡೆಯುವವನು.


    logo