logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

opercular
ಗುಣವಾಚಕ
(ಮೀನಿನ ಕಿವಿರು, ಚಿಪ್ಪು, ಮೊದಲಾದವುಗಳ) ಮುಚ್ಚಳದ; ಕವಾಟದ ಯಾ ಅದಕ್ಕೆ ಸಂಬಂಧಿಸಿದ ಯಾ ಅದು ಉಳ್ಳ.

operculate
ಗುಣವಾಚಕ
(ಮೀನಿನ ಕಿವಿರು, ಚಿಪ್ಪು, ಮೊದಲಾದವುಗಳ) ಮುಚ್ಚಳವುಳ್ಳ; ಕವಾಟವುಳ್ಳ.

operculi-
ಸಮಾಸ ಪೂರ್ವಪದ
ಮುಚ್ಚಳ ಎಂಬರ್ಥದ ಸಮಾಸ ಪೂರ್ವಪದ.

operculum
ನಾಮವಾಚಕ
  • (ಬಹುವಚನ opercula ಉಚ್ಚಾರಣೆ ಅಪರ್ಕ್ಯುಲ). ಮುಚ್ಚಳ; ಹೊದಿಕೆ; ಕವಾಟ ; ಪಿಧಾನ:
    1. (ಪ್ರಾಣಿವಿಜ್ಞಾನ) ಮೀನಿನ ಕಿವಿರುಗಳನ್ನು ಮುಚ್ಚಿರುವ ಹೊದಿಕೆ.
    2. (ಪ್ರಾಣಿವಿಜ್ಞಾನ) ಚಿಪ್ಪು ಜೀವಿ ತನ್ನ ಚಿಪ್ಪಿನಲ್ಲಿ ಅಡಗಿಕೊಂಡಾಗ ಚಿಪ್ಪಿನ ತೂತನ್ನು ಮುಚ್ಚುವ ಹಾಳೆ.
    3. ತೂತೊಂದನ್ನು ಮುಚ್ಚುವ, ಉದಾಹರಣೆಗೆ ಕೆಲವು ಹಕ್ಕಿಗಳ ಮೂಗಿನ ಹೊಳ್ಳೆಗಳ ಮೇಲಿನ ಚರ್ಮದ ಪದರದಂಥ, ಯಾವುದೇ ವಿವಿಧ ಭಾಗಗಳು.
  • (ಸಸ್ಯವಿಜ್ಞಾನ) ಹಾವಸೆಗಳ ಬೀಜಕಣಕೋಶದ ಮೇಲಿರುವ ಮುಚ್ಚಳ.

  • operetta
    ನಾಮವಾಚಕ
    ಕಿರು ಅಪೆರಾ; ಏಕಾಂಕ ಗೀತನಾಟಕ; ಲಘು ಗೇಯನಾಟಕ.

    operose
    ಗುಣವಾಚಕ
    (ಪ್ರಾಚೀನ ಪ್ರಯೋಗ)
  • ದುಸ್ಸಾಧ್ಯ; ಬಹು ಕಷ್ಟಸಾಧ್ಯವಾದ; ಬಹಳ ಕಷ್ಟಪಟ್ಟು ಮಾಡಬೇಕಾದ; ಅತಿ ಪ್ರಯಾಸಕರವಾದ.
  • ಬಹುಕಷ್ಟವಾಗಿ ತೋರುವ; ಬಹಳ ಪ್ರಯಾಸದ.
  • ಬಹಳ–ಕಷ್ಟಪಡುವ, ಶ್ರಮವಹಿಸುವ.

  • operosely
    ಕ್ರಿಯಾವಿಶೇಷಣ
    (ಪ್ರಾಚೀನ ಪ್ರಯೋಗ) ಬಹಳ ಕಷ್ಟಪಟ್ಟು; ಅತ್ಯಂತ ಪ್ರಯಾಸದಿಂದ; ಬಹಳ ಶ್ರಮವಹಿಸಿ.

    operoseness
    ನಾಮವಾಚಕ
    (ಪ್ರಾಚೀನ ಪ್ರಯೋಗ)
  • ಪ್ರಯಾಸ; ಶ್ರಮ.
  • ಕಷ್ಟಸಾಧ್ಯತೆ; ಶ್ರಮಸಾಧ್ಯತೆ.

  • ophicleide
    ನಾಮವಾಚಕ
  • ಸರ್ಪವಾದ್ಯ; ಮಂದ್ರ ಯಾ ಉಚ್ಚ ಸ್ವರದಲ್ಲಿ ನುಡಿಯುವ, ಬಿರಡೆಗಳಿರುವ ಎರಡು ಕಡೆ ಬಾಗಿರುವ, ಒಂದು ಊದು ವಾದ್ಯ. Figure: ophicleide 1
  • ತೀವ್ರ ನಾದಕೊಡುವ, ಆರ್ಗನ್‍ ವಾದ್ಯದ ಪಿಳ್ಳಂಗೋವಿ, ಕೊಳಲು.

  • ophidia
    ನಾಮವಾಚಕ
    (ಜೀವವಿಜ್ಞಾನ) ಓಹಿಡಿಯ; ಸರ್ಪ; ಹಾವು; ನಾಗ; ಉರಗ; ಸರೀಸೃಪ; ರೆಪ್ಟೇಲಿಯ ವರ್ಗಕ್ಕೆ ಸೇರಿದ, ಸ್ಕ್ವಮೇಟ ಗಣದ ಒಂದು ವಿಭಾಗವಾಗಿರುವ, ಎಲ್ಲ ಬಗೆಯ ಹಾವುಗಳನ್ನೂ ಒಳಗೊಳ್ಳುವ ಒಂದು ಉಪಗಣ.


    logo