logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lee shore
ನಾಮವಾಚಕ
ಗಾಳಿಮರೆಯ ತೀರ; ಹಡಗಿನ ಗಾಳಿಮರೆಯ ಕಡೆಯ ತೀರ.

lee side
ನಾಮವಾಚಕ
ಗಾಳಿಮರೆಯ ಕಡೆ; ಹಡಗಿನ ಯಾ ಯಾವುದೇ ವಸ್ತುವಿನ ಗಾಳಿಮರೆಯ ಕಡೆ; ಗಾಳಿ ಬೀಸದ ಪಕ್ಕ.

lee-board
ನಾಮವಾಚಕ
(ಹಡಗಿನ) ಮಗ್ಗುಲು ಹಲಗೆ; ಪಕ್ಕ(ದ) ಹಲಗೆ; ಹಡಗು ಮೊದಲಾದವು ಪಕ್ಕಕ್ಕೆ ಸರಿಯುವುದನ್ನು ತಪ್ಪಿಸಲು ಹಡಗಿನ ಹೊರ ಮಗ್ಗುಲಲ್ಲಿ ನೀರಿನೊಳಕ್ಕೆ ಬಿಟ್ಟಿರುವ ಹಲಗೆ.

leech
ನಾಮವಾಚಕ ನುಡಿಗಟ್ಟು
like a leech ಜಿಗಣೆಯಂತೆ ಬಿಡದೆ ಅಂಟಿಕೊಂಡಿರುವ; ಬಿಡದೆ ಕಚ್ಚಿಕೊಂಡಿರುವ.
  • ಜಿವಳೆ; ಜಿಗಳೆ; ಜಿಗಣೆ; ಮುಖ್ಯವಾಗಿ ಹಿಂದೆ ರೋಗಿಯ ರಕ್ತ ಹೀರಲು ವೈದ್ಯರು ಬಳಸುತ್ತಿದ್ದಂಥ, ಎರಡೂ ಕಡೆಯೂ ಹೀರುನಾಳಗಳುಳ್ಳ, ಮುಖ್ಯವಾಗಿ ಹಿರಡೋಮೆಡಿಸಿನ್ಯಾಲಿಸ್‍ ಕುಲಕ್ಕೆ ಸೇರಿದ, ಸಿಹಿನೀರಿನಲ್ಲಿ ಯಾ ನೆಲದ ಮೇಲೆ ವಾಸಿಸುವ, ಹಲವಾರು ರಕ್ತ ಹೀರುವ ಪರೋಪಜೀವಿ ಹುಳುಗಳಲ್ಲಿ ಒಂದು. Figure: leech 1
  • (ರೂಪಕವಾಗಿ) ಜಿಗಣೆ; ಪರೋಪಜೀವಿ; ಪರರಿಂದ ಆದಾಯ ಹೀರುವವನು.

  • leech
    ನಾಮವಾಚಕ
    (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ವೈದ್ಯ; ಚಿಕಿತ್ಸಕ; ಡಾಕ್ಟರು.

    leech
    ನಾಮವಾಚಕ
  • (ಹಡಗಿನ) ಚೌಕ ಹಾಯಿಯ (ನೆಟ್ಟನೆಯ ಯಾ ಇಳಿಜಾರು) ಪಕ್ಕ; (ಲಂಬ ಭಾಗದ ಯಾ ಓರೆಭಾಗದ) ಅಂಚು.
  • ಹಡಗಿನ ಮುಂಭಾಗದಿಂದ ಹಿಂಭಾಗದವರೆಗೆ ಹರಡಿರುವ ಹಾಯಿಪಟದ, (ಕೂವೆಕಂಬ ಯಾ ಅದನ್ನು ಬಿಗಿದಿರುವ ಹಗ್ಗಗಳಿಂದ) ದೂರವಾಗಿರುವ ಪಕ್ಕ.

  • leechcraft
    ನಾಮವಾಚಕ
    (ಪ್ರಾಚೀನ ಪ್ರಯೋಗ) ವೈದ್ಯ (ವಿದ್ಯೆ); ರೋಗ ವಾಸಿ ಮಾಡುವ ವಿದ್ಯೆ, ಕಲೆ.

    leek
    ನಾಮವಾಚಕ ನುಡಿಗಟ್ಟು
    ಲೀಕ್‍: eat the leek (ಆದ) ಅಪಮಾನವನ್ನು ನುಂಗಿಕೊ, ಸಹಿಸಿಕೊ.
  • ಅಲಿಯಮ್‍ ಪಾರಮ್‍ ಕುಲಕ್ಕೆ ಸೇರಿದ, ಒಂದರ ಮೇಲೊಂದರಂತೆ ಚಪ್ಪಟೆಯಾದ ಎಲೆಗಳನ್ನು ಬಿಡುವ, ಆಹಾರವಾಗಿ ಬಳಸುವ ಉರುಳೆಯಾಕಾರದ ಉದ್ದ ಗೆಡ್ಡೆ ಬಿಡುವ, ಈರುಳ್ಳಿ ಬಳಗದ ಒಂದು ಗಿಡ. Figure: leek a
  • ವೇಲ್ಸ್‍ ದೇಶದ ರಾಷ್ಟ್ರಚಿಹ್ನೆಯಾದ ಈ ಗೆಡ್ಡೆ.

  • leemost
    ಗುಣವಾಚಕ
    ಗಾಳಿಮರೆಯ ಕಡೆಯ; ಗಾಳಿಗೆ ಅತ್ಯಂತ ಮರೆಯಾದ ಕಡೆಯ.

    leer
    ಅಕರ್ಮಕ ಕ್ರಿಯಾಪದ
    (ಮುಖ್ಯವಾಗಿ ಕಪಟ, ಕಾಮುಕ, ಕುಹಕ – ಭಾವದ) ಓರೆನೋಟ, ಕೋರೆದೃಷ್ಟಿ, ಕುಡಿನೋಟ – ಬೀರು.


    logo