logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incommunicably
ಕ್ರಿಯಾವಿಶೇಷಣ
  • ಅವಿಭಾಜ್ಯವಾಗಿ; ಇತರರಿಗೆ ಹಂಚಿಕೊಡಲಾಗದ ರೀತಿಯಲ್ಲಿ, ಪಾಲುಮಾಡಿಕೊಡಲಾಗದಂತೆ.
  • ಅನಿರ್ವಚನೀಯವಾಗಿ; ಇತರರಿಗೆ ತಿಳಿಸಲಾಗದಂತೆ ಯಾ ಹೇಳಲಾಗದಂತೆ.
  • ಸಂಪರ್ಕರಹಿತವಾಗಿ; ಪರಸ್ಪರ ಸಲ್ಲಾಪ, ಸಂಪರ್ಕಗಳಿಲ್ಲದೆ: each, in his own little world, stood incommunicably separate ಒಬ್ಬೊಬ್ಬನೂ ತನ್ನದೇ ಆದ ಪುಟ್ಟ ಪ್ರಪಂಚದಲ್ಲಿ ಪರಸ್ಪರ ಸಂಪರ್ಕ ಸಲ್ಲಾಪಗಳೇ ಇಲ್ಲದೆ ಪೃಥಕ್ಕಾಗಿ ನಿಂತಿದ್ದ.

  • incommunicado
    ಗುಣವಾಚಕ
  • ಸಂಪರ್ಕರಹಿತವಾದ; ಸಂಪರ್ಕ ಸಲ್ಲಾಪಗಳಿಗೆ ಅವಕಾಶವಿಲ್ಲದ; ಪರಸ್ಪರ ನೋಡಲು, ಮಾತನಾಡಲು ಅನುಕೂಲವಿಲ್ಲದ.
  • (ಸೆರೆಯಾಳಿನ ವಿಷಯದಲ್ಲಿ) ಏಕಾಂತವಾಸದಲ್ಲಿರುವ; ಒಂಟಿ ಸೆರೆಯಲ್ಲಿರುವ.

  • incommunicative
    ಗುಣವಾಚಕ
  • ಮಿತಭಾಷಿಯಾದ; ತುಟಿ ಬಿಚ್ಚದ; ಮೌನ ಪ್ರಕೃತಿಯ; ಇತರರಿಗೆ ತಿಳಿಸುವ ಯಾ ಹೇಳುವ ಸ್ವಭಾವದವನಲ್ಲದ.
  • ಸಂಪರ್ಕ, ಸಂಭಾಷಣೆಗಳಲ್ಲಿ ಒಲವಿಲ್ಲದ.

  • incommunicatively
    ಕ್ರಿಯಾವಿಶೇಷಣ
  • ಮಿತಭಾಷಿಯಾಗಿ.
  • ಸಂಪರ್ಕ, ಸಂಭಾಷಣೆಗಳಲ್ಲಿ ಒಲವಿಲ್ಲದೆ.

  • incommunicativeness
    ನಾಮವಾಚಕ
    ಮಿತಭಾಷಿತ್ವ; ಮೌನ ಪ್ರಕೃತಿ; ಸಂಪರ್ಕ ಸಂಭಾಷಣೆಗಳಲ್ಲಿ ಒಲವಿಲ್ಲದ ಸ್ವಭಾವ.

    incommutable
    ಗುಣವಾಚಕ
  • ಅಪರಿವರ್ತನೀಯ; ಮಾರ್ಪಡಿಸಲಾಗದ; ವ್ಯತ್ಯಾಸ ಮಾಡಲಾಗದ; ಬದಲಾವಣೆ ಮಾಡಲಾಗದ.
  • ಅವಿನಿಮೇಯ; ಅಪರಿವರ್ತನೀಯ; ಅದಲುಬದಲು, ವಿನಿಮಯ – ಮಾಡಲಾಗದ.

  • incommutably
    ಕ್ರಿಯಾವಿಶೇಷಣ
  • ಅಪರಿವರ್ತನೀಯವಾಗಿ; ಮಾರ್ಪಡಿಸಲಾಗದಂತೆ; ಬದಲಾಯಿಸಲಾಗದಂತೆ.
  • ಅದಲು ಬದಲು, ವಿನಿಮಯ – ಮಾಡಲಾಗದಂತೆ; ಅಪರಿವರ್ತನೀಯವಾಗಿ.

  • incompact
    ಗುಣವಾಚಕ
    ಅಡಕವಾಗಿಲ್ಲದ; ಸಡಿಲವಾಗಿರುವ; ಅಳ್ಳಕವಾಗಿರುವ; ಒತ್ತಾಗಿಲ್ಲದ; ಸುಸಂಘಟಿತವಾಗಿಲ್ಲದ.

    incomparable
    ಗುಣವಾಚಕ
  • ಎಣೆಯಿಲ್ಲದ; ಅನುಪಮ; ಅಸದೃಶ; ಅಸಮಾನ; ಅಪ್ರತಿಮ; ಸಾಟಿಯಿಲ್ಲದ.
  • ಹೋಲಿಸಲಾಗದ; ಅತುಲನೀಯ.

  • incomparableness
    ನಾಮವಾಚಕ
  • ಎಣೆಯಿಲ್ಲದಿರುವಿಕೆ; ಅಸದೃಶತ್ವ.
  • ಅತುಲನೀಯತೆ; ಹೋಲಿಸಲಾಗದಿರುವಿಕೆ.


  • logo