logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

operational research
ನಾಮವಾಚಕ
ಪರಿಕ್ರಿಯಾ ಸಂಶೋಧನೆ; ಪರಿಮಾಣಾತ್ಮಕ ಆಧಾರದ ಮೇಲೆ ಸಂಕೀರ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ವಾಣಿಜ್ಯ ವ್ಯವಹಾರಕ್ಕೆ ವೈಜ್ಞಾನಿಕ ತತ್ತ್ವಗಳನ್ನು ಅನ್ವಯಿಸುವುದು.

operationally
ಕ್ರಿಯಾವಿಶೇಷಣ
ಕಾರ್ಯಕಾರಿಯಾಗಿ; ಕಾರ್ಯ ಮಾಡಬಲ್ಲ ರೀತಿಯಲ್ಲಿ.

operations research
ನಾಮವಾಚಕ
= operational research.

operatise
ಸಕರ್ಮಕ ಕ್ರಿಯಾಪದ
= operatize.

operative
ಗುಣವಾಚಕ
  • ಕಾರ್ಯಕಾರಿಯಾದ; ಪರಿಣಾಮಕಾರಿಯಾದ.
  • ಪ್ರಧಾನವಾದ; ಮುಖ್ಯವಾದ; ಮುಖ್ಯವಾಗಿ ಸಂಬಂಧಿಸಿದ: ‘may’ is the operative word. ‘may’ ಎಂಬುದು ಮುಖ್ಯವಾದ, ಮುಖ್ಯವಾಗಿ ಸಂಬಂಧಿಸಿದ ಪದ.
  • ಶಸ್ತ್ರಚಿಕಿತ್ಸೆಯ; ಶಸ್ತ್ರಚಿಕಿತ್ಸೆಯಿಂದಾದ.
  • (ನ್ಯಾಯಶಾಸ್ತ್ರ) ವ್ಯವಹಾರೋದ್ದೇಶದ; ವ್ಯವಹಾರವೊಂದನ್ನು ನಡೆಸುವ ಉದ್ದೇಶವನ್ನು ಪ್ರಕಟಿಸಿದ.
  • ಪರಿಣಾಮವುಂಟುಮಾಡುವ.
  • ಸಲ್ಲುವ; ಜಾರಿಯಲ್ಲಿರುವ.
  • ವ್ಯಾವಹಾರಿಕ; ಪ್ರಾಯೋಗಿಕ; ಕಾರ್ಯರೂಪದ; ಕಾರ್ಯಾತ್ಮಕ (ತತ್ತ್ವಪ್ರಾಯವಾಗಿಯೋ ಚಿಂತನರೂಪದ್ದಾಗಿಯೋ ಅಲ್ಲದ): the operative part of the work ಕೆಲಸದ ವ್ಯಾವಹಾರಿಕ (ಕಾರ್ಯರೂಪದ) ಭಾಗ.

  • operative
    ನಾಮವಾಚಕ
  • (ಮುಖ್ಯವಾಗಿ ನುರಿತ ಯಾ ತರಪೇತು ಪಡೆದ ಗಿರಣಿ) ಕೆಲಸಗಾರ; ಕಾರೇಗಾರ; ಕಾರ್ಮಿಕ.
  • (ಅಮೆರಿಕನ್‍ ಪ್ರಯೋಗ) ಖಾಸಗಿ ಪತ್ತೇದಾರ.

  • operatively
    ಕ್ರಿಯಾವಿಶೇಷಣ
    ಕಾರ್ಯಕಾರಿಯಾಗಿ; ಪರಿಣಾಮಕಾರಿಯಾದ ರೀತಿಯಲ್ಲಿ.

    operativeness
    ನಾಮವಾಚಕ
    ಕಾರ್ಯಕಾರಿತ್ವ; ಪರಿಣಾಮಕಾರಿತೆ.

    operatize
    ಸಕರ್ಮಕ ಕ್ರಿಯಾಪದ
    ಅಪೆರವಾಗಿಸು; ಗೀತನಾಟಕಕ್ಕೆ ಅಳವಡಿಸು; ಗೇಯನಾಟಕವಾಗಿ ಮಾಡು; ಸಂಗೀತನಾಟಕದ ರೂಪಕ್ಕೆ ತಿರುಗಿಸು.

    operator
    ನಾಮವಾಚಕ
  • ಚಾಲಕ; ನಡೆಸುವವ; ಯಂತ್ರದ, ಉಪಕರಣದ ಯಾ ಅಂಥದೇ ಸಲಕರಣೆಯ ಚಾಲಕ.
  • (ಮುಖ್ಯವಾಗಿ) ಟೆಲಿಹೋನ್‍ ಚಾಲಕ(ಕಿ); ದೂರವಾಣಿಯ ಕೇಂದ್ರದಲ್ಲಿ ದೂರವಾಣಿಗಳ ಸಂಪರ್ಕ ಕಲ್ಪಿಸುವವನು(ಳು) telegraph operator ಟೆಲಿಗ್ರಾಹ್‍ ಚಾಲಕ(ಕಿ).
  • ನಿರ್ವಾಹಕ; ಯಾವುದೇ ಕೈಗಾರಿಕಾ ಸಂಸ್ಥೆ, ಉದ್ಯಮ ಯಾ ವ್ಯವಸ್ಥೆಯನ್ನು ನಿರ್ವಹಿಸುವವನು.
  • (ಆಡುಮಾತು) ಕೆಲಸಗಾರ; ನಿರ್ವಾಹಕ; ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುವವನು: a smooth operator ಸುಸೂತ್ರ ಕೆಲಸಗಾರ; ಶಾಂತ ರೀತಿಯಲ್ಲಿ, ಗಲಾಟೆಯಿಲ್ಲದೆ ಕೆಲಸ ನಿರ್ವಹಿಸುವವ.
  • (ಗಣಿತ) ಕ್ರಿಯಾಚಿಹ್ನೆ; ಗಣಿತಕ್ರಿಯೆಯನ್ನು ಸೂಚಿಸುವ $+,\times,\div$ ಮೊದಲಾದ ಯಾವುದೇ ಚಿಹ್ನೆ.
  • ಹುಂಡಿ ವ್ಯಾಪಾರಿ; ಮುಖ್ಯವಾಗಿ ಸಟ್ಟಾ ಯಾ ದೊಡ್ಡ ಪ್ರಮಾಣದಲ್ಲಿ ಬಂಡವಾಳಪತ್ರಗಳ, ಹುಂಡಿಗಳ ವ್ಯಾಪಾರ ನಡಸುವವನು.
  • ಶಸ್ತ್ರ–ವೈದ್ಯ, ಚಿಕಿತ್ಸಕ; ಶಸ್ತ್ರಚಿಕಿತ್ಸೆ ಮಾಡುವವನು.
  • (ಅಶಿಷ್ಟ) ಜಾಣ; ಚತುರ; ಚಾಲಾಕಿ:
    1. ಸ್ವಕಾರ್ಯಸಾಧಕ; ಉಪಾಯಜ್ಞ; ಜಾಣತನ, ಮನವನ್ನೊಲಿಸಿಕೊಳ್ಳುವ ಮಾರ್ಗ, ಮೊದಲಾದವುಗಳಿಂದ ತನ್ನ ಉದ್ದೇಶಗಳನ್ನು ಸಾಧಿಸುವವನು.
    2. ಕಷ್ಟಗಳನ್ನು ಪರಿಹರಿಸಿಕೊಳ್ಳಲು ನಿಯಮಗಳನ್ನು ಯಾ ನಿರ್ಬಂಧಗಳನ್ನು ತಪ್ಪಿಸಿಕೊಳ್ಳುವುದರಲ್ಲಿ ಚಾಕಚಕ್ಯತೆ ತೋರಿಸುವವನು.
    3. ಭಾರೀ ಪ್ರಮಾಣದ ಹಣಕಾಸಿನ ವ್ಯವಹಾರದಲ್ಲಿ ಯಶಸ್ವಿಯಾಗಿರುವವನು.
    4. (ಗಂಡಸಾದರೆ) ಹೆಂಗಸರನ್ನು ಯಾ (ಹೆಂಗಸಾದರೆ) ಗಂಡಸರನ್ನು ಆಕರ್ಷಿಸುವುದರಲ್ಲಿ ಯಾ ಮೋಹಕವಾಗಿ ಒಲಿಸಿಕೊಳ್ಳುವುದರಲ್ಲಿ ಯಾ ಮೋಹಕವಾಗಿ ಒಲಿಸಿಕೊಳ್ಳುವುದರಲ್ಲಿ ನಿಪುಣ(ಣೆ).
    5. ನಯವಾಚಾಳಿ; ಜಾಣ ಮಾತುಗಾರ; ವಿವಿಧ ವಿಷಯಗಳನ್ನು ಕುರಿತು ಮನವೊಲಿಸಿಕೊಳ್ಳುವವನು.


  • logo