ಬಂಡೆಚಾಚು; ಬಂಡೆಯ ಯಾ ಬೆಟ್ಟದ ಬದಿಯಿಂದ ಹೊರಟ ಬಡುವಿನಂಥ ಚಾಚು.
(ಮುಖ್ಯವಾಗಿ ನೀರೊಳಗಿನ) ಬಂಡೆಗಳ (ಉಬ್ಬು) ಸಾಲು.
(ಗಣಿಗಾರಿಕೆ) ಲೋಹಶಿಲಾಸ್ತರ; ಲೋಹವನ್ನೊಳಗೊಂಡ ಕಲ್ಲಿನ ಪದರ.
ledged
ಗುಣವಾಚಕ
ಬಡುವಿರುವ; ಬಡುಗಳಿರುವ; ಮುಂಚಾಚುಳ್ಳ.
ledger
ನಾಮವಾಚಕ
ಲೆಡ್ಜರು; ವರ್ಗ, ಖಾತೆ, ಕಿರ್ದಿ – ಪುಸ್ತಕ; ವ್ಯಾಪಾರದ ಲೇವಾದೇವಿ ಲೆಕ್ಕಗಳನ್ನು, ಸಂಗ್ರಹರೂಪದಲ್ಲಿ, ಸರಕು ಮತ್ತು ಗಿರಾಕಿಗಳ ಹೆಸರಿನಲ್ಲಿ ವರ್ಗೀಕರಿಸಿ ಬರೆದಿಡುವ, ಅಗಲ ಕಿರಿದಾಗಿಯೂ, ಉದ್ದ ಹೆಚ್ಚಾಗಿಯೂ ಇರುವ, ವ್ಯಾಪಾರದ ಮುಖ್ಯ ಲೆಕ್ಕದ ಪುಸ್ತಕ.
ಗೋರಿಯ ಹಾಸುಗಲ್ಲು; ಸಮಾಧಿಯ ಚಪ್ಪಟೆ ಶಿಲೆ.
(ಕಟ್ಟಡದ ಮುಖಕ್ಕೆ ಸಮಾನಾಂತರವಾಗಿರುವ) ಸಾರುವೆಯ ಅಡ್ಡಮರ.
ledger line
ನಾಮವಾಚಕ
(ಸಂಗೀತ) = leger line.
ledger-blade
ನಾಮವಾಚಕ
ನೆಟ್ಟ ಅಲಗು; ಬಟ್ಟೆ ಕತ್ತರಿಸುವ ಯಂತ್ರದಲ್ಲಿ ಚಲಿಸದಂತೆ ನೆಟ್ಟಿರುವ ಸ್ಥಾಯಿ ಅಲಗು.
ledger-tackle
ನಾಮವಾಚಕ
ನೆಟ್ಟಗಾಳ; ಸೀಸದ ಗುಂಡು ಎಲೆಗಳನ್ನು ತಳದಲ್ಲಿ ಕುಳಿತಿರುವಂತೆ ಮಾಡುವ ಒಂದು ಬಗೆಯ ಗಾಳ.
ledgy
ಗುಣವಾಚಕ
ಬಡುವಿನಂಥ.
ಬಂಡೆಚಾಚುಗಳಿರುವ.
(ಮುಖ್ಯವಾಗಿ ನೀರಿನಡಿ) ಬಂಡೆಯುಬ್ಬುಗಳಿರುವ.
(ಮುಖ್ಯವಾಗಿ) ಲೋಹಸ್ತರಗಳಿರುವ; ಲೋಹಪದರಗಳಿಂದ ಕೂಡಿದ: fields are ledgy in places ಜಮೀನುಗಳು ಅಲ್ಲಲ್ಲಿ ಲೋಹಸ್ತರಗಳಿಂದ ಕೂಡಿವೆ.
lee
ನಾಮವಾಚಕ
ಪದಗುಚ್ಛ
under the lee of (ಯಾವುದೋ ಒಂದರ) ಮರೆಯಲ್ಲಿ: worked in the lee of the great ದೊಡ್ಡವರ ಆಶ್ರಯದಲ್ಲಿ ಕೆಲಸ ಮಾಡಿದ.