ಇಕ್ಕಟ್ಟಾದ; ಕಿಷ್ಕಿಂಧವಾದ; ಸಾಕಷ್ಟು ವಿಶಾಲವಾಗಿರದ; ಅನುಕೂಲವಾದಷ್ಟು ಸ್ಥಳವಿಲ್ಲದ.
incommodiousness
ನಾಮವಾಚಕ
ಇಕ್ಕಟ್ಟು; ಕಿಷ್ಕಿಂಧತೆ; ಸಾಕಷ್ಟು ಸ್ಥಳವಿಲ್ಲದಿರುವಿಕೆ.
incommunicability
ನಾಮವಾಚಕ
ಅವಿಭಾಜ್ಯತೆ; ಪಾಲುಮಾಡಲಾಗದಿರುವಿಕೆ.
ಅಪ್ರಕಾಶ್ಯತೆ; ಅನಿರ್ವಚನೀಯತೆ; ಇತರರಿಗೆ ಮಾತಿನ ಮೂಲಕ ತಿಳಿಸಲಾಗದಿರುವಿಕೆ ಯಾ ಹೇಳಲಾಗದಿರುವಿಕೆ.
ಮಿತಭಾಷಿತ್ವ; ಮೌನ ಪ್ರಕೃತಿ; ತುಟಿ ಬಿಚ್ಚದಿರುವುದು; ಹೆಚ್ಚು ಮಾತನಾಡದಿರುವುದು ಯಾ ಮಾತನಾಡಲು ಇಚ್ಛಿಸದಿರುವುದು.
ಸಂಪರ್ಕರಾಹಿತ್ಯ; ಪರಸ್ಪರ ಸಂಪರ್ಕ, ಮಾತುಕತೆ, ವ್ಯವಹಾರ ಇಲ್ಲದಿರುವಿಕೆ.
incommunicable
ಗುಣವಾಚಕ
(ಇತರರಿಗೆ) ಕೊಡಲಾಗದ; ಹಂಚಲಾಗದ; ಪಾಲು ಮಾಡಿಕೊಡಲಾಗದ; ಅವಿಭಾಜ್ಯ; ಅಪ್ರಮೇಯ: incommunicable power of the Crown ರಾಜನ ಅವಿಭಾಜ್ಯವಾದ ಯಾ ಇತರರೊಡನೆ ಹಂಚಿಕೊಳ್ಳಲಾಗದ – ಶಕ್ತಿ, ಅಧಿಕಾರ. incommunicable joy ಇತರರಿಗೆ ಪಾಲುಮಾಡಿಕೊಡಲಾಗದ ಸಂತೋಷ.
ಅನಿರ್ವಚನೀಯ; ಅಪ್ರಕಾಶ್ಯ; ಇತರರಿಗೆ ಮಾತಿನ ಮೂಲಕ ತಿಳಿಸಲಾಗದ ಯಾ ಹೇಳಲಾಗದ.
ಮಿತಭಾಷಿಯಾದ; ಮೌನ ಪ್ರಕೃತಿಯ; ತುಟಿ ಬಿಚ್ಚದ; ತಿಳಿಸಲು ಯಾ ಹೇಳಲು ಇಚ್ಛಿಸದ.
ಸಂಪರ್ಕರಹಿತ; ಪರಸ್ಪರ ಸಂಪರ್ಕವಿಲ್ಲದ; ಸಲ್ಲಾಪ, ಮಾತುಕತೆ ಇಲ್ಲದ.