logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

operate
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಆಗಿಸು; ಉಂಟುಮಾಡು; ನೆರವೇರಿಸು: energy operates changes ಶಕ್ತಿಯು ಬದಲಾವಣೆಗಳನ್ನುಂಟುಮಾಡುತ್ತದೆ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ನಿರ್ವಹಿಸು; ಕಾರ್ಯಮಾಡು; ನಡೆಸು: operate a press ಮುದ್ರಣಾಲಯವನ್ನು ನಡೆಸು.

  • operatic
    ಗುಣವಾಚಕ
  • ಅಪೆರಾದ; ಗೀತ, ಗೇಯ–ನಾಟಕದ; ಅಪೆರಾಕ್ಕೆ ಸಂಬಂಧಿಸಿದ.
  • ಅಪೆರಾದಂಥ; ಗೀತ, ಗೇಯ–ನಾಟಕದಂಥ.

  • operatically
    ಕ್ರಿಯಾವಿಶೇಷಣ
    ಅಪೆರಾ ರೀತಿಯಲ್ಲಿ; ಗೀತನಾಟಕದಂತೆ; ಗೇಯನಾಟಕದ ಶೈಲಿಯಲ್ಲಿ.

    operatics
    ನಾಮವಾಚಕ
    (ಬಹುವಚನ) ಅಪೆರಾ ಕಲೆ; ಗೀತನಾಟಕವನ್ನು ರಚಿಸುವ ಮತ್ತು ಪ್ರದರ್ಶಿಸುವ ಕಲೆ.

    operating room
    ನಾಮವಾಚಕ
    = operating theatre.

    operating system
    ನಾಮವಾಚಕ
    ಆಪರೇಟಿಂಗ್‍ ಸಿಸ್ಟಂ; ಕಂಪ್ಯೂಟರ್‍ ಪ್ರೋಗ್ರಾಮನ್ನು ನಡೆಸುವ ಮೂಲಭೂತವಾದ ಮೆದುಸರಕು (software).

    operating table
    ನಾಮವಾಚಕ
    ಶಸ್ತ್ರಚಿಕಿತ್ಸೆಯ ಮೇಜು.

    operating theatre
    ನಾಮವಾಚಕ
    ಶಸ್ತ್ರಚಿಕಿತ್ಸೆಯ ಕೋಣೆ; ಶಸ್ತ್ರಕ್ರಿಯೆ ಕೊಠಡಿ; ಶಸ್ತ್ರಚಿಕಿತ್ಸೆ (ನಡೆಸುವ) ಕೋಣೆ.

    operation
    ನಾಮವಾಚಕ
  • ಕಾರ್ಯ; ಕ್ರಿಯೆ.
  • ಕಾರ್ಯಾಚರಣೆ; ಕಾರ್ಯ–ನಿರ್ವಾಹ, ನಿರ್ವಹಣೆ, ನೆರವೇರಿಕೆ: not yet in operation ಇನ್ನೂ ಕಾರ್ಯಾಚರಣೆಯಲ್ಲಿಲ್ಲ.
  • ಕಾರ್ಯಕಾರಿತ್ವ; ಪರಿಣಾಮಕಾರಿತ್ವ; ಒಂದು ವಸ್ತುವಿನ ಪರಿಣಾಮಕಾರಿತ್ವದ ವ್ಯಾಪ್ತಿ ಯಾ ಹರವು.
  • ಪ್ರಕ್ರಿಯೆ; ಕಾರ್ಯ ಗತಿ, ರೀತಿ: the operation of breathing ಉಸಿರಾಡುವ ಪ್ರಕ್ರಿಯೆ.
  • (ಮುಖ್ಯವಾಗಿ ಕ್ರಿಯಾಸರಣೆಯ) ಒಂದು ಕ್ರಿಯೆ (ಅನೇಕವೇಳೆ ಬಹುವಚನದಲ್ಲಿ ಪ್ರಯೋಗ): begin operations ಕಾರ್ಯಚರಣೆಗಳನ್ನು ಆರಂಭಿಸು.
  • (ಶಸ್ತ್ರವೈದ್ಯ) ಶಸ್ತ್ರಕ್ರಿಯೆ; ಶಸ್ತ್ರಚಿಕಿತ್ಸೆ; (ಅಂಗವಿಕಾರ, ಗಾಯ, ವ್ಯಾಧಿ, ನೋವು, ಮೊದಲಾದವನ್ನು ವಾಸಿಮಾಡಲು ದೇಹದ ಯಾವುದೇ ಭಾಗಕ್ಕೆ ವಾಸಿಮಾಡಲು) ದೇಹದ ಯಾವುದೇ ಭಾಗಕ್ಕೆ ಮಾಡುವ ಶಸ್ತ್ರಕ್ರಿಯೆ.
  • (ಸೈನ್ಯಪಡೆ, ಹಡಗುಗಳು, ಮೊದಲಾದವುಗಳ) ಯುದ್ಧತಂತ್ರದ–ಚಲನವಲನ, ಕಾರ್ಯಾಚರಣೆ: combined operation (ಭೂಸೈನ್ಯ, ನೌಕಾಸೈನ್ಯಗಳ) ಸಂಯುಕ್ತ ಚಲನವಲನ; ಜಂಟಿ ಕಾರ್ಯಾಚರಣೆ.
  • [ಸಂಕೇತನಾಮ(code-name)ದ ಹಿಂದೆ ಬಳಸುವಲ್ಲಿ] ಕಾರ್ಯಾಚರಣೆ: Operation Bluestar.
  • ಹಣಕಾಸಿನ–ವ್ಯವಹಾರ, ವಹಿವಾಟು, ಲೇವಾದೇವಿ.
  • (ಗಣಿತ) ಕ್ರಿಯೆ; ಒಂದು ಸಂಖ್ಯೆ ಯಾ ಮೊತ್ತದ ಮೌಲ್ಯವನ್ನು ಬದಲಾಯಿಸುವಂತೆ ಅದಕ್ಕೆ ನಡೆಸುವ ಸಂಕಲನ, ಗುಣನ, ಮೊದಲಾದ ಯಾವುದೇ ಕ್ರಿಯೆ.
  • ಚಾಲನೆ; ಜಾರಿ: comes into operation ಜಾರಿಗೆ ಬರುತ್ತದೆ.
  • ಕೆಲಸ ಮಾಡುವ ಬಗೆ; ಕಾರ್ಯರೀತಿ; ಕ್ರಿಯಾವಿಧಾನ: its operation is easily explained ಅದರ ಕಾರ್ಯರೀತಿಯನ್ನು ಸುಲಭವಾಗಿ ವಿವರಿಸಬಹುದು.
  • (ಕಾಲದ ಯಾ ವ್ಯಾಪ್ತಿಯ ವಿಷಯದಲ್ಲಿ) ಊರ್ಜಿತತ್ವ; ಮಾನ್ಯತೆ; ಬಳಕೆ; ರೂಢಿ: must extend its operation ಇನ್ನೂ ಹೆಚ್ಚು ಕಾಲ, ಯಾ ಇನ್ನೂ ವಿಶಾಲ ಕ್ಷೇತ್ರದಲ್ಲಿ ಅದರ ಬಳಕೆಯನ್ನು ವಿಸ್ತರಿಸಬೇಕು.
  • ಕಾರ್ಯದ–ವ್ಯಾಪ್ತಿ, ಹರವು, ಅವಕಾಶ.
  • ಚಟುವಟಿಕೆ.

  • operational
    ಗುಣವಾಚಕ
  • ಕಾರ್ಯಕಾರಿ; ಕಾರ್ಯಮಾಡಬಲ್ಲ; ಉಪಯೋಗಿಸಬಲ್ಲ; ಕಾರ್ಯಸಮರ್ಥ; ಕಾರ್ಯಾತ್ಮಕ: how soon will the truck be operational ಟ್ರಕ್ಕು ಎಷ್ಟು ಬೇಗ, ಕೆಲಸಮಾಡಬಲ್ಲದ್ದಾಗುವುದು?
  • ಕಾರ್ಯಕಾರಿ; ಕಾರ್ಯಸಿದ್ಧ; ಕಾರ್ಯಮಾಡಲು, ಕಾರ್ಯಕ್ಕೆ ತೊಡಗಲು–ಸಿದ್ಧವಾಗಿರುವ.
  • (ಸೈನ್ಯ)
    1. ಸೇನಾ ಕಾರ್ಯಾಚರಣೆಯ; ಸೇನಾ ಕಾರ್ಯಾಚರಣೆಗೆ ಸಂಬಂಧಪಟ್ಟ; ಸೇನಾ ಕಾರ್ಯಾಚರಣೆಗಳಲ್ಲಿ ತೊಡಗಿರುವ; ಯುದ್ಧ ಕಾರ್ಯಾಚರಣೆಗಳಿಗೆ ಬಳಸುವ.
    2. ಕಾರ್ಯನಿರತ; ಸಮರಸೇವೆಯಲ್ಲಿರುವ; ಯುದ್ಧ ಕಾರ್ಯದ ಮೇಲಿನ; ಕದನ ನಡಸುತ್ತಿರುವ.
  • ಕಾರ್ಯಸಂಬಂಧಿ; ಕಾರ್ಯಕ್ಕೆ, ಪ್ರಕ್ರಿಯೆಗೆ, ಕಾರ್ಯರೀತಿಗೆ, ಕಾರ್ಯ ನಿರ್ವಹಣೆಗೆ–ಸಂಬಂಧಪಟ್ಟ.


  • logo