logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lector
ನಾಮವಾಚಕ
ಪಾಠಕ; ವಾಚಕ; ಬೈಬಲ್ಲಿನ ಪ್ರಾರ್ಥನಕಾಲದಲ್ಲಿ ಪಠನ ಮಾಡುವವ.

lectrice
ನಾಮವಾಚಕ
ತನ್ನ ಸ್ವಂತ ಭಾಷೆಯ ಮೂಲಕ ಬೋಧಿಸಲು, ಮುಖ್ಯವಾಗಿ ವಿದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ನೇಮಕವಾಗಿರುವ ಉಪನ್ಯಾಸಕಿ ಯಾ ರೀಡರು.

lecture
ನಾಮವಾಚಕ ನುಡಿಗಟ್ಟು
read (one) a lecture ತಪ್ಪುಹಿಡಿದು ಖಂಡಿಸು ಯಾ ಛೀಮಾರಿ ಹಾಕು; ವಾಗ್ದಂಡನೆ ಮಾಡು.
  • (ಸಾಮಾನ್ಯವಾಗಿ ಬೋಧನೆಗಾಗಿ, ಒಂದು ವಿಷಯದ ಮೇಲೆ, ಶ್ರೋತೃಗಳ ಯಾ ತರಗತಿಯ ವಿದ್ಯಾರ್ಥಿಗಳ ಮುಂದೆ ಮಾಡುವ) ಉಪನ್ಯಾಸ; ಭಾಷಣ; (ಪಾಠ) ಪ್ರವಚನ.
  • ವಾಗ್ದಂಡನೆ; ಖಂಡನೆ; ಛೀಮಾರಿ; ಖಂಡಿಸಲು ಯಾ ಛೀಮಾರಿ ಹಾಕಲು ಮಾಡುವ ಗಂಭೀರವಾದ ದೀರ್ಘಭಾಷಣ.

  • lecture
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಖಂಡಿಸು; ವಾಗ್ದಂಡನೆ ಮಾಡು; ಛೀಮಾರಿಹಾಕು; ತಪ್ಪುಹಿಡಿದು ಬುದ್ಧಿ ಹೇಳು: he lectured his son regularly ಅವನು ತನ್ನ ಮಗನಿಗೆ ನಿರಂತರವಾಗಿ ವಾಗ್ದಂಡನೆ ಮಾಡಿದ.
  • ಉಪನ್ಯಾಸದಿಂದ (ತರಗತಿಗೆ ಯಾ ಶ್ರೋತೃಗಳಿಗೆ) ಶಿಕ್ಷಣ ನೀಡು ಯಾ ಮನರಂಜನೆ ನೀಡು.

  • lecturer
    ನಾಮವಾಚಕ
  • ಭಾಷಣಕಾರ; ಉಪನ್ಯಾಸಕ; ಪ್ರವಚನಕಾರ.
  • (ಅಮೆರಿಕನ್‍ ಪ್ರಯೋಗ) ಕಾಲೇಜುಗಳಲ್ಲಿಯ ಅಧ್ಯಾಪಕ.

  • lecturership
    ನಾಮವಾಚಕ
  • ಉಪನ್ಯಾಸಕ – ವೃತ್ತಿ, ಉದ್ಯೋಗ.
  • (ಕಾಲೇಜಿನ) ಅಧ್ಯಾಪಕತ್ವ.

  • lecythus
    ನಾಮವಾಚಕ
    (ಗ್ರೀಕ್‍ ಪ್ರಾಕ್ತನಶಾಸ್ತ್ರ) ಕಿರಿದಾದ ಕತ್ತುಳ್ಳ, ತೆಳುವಾದ, ಅಲಂಕಾರದ ಕಲಶ.

    LED
    ಸಂಕ್ಷಿಪ್ತ
    light-emitting diode.

    led
    ಕ್ರಿಯಾಪದ
    lead ಧಾತುವಿನ ಭೂತರೂಪ ಮತ್ತು ಭೂತಕೃದಂತ.

    led captain
    ನಾಮವಾಚಕ
  • ಅನುಚರ; ಆಶ್ರಿತ; ಬೆನ್ನು ಬಿದ್ದವ.
  • ಭಟ್ಟಂಗಿ; ಹೊಗಳುಭಟ್ಟ.
  • ಪರೋಪಜೀವಿ; ಪರಪುಟ್ಟ.


  • logo