logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incohesive
ಗುಣವಾಚಕ
ಅಸಂಸಕ್ತ; ಪರಸ್ಪರ ಅಂಟಿಕೊಂಡಿರದ; ಒಂದಕ್ಕೊಂದು ಸೇರದ (ರೂಪಕವಾಗಿ ಸಹ).

incombustibility
ನಾಮವಾಚಕ
ಅದಾಹ್ಯತೆ; (ಬೆಂಕಿಯಿಂದ) ಸುಟ್ಟುಹಾಕಲಾಗದ ಲಕ್ಷಣ; ಉರಿಸಿಹಾಕಲು ಆಗದಿರುವಿಕೆ.

incombustible
ಗುಣವಾಚಕ
ಅದಾಹ್ಯ; (ಬೆಂಕಿಯಿಂದ) ಸುಟ್ಟುಹಾಕಲಾಗದ; ಉರಿಸಿಹಾಕಲಾಗದ.

income
ನಾಮವಾಚಕ
(ಒಬ್ಬನ ಭೂಮಿ, ಉದ್ಯೋಗ, ವ್ಯಾಪಾರ, ಮೊದಲಾದವುಗಳಿಂದ ಬರುವ, ನಿಯತಕಾಲಿಕವಾದ, ಸಾಮಾನ್ಯವಾಗಿ ವಾರ್ಷಿಕ) ವರಮಾನ; ಹುಟ್ಟುವಳಿ; ಉತ್ಪತ್ತಿ; ಆದಾಯ; ಆಯ.

income group
ನಾಮವಾಚಕ
ಆದಾಯ ವರ್ಗ; ವರಮಾನ ವರ್ಗ; ಆದಾಯದ ಮೇಲೆ ನಿರ್ಧರಿಸಿದ ಜನಸಂಖ್ಯೆಯ ಒಂದು ವರ್ಗ.

income tax
ನಾಮವಾಚಕ
ವರಮಾನ ತೆರಿಗೆ; ಆದಾಯ ಕರ; ವರಮಾನದ ಮೇಲೆ ವಿಧಿಸುವ ತೆರಿಗೆ.

incomer
ನಾಮವಾಚಕ
  • ಪ್ರವೇಶಿ; ಆಗಂತುಕ; ಒಳಕ್ಕೆ ಬಂದವನು.
  • ವಲಸಿಗ; ವಲಸೆ ಬಂದವನು.
  • (ಅನುಚಿತವಾಗಿ) ಒಳಹೊಕ್ಕವನು; ಮಧ್ಯಪ್ರವೇಶಿ; ಮಧ್ಯೆ (ಅಡ್ಡಿಯಾಗಿ) ಬಂದವನು.
  • ವಾರಸುದಾರ; ಉತ್ತರಾಧಿಕಾರಿ.

  • incoming
    ನಾಮವಾಚಕ
  • ಪ್ರವೇಶ; ಒಳಹೋಗುವುದು.
  • ಬರವು; ಆಗಮನ.
  • (ಸಾಮಾನ್ಯವಾಗಿ ಬಹುವಚನದಲ್ಲಿ) ಹುಟ್ಟುವಳಿ; ಉತ್ಪತ್ತಿ; ಆದಾಯ; ವರಮಾನ.

  • incoming
    ಗುಣವಾಚಕ
  • ಪ್ರವೇಶಿ; ಆಗಂತುಕ; (ಒಳಕ್ಕೆ) ಬರುವ; ಆಗಮಿಸುವ: incoming tide ಬರುವ ಭರತ. incoming phone call ಆಗಾಮಿ ಕರೆ; (ಬರುವ) ಹೊನ್‍ ಕರೆ.
  • (ಒಬ್ಬನ) ತರುವಾಯ (ಸ್ಥಾನ ಮೊದಲಾದವಕ್ಕೆ) ಬರುವ; ಉತ್ತರಾಧಿಕಾರಿಯಾಗುವ; ವಾರಸುದಾರನಾಗುವ.
  • ವಲಸೆ ಬರುವ.
  • (ಲಾಭದ ವಿಷಯದಲ್ಲಿ) ಜಮಾ ಆಗುವ; ಸೇರಿ ಬರುವ; ಕೂಡಿಕೊಂಡು ಬರುವ.

  • incommensurability
    ನಾಮವಾಚಕ
  • (ಗಣಿತ)
    1. ಅಪರಿಮೇಯತೆ; (ಎರಡು ಸಂಖ್ಯೆಗಳ ವಿಷಯದಲ್ಲಿ) ಸಾಮಾನ್ಯ ಅಪವರ್ತನವಿಲ್ಲದಿರುವಿಕೆ.
    2. (ಸಂಖ್ಯೆಯ ವಿಷಯದಲ್ಲಿ) ವಾಸ್ತವಿಕವಾದರೂ ಎರಡು ಸಂಖ್ಯೆಗಳ ಪ್ರಮಾಣರೂಪದಲ್ಲಿ ಸೂಚಿಸಲಾಗದಿರುವಿಕೆ.
  • ಅಪ್ರಮೇಯತೆ; ಅಳೆಯಲಾಗದಂಥ, ಅಳವಿಗೊಳಪಡದಂಥ ಲಕ್ಷಣ.
  • ಅತುಲನಾರ್ಹತೆ; ಅನುಪಮಾರ್ಹತೆ; (ಒಂದರೊಡನೆ) ಹೋಲಿಸಲು ತಕ್ಕುದಲ್ಲದ ಲಕ್ಷಣ.


  • logo