logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

opera comique
ನಾಮವಾಚಕ
(ಮುಖ್ಯವಾಗಿ ಹ್ರಾನ್ಸಿನ) ಲಘು ಗೀತನಾಟಕ; ಹಾಡದೆ ಮಾತನಾಡುವ ಸಂಭಾಷಣೆ ಮತ್ತು ಲಘುವಾದ ವಸ್ತುವನ್ನುಳ್ಳ, ಹಾಸ್ಯವಾಗಿಯೇ ಇರಬೇಕಾಗಿಲ್ಲದ ಸಂಗೀತಕ.

opera seria
ನಾಮವಾಚಕ
(ಮುಖ್ಯವಾಗಿ 18ನೆ ಶತಮಾನದ, ಇಟಲಿಯ) ಗಂಭೀರ–ಅಪೆರಾ, ಗೀತನಾಟಕ; ಗಂಭೀರವಾದ, ಸಾಮಾನ್ಯವಾಗಿ ಕ್ಲ್ಯಾಸಿಕಲ್‍ ಯಾ ಪೌರಾಣಿಕ ವಿಷಯದ ಮೇಲಿನ ಅಪೆರಾ, ಗೀತನಾಟಕ.

opera-cloak
ನಾಮವಾಚಕ
ಅಪೆರಾ ಮೇಲಂಗಿ, ಗವಸು; ಗೀತನಾಟಕಗಳಿಗೆ (ಅಪೆರಾಗಳಿಗೆ) ಯಾ ಸಂಜೆಯ ಸಂತೋಷಕೂಟಗಳಿಗೆ ಹೋಗುವ ಮಹಿಳೆಯರು ಧರಿಸುವ ದಗಲೆಯ ಮೇಲಂಗಿ, ಗವಸು.

opera-glasses
ನಾಮವಾಚಕ
ಅಪೆರಾ ದುರ್ಬೀನು; ಅಪೆರಾದಲ್ಲಿ ಯಾ ನಾಟಕ ಮಂದಿರದಲ್ಲಿ ಬಳಸುವ ಸಣ್ಣ ದುರ್ಬೀನು.

opera-hat
ನಾಮವಾಚಕ
(ಗಂಡಸು ಧರಿಸುವ ಉದ್ದವಾದ, ಮಡಿಸಬಲ್ಲ) ಅಪೆರಾ ಹ್ಯಾಟು.

opera-hood
ನಾಮವಾಚಕ
(ಹೆಂಗಸರ) ಅಪೆರಾ ಗವಸಿನ ತಲೆಮುಸುಕು.

opera-house
ನಾಮವಾಚಕ
ಅಪೆರಾ ಮಂದಿರ; ಗೀತನಾಟಕಗಳನ್ನು ಪ್ರದರ್ಶಿಸುವ ರಂಗಮಂದಿರ.

operability
ನಾಮವಾಚಕ
  • ಚಾಲನಸಾಧ್ಯತೆ; ನಡೆಸಬಹುದಾಗಿರುವಿಕೆ.
  • ಶಸ್ತ್ರಕ್ರಿಯೆ ಮಾಡಬಹುದಾಗಿರುವಿಕೆ; ಶಸ್ತ್ರಕ್ರಿಯಾಸಾಧ್ಯತೆ.

  • operable
    ಗುಣವಾಚಕ
  • ಚಾಲನಸಾಧ್ಯ; ನಡೆಸಬಲ್ಲ; ನಡೆಸಬಹುದಾದ: a highly operable machine ಚೆನ್ನಾಗಿ ನಡೆಸಬಲ್ಲ ಯಂತ್ರ.
  • ಶಸ್ತ್ರಚಿಕಿತ್ಸಾಯೋಗ್ಯ; ಶಸ್ತ್ರಚಿಕಿತ್ಸೆಗೆ ಮಾಡಬಹುದಾದ; ಶಸ್ತ್ರಕ್ರಿಯೆಗೆ, ಶಸ್ತ್ರಚಿಕಿತ್ಸೆಗೆ ತಕ್ಕುದಾದ, ಅರ್ಹವಾದ.

  • operand
    ನಾಮವಾಚಕ
    (ಗಣಿತ) ಪರಿಕರ್ಮ್ಯ; ಪರಿಕರ್ಮಕ್ಕೆ ಗುರಿಯಾಗಿರುವ ಪರಿಮಾಣ.


    logo