logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lech
ನಾಮವಾಚಕ
(ಆಡುಮಾತು)
  • ಕಾಮ(ನೆ); (ಮುಖ್ಯವಾಗಿ) ಲೈಂಗಿಕ ಭಾವನೆ; ತೀವ್ರವಾದ ಕಾಮುಕ ಭಾವನೆ.
  • = lecher.

  • lecher
    ನಾಮವಾಚಕ
    ವ್ಯಭಿಚಾರಿ; ಕಾಮುಕ; ವಿಷಯ ಲಂಪಟ; ಕಚ್ಚೆಹರುಕ; ಹಾದರಿಗ.

    lecherous
    ಗುಣವಾಚಕ
    ವಿಷಯಲಂಪಟ(ತೆಯ); ಹಾದರದ; ಕಾಮುಕ; ಕಚ್ಚೆಹರುಕತನದ; ವ್ಯಭಿಚಾರದ.

    lecherously
    ಕ್ರಿಯಾವಿಶೇಷಣ
    ವ್ಯಭಿಚಾರಿಯಾಗಿ; ಲಂಪಟನಾಗಿ; ಕಾಮುಕತೆಯಿಂದ; ಕಚ್ಚೆಹರುಕತನದಿಂದ.

    lecherousness
    ನಾಮವಾಚಕ
    ಕಾಮುಕತೆ; ವಿಷಯಲಂಪಟತೆ; ಕಚ್ಚೆಹರುಕತನ.

    lechery
    ನಾಮವಾಚಕ
    ವಿಷಯಲಂಪಟತೆ; ಹಾದರ; ವ್ಯಭಿಚಾರ; ಕಚ್ಚೆಹರುಕತನ.

    lecithin
    ನಾಮವಾಚಕ
    (ರಸಾಯನವಿಜ್ಞಾನ) ಲೆಸಿತಿನ್‍;
  • ಮೇದಸ್ಸಿನ ಬಳಗದ, ಪ್ರಾಣಿಗಳು, ಮೊಟ್ಟೆ ಲೋಳೆ ಮತ್ತು ಕೆಲವು ಗಿಡಗಳಲ್ಲಿ ಸಹಜವಾಗಿ ಕಾಣಬರುವ, ಹಾಸೊಲಿಪಿಡ್‍ ಗುಂಪುಗಳಲ್ಲಿ ಒಂದು ಹಾಸಾರಿಕ್‍ ಆಮ್ಲ ಸಂಯುಕ್ತ.
  • ಆಹಾರಪದಾರ್ಥಗಳು ಮೊದಲಾದವನ್ನು ಎಮಲ್ಷನ್ನಾಗಿ ಪರಿವರ್ತಿಸಲು ಬಳಸುವ, ಈ ಸಂಯುಕ್ತದಿಂದ ಮಾಡಿದ ಒಂದು ಪದಾರ್ಥ.

  • lectern
    ನಾಮವಾಚಕ
    ನಿಲುಪೀಠ; ವಾಚನಪೀಠ:
  • ಮುಖ್ಯವಾಗಿ ನಿಂತುಕೊಂಡು ಬೈಬಲ್ಲಿನ ಪಾಠಗಳನ್ನು ಓದಿ ಹೇಳಲು ಚರ್ಚಿನಲ್ಲಿ ಬಳಸುವ ನಿಲುಮೇಜು.
  • ಹಾಡುಮೇಜು; ಗಾಯಕಪೀಠ; ಚರ್ಚಿನ ಗಾಯಕ ತಂಡವು ಗಾಯನ ಪುಸ್ತಕವನ್ನು ಮುಂದೆ ಇಟ್ಟುಕೊಳ್ಳುವ ಮೇಜು.
  • ಭಾಷಣಕಾರ, ಉಪನ್ಯಾಸಕಾರ, ಮೊದಲಾದವರು ಬಳಸುವ ಇಂಥದೇ ಮೇಜು.

  • lection
    ನಾಮವಾಚಕ
    ಪಠನ; ವಾಚನ; ನಿರ್ದಿಷ್ಟ ಗ್ರಂಥದಲ್ಲಿ ಯಾ ಗ್ರಂಥದ ಆವೃತ್ತಿಯಲ್ಲಿ ಕಂಡುಬರುವ ಗ್ರಂಥಭಾಗದ ಪಠನ ಯಾ ವಾಚನ.

    lectionery
    ನಾಮವಾಚಕ
  • ವಾಚನಪಟ್ಟಿ; ವಾಚನಸೂಚಿ; ಚರ್ಚಿನಲ್ಲಿ ಪ್ರಾರ್ಥನಾ ಕಾಲದಲ್ಲಿ ಓದಲು ಗೊತ್ತುಮಾಡಿರುವ ಬೈಬಲ್‍ ಭಾಗಗಳ ಪಟ್ಟಿ.
  • ಅಂಥ ಪಠನ ಭಾಗಗಳುಳ್ಳ ಪುಸ್ತಕ; ಪಠನ ಯಾ ವಾಚನ ಸಂಗ್ರಹ.


  • logo