ವೇಷಾಂತರ ತಾಳಿ; ಅಜ್ಞಾತವೇಷದಲ್ಲಿ; ಛದ್ಮವೇಷಧಾರಿಯಾಗಿ; ಗುರುತು ಮರೆಸಿಕೊಂಡು; ಹೆಸರು, ಸ್ವರೂಪ, ಮೊದಲಾದವುಗಳನ್ನು ಮರೆಸಿಕೊಂಡು: travel incognito ಅಜ್ಞಾತವಾಗಿ ಪ್ರಯಾಣ ಮಾಡು. do good incognito ಅಜ್ಞಾತವಾಗಿ ಲೋಕೋಪಕಾರ ಮಾಡು.
incognito
ನಾಮವಾಚಕ
ಅಜ್ಞಾತವೇಷಧಾರಿ; ಛದ್ಮವೇಷಧಾರಿ; ವೇಷಾಂತರಗೊಂಡವನು; ಗುರುತು ಮರೆಸಿಕೊಂಡವನು.
incognizable
ಗುಣವಾಚಕ
ಅಜ್ಞೇಯ; ಅರಿವಿಗೊಳಪಡದ; ಇಂದ್ರಿಯಗಳಿಗೆ ಯಾ ಬುದ್ಧಿಗೆ ಗ್ರಹಿಸಲಾಗದ.
incognizance
ನಾಮವಾಚಕ
ಅಗ್ರಹಣ; ಅರಿವಿಗೆ, ಗ್ರಹಿಕೆಗೆ ಬಂದಿಲ್ಲದಿರುವಿಕೆ; ತಿಳಿವಿಗೆ ಬರದಿರುವಿಕೆ; ಅಜ್ಞಾತ ಸ್ಥಿತಿ ಯಾ ಲಕ್ಷಣ.
incognizant
ಗುಣವಾಚಕ
ಅಜ್ಞಾತ; ಅಗೃಹೀತ; ಅರಿವಿಗೆ ಎಟುಕದ; ತಿಳಿವಿಗೆ ಬರದ.
incoherence
ನಾಮವಾಚಕ
ಅಸಂಬದ್ಧತೆ; ಅನನ್ವಯ; ಅನನ್ವಿತವಾಗಿರುವಿಕೆ; ಪರಸ್ಪರ ಸಂಬಂಧವಿಲ್ಲದಿರುವುದು (ರೂಪಕವಾಗಿ ಸಹ).