logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

opener
ನಾಮವಾಚಕ ಪದಗುಚ್ಛ
for opener (ಆಡುಮಾತು) ಮೊದಲಿಗೆ; ಪ್ರಾರಂಭದಲ್ಲಿ.
  • ತೆರೆಗ; ತೆರೆಯುವ ವಸ್ತು, ಸಾಧನ; ಭದ್ರವಾಗಿ ಮುಚ್ಚಿದ ಪಾತ್ರೆ, ಡಬ್ಬಿ, ಮೊದಲಾದವುಗಳನ್ನು ತೆರೆಯುವ ಸಾಧನ.
  • (ಆಡುಮಾತು) (ಒಂದಾಗುತ್ತಲೊಂದು ಕ್ರಮವಾಗಿ ಬರುವ ನಾಟಕದ ಪ್ರಕರಣ, ಕ್ರೀಡಾ ಕಾರ್ಯಕ್ರಮ, ಮೊದಲಾದವುಗಳಲ್ಲಿ) ಮೊದಲನೆಯಯದು; ಪ್ರಥಮ; ಆದ್ಯ.
  • (ಕ್ರಿಕೆಟ್‍) ಮೊದಲ ಬ್ಯಾಟುಗಾರ; ಇನಿಂಗ್ಸನ್ನು ಪ್ರಾರಂಭಿಸುವ ಬ್ಯಾಟುಗಾರ.
  • (ಬಹುವಚನದಲ್ಲಿ) ಪೋಕರ್‍ ಮೊದಲಾದ ಇಸ್ಪೀಟಾಟಗಳಲ್ಲಿ ಪಣಕಟ್ಟಲು ಮೊದಲ ಅವಕಾಶ ನೀಡುವ ಎಲೆಗಳು.

  • opening
    ನಾಮವಾಚಕ
  • (ಮುಖ್ಯವಾಗಿ ಒಳಹೊಗಲು ದಾರಿ ಮಾಡಿಕೊಡುವ) ತೂತು; ರಂಧ್ರ; ಕಂಡಿ; ಸಂದು; ಬಿರುಕು.
  • (ಉದ್ಯೋಗ, ವ್ಯವಹಾರ, ಮೊದಲಾದವುಗಳಲ್ಲಿ) ಸದವಕಾಶ; ಒಳ್ಳೆಯ ಅವಕಾಶ; ಸುಯೋಗ; ಅನುಕೂಲವಾದ ಸಂದರ್ಭ, ಸನ್ನಿವೇಶ.
  • ಪ್ರಾರಂಭ; ಉದ್ಘಾಟನೆ; ಮೊದಲ, ಆರಂಭದ–ಭಾಗ.
  • (ಚದುರಂಗ) ಪ್ರಾರಂಭದ ಆಟ; ಮೊದಲ ನಡೆ; ಆಟದ ಪ್ರಾರಂಭದಲ್ಲಿ ರೂಢಿಯಾಗಿ ಅನುಕ್ರಮವಾಗಿ ಕಾಯಿ ನಡೆಸುವ ರೀತಿ.
  • (ಮೊಕದ್ದಮೆಯನ್ನು ಕುರಿತು ನ್ಯಾಯವಾದಿಯು ಕೊಡುವ) ಆರಂಭ ಹೇಳಿಕೆ; ಉಪಕ್ರಮ ಭಾಷಣ; ಪ್ರಾಸ್ತಾವಿಕ ಮಾತು.
  • ತೆರೆಯುವುದು; ಬಿಚ್ಚುವುದು; ಅರಳುವಿಕೆ; ವಿಕಸನ; ವಿಸ್ತರಣೆ.
  • ತೆರಪು; ಅಂತರ.
  • ಮಾರ್ಗ; ಹಾದಿ; ದ್ವಾರ.
  • (ಪುಸ್ತಕದಲ್ಲಿನ) ಎದುರುಬದುರು ಪುಟಗಳ ಜೋಡಿ.

  • opening
    ಗುಣವಾಚಕ
  • ಆರಂಭದ; ಮೊದಲಿನ; ಪ್ರಾರಂಭಿಕ: his opening remarks ಅವನ ಆರಂಭದ ಮಾತುಗಳು. opening batsman ಆರಂಭದ ಬ್ಯಾಟುಗಾರ.
  • ತೆರೆಯುವ; ಬಿಚ್ಚುವ.
  • (ಹೂಗಳ ವಿಷಯದಲ್ಲಿ) ಅರಳುವ; ವಿಕಸನದ.

  • opening-time
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ತೆರೆಯುವ ಕಾಲ; ವಸತಿಗೃಹಗಳು ಗಿರಾಕಿಗಳಿಗೆ ಊಟಮದ್ಯಗಳನ್ನು ಒದಗಿಸಲು ಕಾನೂನುಬದ್ಧವಾಗಿ ಪ್ರಾರಂಭಿಸುವ ಕಾಲ.

    openly
    ಕ್ರಿಯಾವಿಶೇಷಣ
  • ಮುಚ್ಚುಮರೆಯಿಲ್ಲದೆ; ಪ್ರಕಟವಾಗಿ; ಬಹಿರಂಗವಾಗಿ.
  • ಪ್ರಾಮಾಣಿಕವಾಗಿ; ನಿಜವಾಗಿ.

  • openness
    ನಾಮವಾಚಕ
  • ತೆರೆದಿರುವಿಕೆ.
  • ತಡೆಗಟ್ಟಿಲ್ಲದಿರುವಿಕೆ.
  • ಆವರಣವಿಲ್ಲದಿರುವಿಕೆ; ಮೇಲ್ಮುಚ್ಚಿಕೆಯಿಲ್ಲದಿರುವಿಕೆ.
  • ರಕ್ಷಣೆಯಿಲ್ಲದಿರುವಿಕೆ.
  • (ಮನಸ್ಸಿನ ವಿಷಯದಲ್ಲಿ) ಮುಕ್ತಗ್ರಾಹಿಯಾಗಿರುವಿಕೆ; ಭಾವನೆಗಳಿಗೆ ತೆರೆದಿರುವ ಸ್ಥಿತಿ.
  • ನಿಷ್ಕಪಟತೆ; ಪ್ರಾಮಾಣಿಕತೆ; ಸಾಚಾತನ; ಮರೆಮಾಚದ ಸ್ವಭಾವ.
  • (ಹವಾ) ಸ್ವಚ್ಛತೆ; ಹಿಮವಿಲ್ಲದಿರುವಿಕೆ.

  • openwork
    ನಾಮವಾಚಕ
    ತೆರಪು ಚಿತ್ರಗೆಲಸ; (ಲೋಹ, ಕಸೂತಿ, ಮೊದಲಾದವುಗಳಲ್ಲಿ ಮಾಡುವ) ನಡುನಡುವೆ ರಂಧ್ರಗಳುಳ್ಳ ಚಿತ್ರಾಕೃತಿ.

    opera
    ನಾಮವಾಚಕ ಪದಗುಚ್ಛ
    light opera ಲಘು ಅಪೆರ; ವಸ್ತು ಗಂಭೀರವಾಗಿರದ ಗೇಯ ನಾಟಕ.
  • ಅಪೆರಾ; ಸಂಗೀತಕ; ಗೀತನಾಟಕ; ಗೇಯರೂಪಕ; ಸಂಗೀತಪ್ರಧಾನ ನಾಟಕ.
  • ಅಪೆರಾ (ಕಲೆ); ಗೀತನಾಟಕ, ಸಂಗೀತನಾಟಕ–ಕಲೆ.
  • ಅಪೆರಾ, ಗೀತನಾಟಕ–ಮಂದಿರ, ಭವನ; ಗೀತನಾಟಕ ಪ್ರದರ್ಶಿಸುವ ಸ್ಥಳ, ಕಟ್ಟಡ.

  • opera
    ನಾಮವಾಚಕ
    opus ಪದದ ಬಹುವಚನ.

    opera buffa
    ನಾಮವಾಚಕ
    (ಮುಖ್ಯವಾಗಿ ಇಟಲಿಯ) (ಮುಖ್ಯವಾಗಿ ದಿನನಿತ್ಯದ ಪಾತ್ರಗಳನ್ನುಳ್ಳ) ಸಂಗೀತ, ಗೇಯ–ಪ್ರಹಸನ, ವೈನೋದಿಕ, ಹಾಸ್ಯನಾಟಕ.


    logo