logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leave-taking
ನಾಮವಾಚಕ
ಬೀಳ್ಗೊಳ್ಳುವಿಕೆ; ಬೀಳ್ಕೊಡುಗೆ; ವಿದಾಯ.

leaved
ಗುಣವಾಚಕ
  • ಸಪರ್ಣ; ಎಲೆಗಳಿರುವ.
  • (ಬಾಗಿಲಿನ ವಿಷಯದಲ್ಲಿ) ಕದಗಳಿರುವ.
  • (ಪುಸ್ತಕದ ವಿಷಯದಲ್ಲಿ) ಹಾಳೆಗಳಿರುವ.

  • leaven
    ನಾಮವಾಚಕ ಪದಗುಚ್ಛ
    the old leaven ಪ್ರಾಕೃತ ಯಾ ಪಾಮರ ಸ್ಥಿತಿಯ ಚಿಹ್ನೆಗಳು.
  • ಕಿಣ್ವ; ಹುದುಗು; ನಾದಿದ ಹಿಟ್ಟನ್ನು ಹುಳಿಹಿಡಿಸಲು ಯಾ ಹುಳಿಯಿಸಲು ಸೇರಿಸಿರುವ ವಸ್ತು.
  • (ಮುಖ್ಯವಾಗಿ) ಹುಳಿ ಹಿಟ್ಟು; ಹುದುಗುಹಿಟ್ಟು; ಹುಳಿ ಹಿಡಿಯಿಸುವ ಯಾ ಬರಿಸುವ ಹಿಟ್ಟು; ಹುಳಿಯಿಸುವ ಹಿಟ್ಟು.
  • (ರೂಪಕವಾಗಿ) ವ್ಯಾಪಕ ಪ್ರಭಾವ; ಹರಡಿ ಹದಗೊಳಿಸುವ, ಪರಿವರ್ತಿಸುವ ಪ್ರಭಾವ: the leaven of wit in his talk ಅವನ ಮಾತನ್ನು ಹದಗೊಳಿಸುವ ಹಾಸ್ಯೋಕ್ತಿ.
  • (ಯಾವುದಾದರೂ ಗುಣದ) ವಾಸನೆ; ಛಾಯೆ; ಬೆರಕೆ.

  • leaven
    ಸಕರ್ಮಕ ಕ್ರಿಯಾಪದ ಪದಗುಚ್ಛ
    leaven with ಹದಕೊಡುವ ವಸ್ತು ಸೇರಿಸಿ ಪರಿವರ್ತಿಸು.
  • (ನಾದಿದ ಹಿಟ್ಟಿಗೆ) ಹುದುಗುಹಾಕಿ – ಹುಳಿಹಿಡಿಸು, ಹುಳಿಯಿಸು.
  • (ರೂಪಕವಾಗಿ) ವ್ಯಾಪಿಸಿ ಪರಿವರ್ತಿಸು; ಹದಗೊಳಿಸು; ಹದಕೊಡುವ ವಸ್ತು ಸೇರಿಸಿ ಮಾರ್ಪಡಿಸು.

  • leaves
    ನಾಮವಾಚಕ
    1leaf ಪದದ ಬಹುವಚನ.

    leavings
    ನಾಮವಾಚಕ
    (ಬಹುವಚನ) (ಮುಖ್ಯವಾಗಿ ನಿರುಪಯುಕ್ತವಾದ) ಮಿಕ್ಕದ್ದು; ಉಳಿಕೆ; ಶೇಷ; ಎಂಜಲು; ಉಚ್ಛಿಷ್ಟ; ಅವಶಿಷ್ಟ.

    Lebanese
    ಗುಣವಾಚಕ
    ಲೆಬನೀಸ್‍; ಮಧ್ಯ ಪ್ರಾಚ್ಯದ ಲೆಬನನ್‍ ದೇಶದ ಯಾ ಅದಕ್ಕೆ ಸಂಬಂಧಿಸಿದ.

    Lebanese
    ನಾಮವಾಚಕ
    (ಬಹುವಚನ ಅದೇ) ಲೆಬನೀಸ್‍; ಲೆಬನಾನಿಗ:
  • ಲೆಬನನ್‍ನಲ್ಲಿ ಹುಟ್ಟಿದವ; ಲೆಬನನ್‍ ರಾಷ್ಟ್ರೀಯ.
  • ಲೆಬನೀಸ್‍ ಮೂಲದವ.

  • Lebensraum
    ನಾಮವಾಚಕ
    ಜೀವಾವಕಾಶ; ಜರ್ಮನರು ತಮ್ಮ ಸಹಜ ಬೆಳವಣಿಗೆಗೆ ಆವಶ್ಯಕವೆಂದು ಭಾವಿಸಿದ ಭೂ ಪ್ರದೇಶ, ಕ್ಷೇತ್ರ.

    lech
    ಅಕರ್ಮಕ ಕ್ರಿಯಾಪದ
    (ಆಡುಮಾತು)
  • ಕಾಮಿ, ಕಾಮುಕ – ಆಗಿರು.
  • ಕಾಮುಕನಾಗಿ ವರ್ತಿಸು; ಕಾಮುಕ ಭಾವನೆ ಹೊಂದಿರು.


  • logo