logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inclosure
ನಾಮವಾಚಕ
= enclosure.

include
ಸಕರ್ಮಕ ಕ್ರಿಯಾಪದ ನುಡಿಗಟ್ಟು
include out (ಆಡುಮಾತು ಯಾ ಹಾಸ್ಯ ಪ್ರಯೋಗ) (ಸ್ಪಷ್ಟವಾಗಿ ನಿರ್ದೇಶಿಸಿ) ಹೊರಚ್ಚುಮಾಡು; ಸೇರಿಸದಿರು.
  • (ಯಾವುದೇ ಪೂರ್ಣದ ಅಂಶವಾಗಿ) ಸೇರಿಸಿಕೊ; ಒಳಗೊಳ್ಳು; ಅಂತರ್ಗತಗೊಳಿಸು; ಸೇರಿಸಿಕೊಂಡಿರು; ಒಳಗೊಂಡಿರು.
  • (ಅನನ್ವಿತ ಕೃದಂತ ಪ್ರಯೋಗದಲ್ಲಿ) (ಕೃದಂತ ರೂಪದಲ್ಲಿ) ಇದನ್ನು ಸೇರಿಸಿ(ದರೆ): seven were killed including the guard ಕಾವಲುಗಾರನನ್ನೂ ಸೇರಿಸಿ, ಏಳು ಜನ ಕೊಲ್ಲಲ್ಪಟ್ಟರು.
  • ಸೇರಿದೆಯೆಂದು ಭಾವಿಸು; ಒಳಪಟ್ಟಿದೆಯೆಂದು ಎಣಿಸು; ಅಂತರ್ಗತವಾಗಿರುವಂತೆ ತಿಳಿದುಕೊ.

  • included
    ಗುಣವಾಚಕ
    ಅಂತರ್ವಿಷ್ಟ; ಅಂತರಾವಿಷ್ಟ; ಅಂತರ್ಮಿಲಿತ; ಅಂತರ್ಗತವಾದ; ಒಳಗೆ ಸೇರಿಸಿದ.

    inclusion
    ನಾಮವಾಚಕ
    ಅಂತರ್ವೇಶನ; ಒಳಗೂಡಿಸುವಿಕೆ; ಒಳಗೆ ಸೇರಿಸುವಿಕೆ.

    inclusive
    ಗುಣವಾಚಕ
  • ಒಳಗೊಂಡ; ಅಂತರ್ಗತ; ಅಂತರ್ವಿಷ್ಟ.
  • ( ಕ್ರಿಯಾವಿಶೇಷಣವಾಗಿ) ಒಳಗೊಂಡಂತೆ; ಸೇರಿ(ದಂತೆ): pages 7 to 26 inclusive 7 ರಿಂದ 26ರವರೆಗೆ ಎರಡು ಪುಟಗಳೂ ಸೇರಿ.
  • ಒಟ್ಟಾರೆಯ; ಬಹುಪಾಲು ಯಾ ಎಲ್ಲವೂ ಸೇರಿದ; ಬಹುಪಾಲನ್ನು ಯಾ ಎಲ್ಲವನ್ನೂ ಒಳಗೊಂಡ: inclusive terms ಒಟ್ಟೊಪ್ಪಂದದ ಯಾ ಒಟ್ಟು ಬೆಲೆ; (ಹೋಟೆಲ್‍ ಮೊದಲಾದವುಗಳಲ್ಲಿ) ಬಹುಪಾಲು ಅಂಶಗಳು ಯಾ ಎಲ್ಲ ಅಂಶಗಳೂ ಸೇರಿದ ಷರತ್ತುಗಳು; ಬೆಲೆ ನಮೂದಿಸಿರುವುದಕ್ಕಿಂತ ಹೆಚ್ಚೇನೂ ಕೊಡಬೇಕಾಗಿಲ್ಲದ, ತೆರಬೇಕಾಗಿಲ್ಲದ ಬೆಲೆ ಮೊದಲಾದವು.

  • inclusively
    ಕ್ರಿಯಾವಿಶೇಷಣ
    ಒಳಗೊಂಡು; ಸೇರಿಸಿಕೊಂಡು.

    inclusiveness
    ನಾಮವಾಚಕ
    ಒಳಗೊಳ್ಳುವಿಕೆ; ಅಂತರ್ವೇಶನ; ಒಳಗೂಡಿಸಿಕೊಳ್ಳುವಿಕೆ; ಒಳಗೆ ಸೇರಿಸಿಕೊಳ್ಳುವಿಕೆ.

    incog
    ಗುಣವಾಚಕ
    (ಆಡುಮಾತು) = 1incognito.

    incog
    ಕ್ರಿಯಾವಿಶೇಷಣ
    (ಆಡುಮಾತು) = 2incognito.

    incog
    ನಾಮವಾಚಕ
    (ಆಡುಮಾತು) = 3incognito.


    logo