logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

open-heartedly
ಕ್ರಿಯಾವಿಶೇಷಣ
ತೆರೆದ ಹೃದಯದಿಂದ:
  • ಮುಚ್ಚುಮರೆಯಿಲ್ಲದೆ; ನಿಷ್ಕಪಟವಾಗಿ.
  • ಸಂಶಯ ಪಡದಿರುವಂತೆ.
  • ದಯಾಪರನಾಗಿ.
  • ಸ್ನೇಹಭಾವದಿಂದ; ಸೌಹಾರ್ದದಿಂದ; ಹಾರ್ದಿಕವಾಗಿ.

  • open-heartedness
    ನಾಮವಾಚಕ
  • ಮುಚ್ಚುಮರೆಯಿಲ್ಲದಿರುವಿಕೆ; ನಿಷ್ಕಪಟತೆ; ನಿಷ್ಕಾಪಟ್ಯ.
  • ಸಂಶಯ ಪಡದಿರುವ ಗುಣ.
  • ದಯಾಪರತೆ.
  • ಸೌಹಾರ್ದ ಗುಣ; ಹಾರ್ದಿಕತೆ; ಉದಾರ ಸ್ನೇಹಭಾವ.

  • open-hearth process
    ನಾಮವಾಚಕ
    (ಉಕ್ಕು ತಯಾರಿಸಲು ಬಳಸುವ) ತೆರೆದೊಲೆ ವಿಧಾನ.

    open-minded
    ಗುಣವಾಚಕ
    ತೆರೆದ, ಮುಕ್ತ–ಮನಸ್ಸಿನ; ಪೂರ್ವಗ್ರಹವಿಲ್ಲದ, ನಿಷ್ಪಕ್ಷಪಾತವಾದ–ಮನಸ್ಸಿನ.

    open-mindedly
    ಕ್ರಿಯಾವಿಶೇಷಣ
    ತೆರೆದ, ಮುಕ್ತ, ಪೂರ್ವಗ್ರಹವಿಲ್ಲದ– ಮನಸ್ಸಿನಿಂದ.

    open-mindedness
    ನಾಮವಾಚಕ
    ತೆರೆದ, ಮುಕ್ತ–ಮನಸ್ಸು; ನಿಷ್ಪಕ್ಷಪಾತವಾದ ಮನಸ್ಸು; ಪೂರ್ವಗ್ರಹವಿಲ್ಲದ ಮನಸ್ಸಿರುವುದು.

    open-mouthed
    ಗುಣವಾಚಕ
  • (ಹೊಟ್ಟೆಬಾಕತನದಲ್ಲಿ, ಮರೆಮಾಚದ ಮಾತಿನಲ್ಲಿ) ತೆರೆದ ಬಾಯಿಯ; ಹರಕು ಬಾಯಿಯ.
  • (ಹೆಡ್ಡತನ ಯಾ ಆಶ್ಚರ್ಯ ತೋರಿಸುವ) ಬಿಟ್ಟ, ತೆರೆದ–ಬಾಯಿಯ.

  • open-plan
    ಗುಣವಾಚಕ
    (ಮನೆ, ಕಚೇರಿ, ಮೊದಲಾದವುಗಳ ವಿಷಯದಲ್ಲಿ) ವಿಶಾಲಕೋಣೆಗಳುಳ್ಳ; ದೊಡ್ಡ, ವಿಭಾಗ ಮಾಡಿಲ್ಲದ ಕೋಣೆಗಳಿರುವ.

    openable
    ಗುಣವಾಚಕ
    ತೆರೆಯಬಲ್ಲ; ಬಿಚ್ಚಬಹುದಾದ; ತೆಗೆಯಲು ಸಾಧ್ಯವಾದ.

    opencast
    ಗುಣವಾಚಕ ಪದಗುಚ್ಛ
    (ಬ್ರಿಟಿಷ್‍ ಪ್ರಯೋಗ) (ಗಣಿಯ ಯಾ ಗಣಿಗಾರಿಕೆಯ ವಿಷಯದಲ್ಲಿ) ಹೊರಮೈ ಕೆಲಸದ; ಗಣಿಯ ಒಳಕ್ಕೆ ಇಳಿಯದೆ, ಭೂಮಿಯ ಮೇಲ್ಮೈ ಪದರುಗಳನ್ನು ತೆಗೆದು ಮೇಲೆಯೇ ಕೆಲಸ ಮಾಡಬಹುದಾದ. opencast coal ಭೂಮಿಯ ಮೇಲೆಯೇ ಸಿಕ್ಕುವ ಕಲ್ಲಿದ್ದಲು.


    logo